Home> Entertainment
Advertisement

ಬಾಕ್ಸ್ಆಫೀಸ್‌ನಲ್ಲಿ ಕೆಜಿಎಫ್-2 ತೂಫಾನ್: ಕೇವಲ 6 ದಿನಕ್ಕೆ 676 ಕೋಟಿ ರೂ. ಗಳಿಕೆ!

ಗಳಿಕೆ ವಿಷಯದಲ್ಲಿ 'ಕೆಜಿಎಫ್-2' ಸಿನಿಮಾ ತೂಫಾನ್‍ನಂತೆ ಮುನ್ನುಗ್ಗುತ್ತಿದೆ. ಹಳೆಯ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿ ಹೊಸ ದಾಖಲೆಯನ್ನು ಬರೆಯುತ್ತಿದೆ.

ಬಾಕ್ಸ್ಆಫೀಸ್‌ನಲ್ಲಿ ಕೆಜಿಎಫ್-2 ತೂಫಾನ್: ಕೇವಲ 6 ದಿನಕ್ಕೆ 676 ಕೋಟಿ ರೂ. ಗಳಿಕೆ!

ಬೆಂಗಳೂರು: 'ಕೆಜಿಎಫ್-2' ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿದ್ದು, ಗಳಿಕೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದುಹಾಕಿದೆ. ರಾಕಿಂಗ್ ಸ್ಟಾರ್ ಯಶ್ ಇದೀಗ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆಯುತ್ತಿದ್ದಾರೆ. ಏ.14ರಂದು ಸುಮಾರು 10 ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ರಿಲೀಸ್ ಆದ 'ಕೆಜಿಎಫ್-2' ಸಿನಿಮಾ ಗಳಿಕೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ದೇಶ-ವಿದೇಶಗಳಲ್ಲಿ 'ಕೆಜಿಎಫ್-2' ಸಿನಿಮಾಗೆ ದೊಡ್ಡ ಯಶಸ್ಸು ಸಿಕ್ಕಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ‘ಸಲಾಂ ರಾಕಿಭಾಯ್’ ಎಂದಿದ್ದಾರೆ.

ಯಶ್ ವೃತ್ತಿಜೀವನಕ್ಕೆ ಬಹುದೊಡ್ಡ ಯಶಸ್ಸು ತಂದುಕೊಟ್ಟ 'ಕೆಜಿಎಫ್-2' ಮೇಕಿಂಗ್ ಕಂಡು ಪ್ರತಿಯೊಬ್ಬ ಪ್ರೇಕ್ಷಕರು ವಾವ್ಹ್ ಎಂದಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾಗೆ ತಲೆಬಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಮತ್ತೊಮ್ಮೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: KGF Chapter 2 Records: ನಾಲ್ಕೇ ದಿನದಲ್ಲಿ 29 ದಾಖಲೆ ಬರೆದ ಕೆಜಿಎಫ್ ಚಾಪ್ಟರ್​ 2

ಕೇವಲ 6 ದಿನಕ್ಕೆ 676 ಕೋಟಿ ರೂ. ಗಳಿಕೆ!

ಬಿಡುಗಡೆಯಾದ ಎಲ್ಲಾ ಕಡೆಯೂ ಭರ್ಜರಿ ಓಪನಿಂಗ್ ಪಡೆದುಕೊಂಡ 'ಕೆಜಿಎಫ್-2' ಗಲ್ಲಾಪೆಟ್ಟಿಯಲ್ಲಿ ಅನೇಕ ದಾಖಲೆ ನಿರ್ಮಿಸಿದೆ. ಕೇವಲ 6 ದಿನಕ್ಕೆ ಈ ಚಿತ್ರ ಬರೋಬ್ಬರಿ 676 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾದ ಈ ಚಿತ್ರ ಇಂದು ಸಹ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಕೆಲವು ಕಡೆ ಸಿನಿಮಾ ನೋಡಲು ಅಭಿಮಾನಿಗಳಿಗೆ ಟಿಕೆಟ್ ಸಿಗುತ್ತಿಲ್ಲ. ಅನೇಕರು ಸಾವಿರಾರು ರೂ. ತೆತ್ತು ಬ್ಲಾಕ್ ಟಿಕೆಟ್‍ನಲ್ಲಿ ಸಿನಿಮಾ ನೋಡುತ್ತಿದ್ದಾರೆ.

