Home> Entertainment
Advertisement

Vikrant Rona: ರಾ ರಾ ರಕ್ಕಮ್ಮ ಹುಕ್ ಸ್ಟೆಪ್ ಹಿಂದಿನ ಮಾಸ್ಟರ್‌ ಇವರೇ ನೋಡಿ..

Ra Ra Rakkamma: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಬಿಡುಗಡೆಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಸದ್ಯ, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ವಿಶ್ವಾದ್ಯಂತ ರಿಲೀಸ್‌ ಆಗಲಿರುವ ಈ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಎಲ್ಲೆಡೆ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. 

Vikrant Rona: ರಾ ರಾ ರಕ್ಕಮ್ಮ ಹುಕ್ ಸ್ಟೆಪ್ ಹಿಂದಿನ ಮಾಸ್ಟರ್‌ ಇವರೇ ನೋಡಿ..

Vikrant Rona: ಎಲ್ಲೆಡೆ ಇದೀಗ ಚಾಲ್ತಿಯಲ್ಲಿರುವುದು ಒಂದೇ ಹೆಸರು ಅದು ವಿಕ್ರಾಂತ್‌ ರೋಣ. ಇನ್ನೇನೂ ಕೆಲವೇ ದಿನಗಳಲ್ಲಿ ಬೆಳ್ಳಿ ಪರದೆ ಮೇಲೆ ಅಬ್ಬರಿಸಲಿರುವ ವಿಕ್ರಾಂತ್‌ ರೋಣ ಪ್ರಮೋಷನ್‌ ಕೆಲ ಭರ್ಜರಿಯಾಗಿ ನಡೆಯುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಬಿಡುಗಡೆಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಸದ್ಯ, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ವಿಶ್ವಾದ್ಯಂತ ರಿಲೀಸ್‌ ಆಗಲಿರುವ ಈ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಎಲ್ಲೆಡೆ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. 

ಇದನ್ನೂ ಓದಿ: Sushmita Sen: ಪಾಕ್‌ ಕ್ರಿಕೆಟರ್‌ ವಾಸಿಮ್‌ ಅಕ್ರಮ್‌ To ಲಲಿತ್‌.. ಸುಶ್ಮಿತಾ ಸೇನ್‌ ಬಾಳಲ್ಲಿ ಬಂದ 10 ಮಂದಿ

ಅದರಲ್ಲೂ ರಾ ರಾ ರಕ್ಕಮ್ಮ ಹಾಡಿನ ಹುಕ್‌ ಸ್ಟೆಪ್‌ ಅಂತೂ ಎಲ್ಲರ ಮನಗೆದ್ದಿದೆ. ಫೇಸ್‌ಬುಕ್‌, ಶೇರ್‌ಚಾಟ್‌, ಇನ್‌ಸ್ಟಾಗ್ರಾಂ ಹೀಗೆ ಯಾವ ಸೋಷಿಯಲ್‌ ಮೀಡಿಯಾ ತೆರೆದರು ರಕ್ಕಮ್ಮನದ್ದೇ ಹವಾ. ಎಲ್ಲರೂ ಈ ಹಾಡಿನ ಹುಕ್‌ ಸ್ಟೆಪ್‌ನ ರೀಲ್ಸ್‌ ಮಾಡುತ್ತಿದ್ದಾರೆ. 

ಕಿಚ್ಚ ಸುದೀಪ್‌ ಸಹ ಈ ಹುಕ್‌ ಸ್ಟೆಪ್‌ ಬಗ್ಗೆ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಈ ಮಾಸ್ಟರ್‌ ಸ್ಟೆಪ್‌ ಹಿಂದೆ ಇರುವ ಆ ಮಾಸ್ಟರ್‌ ಬಗ್ಗೆ ಇದೀಗ ಕಿಚ್ಚ ಸುದೀಪ್‌ ಟ್ವೀಟ್‌ ಮಾಡಿದ್ದಾರೆ. ರಾ ರಾ ರಕ್ಕಮ್ಮ ಮೇಕಿಂಗ್‌ ಗ್ಲಿಂಪ್ಸ್‌ ಇರುವ ವಿಡಿಯೋವನ್ನು ಸುದೀಪ್‌ ಟ್ವೀಟ್‌ ಮಾಡಿದ್ದಾರೆ. ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಅವರನ್ನು ಕಿಚ್ಚ ಈ ಹುಕ್‌ ಸ್ಟೆಪ್‌ ಹಿಂದಿನ ಮಾಸ್ಟರ್‌ ಎಂದು ಕರೆದಿದ್ದಾರೆ.

