Home> Entertainment
Advertisement

KGF Chapter 2 trailer Out : ರಕ್ತ ಸಿಕ್ತ ಜಗತ್ತಿನ ಚಿತ್ರಣ ಅನಾವರಣಗೊಳಿಸುವ ಕೆಜಿಎಫ್ 2 ಚಿತ್ರದ ಟ್ರೈಲರ್

ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್: 2 ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದ್ದು. ಚಿತ್ರದ ಟ್ರೈಲರ್ ರಾಕಿ ಮತ್ತು ಅಧೀರ ನಡುವಿನ ಮಹಾ ಸಂಘರ್ಷದ ಸುತ್ತ ಸುತ್ತುತ್ತದೆ.

 KGF Chapter 2 trailer Out : ರಕ್ತ ಸಿಕ್ತ ಜಗತ್ತಿನ ಚಿತ್ರಣ ಅನಾವರಣಗೊಳಿಸುವ ಕೆಜಿಎಫ್ 2 ಚಿತ್ರದ ಟ್ರೈಲರ್

ಬೆಂಗಳೂರು: ಇಡೀ ಭಾರತೀಯ ಸಿನಿ ಜಗತ್ತಿನ ಕುತೂಹಲ ಕೆರಳಿಸಿದ್ದ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್: 2 ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದ್ದು. ಈ ಚಿತ್ರದ ಟ್ರೈಲರ್ ರಾಕಿ ಮತ್ತು ಅಧೀರ ನಡುವಿನ ಮಹಾ ಸಂಘರ್ಷದ ಸುತ್ತ ಸುತ್ತುತ್ತದೆ.

ಟ್ರೈಲರ್ ನಲ್ಲಿ ಯಶ್‌ನ ಅಧಿಪತ್ಯಕ್ಕೆ ಮತ್ತೊಮ್ಮೆ ಬೆದರಿಕೆ ಬಂದಿರುವುದರಿಂದ ಯುದ್ಧದ ಸ್ಥಿತಿ ನಿರ್ಮಾಣವಾಗುವುದನ್ನು ಕಾಣಬಹುದು. ಇನ್ನೊಂದೆಡೆ ಗರುಡನ ಮರಣದ ನಂತರ, ಅಧೀರನು ಗಣಿಗಳು ತನ್ನವು ಎಂದು ಹಕ್ಕು ಸಾಧಿಸಲು ಮುಂದಾಗುತ್ತಾನೆ. ಆದರೆ ಈ ಸಂದರ್ಭದಲ್ಲಿ ರಾಕಿ ಇದನ್ನು ಒಪ್ಪುವ ಮನಸ್ಥಿತಿಯಲ್ಲಿ ಇರುವುದಿಲ್ಲ. ಒಮ್ಮೆ ತನ್ನ ತಾಯಿಗೆ ಪ್ರಪಂಚದ ಎಲ್ಲಾ ಸಂಪತ್ತನ್ನು ಭರವಸೆ ನೀಡಿದ ಹುಡುಗ ತನ್ನ ಸ್ವಂತದ್ದನ್ನು ಪಡೆಯಲು ತನ್ನ ಕೊನೆಯ ಉಸಿರು ಇರುವವರೆಗೂ ಹೋರಾಡಲು ಮುಂದಾಗುತ್ತಾನೆ.

ಇದನ್ನೂ ಓದಿ: KGF Chapter 2: ಯಶ್ ಅಭಿನಯದ ಕೆಜಿಎಫ್ 2 ಚಿತ್ರವನ್ನು ಕನಸಿನಲ್ಲಿ ನೋಡಿದೆ ಎಂದ ವಿದೇಶಿ ಅಭಿಮಾನಿ..!

