Home> Entertainment
Advertisement

'ಒಂದೇ ಸ್ಕ್ರೀನ್ ನಲ್ಲಿ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ'!

ತಮ್ಮ ಅಭಿಮಾನಿಗಳನ್ನ ತನ್ನ ಸ್ನೇಹಿತರು ಎಂದು ಕರೆಯುವ ಸುದೀಪ್ ಚಿತ್ರರಂಗದಲ್ಲೂ ಕೂಡ ಸ್ನೇಹಜೀವಿ ಯಾಗಿದ್ದಾರೆ.

'ಒಂದೇ ಸ್ಕ್ರೀನ್ ನಲ್ಲಿ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ'!

ಬೆಂಗಳೂರು : ಸುದೀಪ್' ಅಭಿನಯ ಚಕ್ರವರ್ತಿ ಬಿರುದಿಗೆ ತಕ್ಕಂತೆ ಇವರ ಅಭಿನಯ ಎಲ್ಲರನ್ನೂ ಕಿಕ್ಕೇರಿಸುವಂತೆ ಮಾಡುತ್ತೆ. ತಮ್ಮ ಅಭಿಮಾನಿಗಳನ್ನ ತನ್ನ ಸ್ನೇಹಿತರು ಎಂದು ಕರೆಯುವ ಸುದೀಪ್ ಚಿತ್ರರಂಗದಲ್ಲೂ ಕೂಡ ಸ್ನೇಹಜೀವಿ ಯಾಗಿದ್ದಾರೆ.

'ಸುದೀಪ್ ರಕ್ಷಿತ್ ಶೆಟ್ಟಿ ಒಂದೇ ಸ್ಕ್ರೀನ್ ನಲ್ಲಿ!'

ಹೌದು  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ  ಆ್ಯಂಡ್ ಟೀಮ್ ಕ್ರಿಯೇಟಿವ್ ಕಥೆಗಳ ಮೂಲಕ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದೇ ರಕ್ಷಿತ್ ಶೆಟ್ಟಿ ಸುದೀಪ್ ರವರ ಜೊತೆ ಸಿನಿಮಾ ಮಾಡೊ ಹಂಬಲ ವ್ಯಕ್ತ ಪಡಿಸಿದ್ದರು. ಇವರ ಹಂಬಲಕ್ಕೆ ಸುದೀಪ್ ರವರು ಕೂಡ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದರು. ಇಷ್ಟೋತ್ತಿಗೆ ಸಿನಿಮಾದ ಕೆಲ ಕೆಲಸ ಶುರು ಆಗಬೇಕಿತ್ತು ಆದರೆ ಕೆಲ ಕಾರಣಗಳಿಂದ ಅದು ಸ್ಥಗಿತವಾಗಿದೆ!

ಇದನ್ನೂ ಓದಿ : ಟಾಪ್ ಫ್ಯಾಷನ್ ಡಿಸೈನರ್ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ!

ರಕ್ಷಿತ್ ಶೆಟ್ಟಿಗೆ ಸುದೀಪ್ ರವರ ನಟನೆ-ನಿರ್ದೇಶನ ಅಂದ್ರೇ ಮೊದಲಿನಿಂದಾನು ಇಷ್ಟವಂತೆ, ಮೂರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ. ಇದೀಗ ಅವರಿಗಾಗಿಯೆ ಸ್ಕ್ರಿಪ್ಟ್‌ ಒಂದನ್ನ ರೆಡಿ ಮಾಡಿಕೊಂಡಿದ್ದಾರಂತೆ. ಈ ಸುದ್ದಿ ಸುದೀಪ್ ರವರ ಗಮನಕ್ಕೂ ಕೂಡ ಬಂದಿದ್ದು ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬರೋದು ಪಕ್ಕಾ ಆಗಿದೆ.  

ಇದನ್ನೂ ಓದಿ : "ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ" ಚಿತ್ರಕ್ಕೆ ಸುಧಾಮೂರ್ತಿ ಮೆಚ್ಚುಗೆ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More