 

 

ವಿಕ್ರಾಂತ್​ ರೋಣ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್‌, ಜಾಕ್ವೆಲಿನ್‌ ಫರ್ನಾಂಡೀಸ್‌, ನಿರೂಪ್​ ಭಂಡಾರಿ, ನೀತಾ ಅಶೋಕ್ ನಟಿಸಿದ್ದು ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿದೆ. 3ಡಿ ಅವತರಣಿಕೆಯಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಶಾಲಿನಿ ಆರ್ಟ್ಸ್ ಬ್ಯಾನರ್​ ಅಡಿ ಜಾಕ್​ ಮಂಜು ಚಿತ್ರ ನಿರ್ಮಾಣ ಮಾಡಿದ್ದು, ಅಲಂಕಾರ್​ ಪಾಂಡಿಯನ್​ ಸಹ-ನಿರ್ಮಾಪಕರಾಗಿದ್ದಾರೆ.  

ಭುರ್ಜ್ ಖಲೀಫಾದಿಂದ ಶುರುವಾದ ವಿಕ್ರಾಂತ್‌ ರೋಣನ ಹವಾ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಕಿಚ್ಚ ಸುದೀಪ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್‌ ರೋಣ ಈಗಾಗಲೇ ರಿಲೀಸ್‌ ಆದ ಹಾಡು, ಟ್ರೈಲರ್‌ ಮೂಲಕ ಸಖತ್‌ ಸದ್ದು ಮಾಡುತ್ತಿದೆ. ಬಾಲಿವುಡ್‌, ಟಾಲಿವುಡ್‌ ಸೇರಿದಂತೆ ಭಾರತ ಸಿನಿರಂಗದ ಖ್ಯಾತ ನಾಮರು ವಿಕ್ರಾಂತ್‌ ರೋಣನಿಗೆ ಸಾಥ್‌ ನೀಡಿದ್ದಾರೆ.  

ವಿಕ್ರಾಂತ್‌ ರೋಣ ಸಿನಿಮಾ ಹವಾ ಎಲ್ಲೆಲ್ಲೂ ಹಬ್ಬಿದ್ದು, ಈಗಾಗಲೇ ಮೂರು ಸಾಂಗ್‌ ವಿವಿಧ ಭಾಷೆಗಳಲ್ಲಿ ರಿಲೀಸ್‌ ಆಗಿ ಯುಟ್ಯೂಬ್‌ ಟ್ರೆಂಡ್‌ ಆಗಿವೆ. ಈ ಮಧ್ಯೆ ವಿಕ್ರಾಂತ್​ ರೋಣ ಟ್ರೈಲರ್ ನೋಡಿದ ಜನರಿಗೆ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿದೆ.

ಇದನ್ನೂ ಓದಿ: ಡಾ.ಪುನೀತ್ ರಾಜಕುಮಾರ್ ರ 'ಗಂಧದ ಗುಡಿ' ಅಕ್ಟೋಬರ್ 28ಕ್ಕೆ ಬಿಡುಗಡೆ

ಅನೂಪ್‌ ಭಂಡಾರಿ ನಿರ್ದೇಶನದ ಈ ಸಿನಿಮಾ ಮೂಲಕ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡುತ್ತಿದ್ದಾರೆ. ರಕೇಲ್‌ ಡಿಕೋಸ್ಟ ಉರ್ಫ್‌ ಗಡಂಗ್‌ ರಕ್ಕಮ್ಮನಾಗಿ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದಾರೆ. ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 

ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಸುದೀಪ್‌ ಅವರೇ ಡಬ್‌ ಮಾಡಿದ್ದಾರೆ. ಇಷ್ಟೆಲ್ಲ ವಿಶೇಷತೆ ಹೊಂದಿರುವ ಈ ಸಿನಿಮಾ ಸದ್ಯ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸಹ ಸ್ಥಾನ ಪಡೆದುಕೊಂಡಿದೆ. ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ರಿಲೀಸ್‌ ಆಗಲು ಸಿದ್ಧವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More