'ಕೆಜಿಎಫ್-2' ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ ಎಂದು ಖ್ಯಾತ ಚಿತ್ರ ವಿಮರ್ಶಕ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. ಚಿತ್ರದ ಒಟ್ಟಾರೆ ಗಳಿಕೆ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ದಿನ 165.37 ಕೋಟಿ ರೂ., 2ನೇ ದಿನ 139.25 ಕೋಟಿ ರೂ., 3ನೇ ದಿನ 115.08 ಕೋಟಿ ರೂ., 4ನೇ ದಿನ 132.13 ಕೋಟಿ ರೂ., 5ನೇ ದಿನ 73.29 ಕೋಟಿ ರೂ. ಹಾಗೂ 6ನೇ ದಿನವಾದ ಮಂಗಳವಾರ 51.68 ಕೋಟಿ ರೂ. ಗಳಿಕೆ ಸೇರಿ ಒಟ್ಟು 676.80 ಕೋಟಿ ರೂ. ಗಳಿಸಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.  

ಇದನ್ನೂ ಓದಿ: ಕೆಜಿಎಫ್ 2 ಚಿತ್ರದ ಯಶಸ್ಸಿನ ನಂತರ ರಜನಿಕಾಂತ್ ಪುತ್ರಿ ಹೇಳಿದ್ದೇನು ಗೊತ್ತೇ?

ಹಿಂದಿಯಲ್ಲಿ ದಾಖಲೆ ಗಳಿಕೆ!

ಮತ್ತೊಬ್ಬ ಸಿನಿಮಾ ವಿಶ್ಲೇಷಕ ತರುಣ್ ಆದರ್ಶ್ ಟ್ವೀಟ್ ಮಾಡಿದ್ದು, ‘ಕೆಜಿಎಫ್-2' ಹಿಂದಿ ಅವತರಣಿಕೆಯಲ್ಲಿ ಚಿತ್ರ ಬಿಡುಗಡೆಯಾದ 6 ದಿನಗಳಲ್ಲಿ ಒಟ್ಟು 238 ಕೋಟಿ ರೂ. ಗಳಿಸಿದೆ. 7ನೇ ದಿನವಾದ ಇಂದು(ಬುಧವಾರ) 250 ಕೋಟಿ ರೂ. ಕ್ಲಬ್ ಸೇರುವುದು ಖಚಿತ ಎಂದು. ಇದು ನಿಜವಾದಲ್ಲಿ ಅತಿವೇಗವಾಗಿ 250 ಕೋಟಿ ರೂ. ಗಳಿಸಿದ ದಾಖಲೆಯನ್ನು ಕೆಜಿಎಫ್-2 ಮಾಡಲಿದೆ’ ಎಂದು ಅವರು ಹೇಳಿದ್ದಾರೆ.

ಗಳಿಕೆ ವಿಷಯದಲ್ಲಿ 'ಕೆಜಿಎಫ್-2' ಸಿನಿಮಾ ತೂಫಾನ್‍ನಂತೆ ಮುನ್ನುಗ್ಗುತ್ತಿದೆ. ಹಳೆಯ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿ ಹೊಸ ದಾಖಲೆಯನ್ನು ಬರೆಯುತ್ತಿದೆ. ದೇಶ ಮಾತ್ರವಲ್ಲದೆ ವಿದೇಶದಲ್ಲಿಯೂ ‘ರಾಕಿ’ ಅಬ್ಬರ ಜೋರಾಗಿದೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More