ಹೀಗಾಗಿ ಯುದ್ಧವು ಭೂಮಿ, ವಾಯು, ಹಾಗೂ ನೀರಿನ ಮೇಲೆ ನಡೆಯುವುದನ್ನು ಟ್ರೈಲರ್ ನಲ್ಲಿ ಚಿತ್ರಿಸಲಾಗಿದೆ. ಕೆಜಿಎಫ್ 2 (KGF 2) ಟ್ರೇಲರ್‌ನಲ್ಲಿನ ದೃಶ್ಯಗಳು ಹಿಂಸಾಚಾರವನ್ನು ಕೇಂದ್ರೀಕರಿಸಿರುವುದು ಚಿತ್ರದ ವೈಭವನ್ನು ಉತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಇನ್ನೊಂದೆಡೆಗೆ ರಾಜಕೀಯ ನಾಯಕಿಯಾಗಿರುವ ರವೀನಾ ಟಂಡನ್ ಅವರು ಈ ಬೃಹತ್ ಯುದ್ಧದಲ್ಲಿ ಪ್ರಮುಖ ಪ್ಲೇಯರ್ ಆಗುವ ಮೂಲಕ ಸಂಘರ್ಷಕ್ಕೆ ಕೊನೆ ಹಾಡುವ ಭರವಸೆ ನೀಡುತ್ತಾರೆ. ಅಂತಿಮ ಹಂತದ ಈ ಹೋರಾಟದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದನ್ನು ತಿಳಿಯಲು ನಾವು ಸಿನಿಮಾ ಬಿಡುಗಡೆಯಾಗುವವರೆಗೆ ಕಾಯಬೇಕಾಗಿದೆ.

ಇದನ್ನೂ ಓದಿ: KGF Chapter 2: ಯಶ್ ಫ್ಯಾನ್ಸ್‌ಗೆ ಸಿಕ್ತು ಗುಡ್ ನ್ಯೂಸ್, ಬಾಕ್ಸ್ ಆಫೀಸ್ ಶೇಕ್ ಮಾಡಲು ‘ರಾಕಿ ಬಾಯ್’ ಸಜ್ಜು!

2018 ರಲ್ಲಿ ಬಿಡುಗಡೆಯಾದ ಕೆಜಿಎಫ್ 1 ನಲ್ಲಿ, ಶ್ರೀಮಂತರಾಗುವುದು ಒಬ್ಬರ ಶಕ್ತಿಯೊಂದಿಗೆ ನೇರವಾಗಿ ಸಂಬಂಧ ಹೊಂದಿದೆ ಎನ್ನುವ ಸಂಗತಿಯನ್ನು ರಾಕಿ ಕಲಿತಿದ್ದು ಹೇಗೆ ಎಂಬುದನ್ನು ನಾವು ನೋಡಿದ್ದೇವೆ. ಬಡತನದಲ್ಲಿ ಹುಟ್ಟಿ, ಹಣ, ಮತ್ತು ರಾಜಕೀಯದ ಹುಡುಕಾಟ, ಅಧಿಕಾರವನ್ನು ಗಳಿಸುವ ಮಾರ್ಗವಾಗಿ, ಅವರನ್ನು ಕೋಲಾರದ ಚಿನ್ನದ ಗಣಿಗಳಿಗೆ ಕರೆದೊಯ್ಯುತ್ತದೆ. ನೂರಾರು ಜನರನ್ನು ಗುಲಾಮರನ್ನಾಗಿ ಮಾಡಿದ ಕ್ರೂರನನ್ನು ಕೊಲ್ಲುವ ಮೂಲಕ ಅವನು ಭೂಮಿಯನ್ನು ವಶಪಡಿಸಿಕೊಳ್ಳುತ್ತಾನೆ.

ಇದನ್ನೂ ಓದಿ: Toofan Lyrical Video: 'ಕೆಜಿಎಫ್​​ 2' ಚಿತ್ರದ ಮೊದಲ ಲಿರಿಕಲ್​ ವಿಡಿಯೋ ರಿಲೀಸ್​

ಕೆಜಿಎಫ್ 1 ಚಿತ್ರವು ₹ 80 ಕೋಟಿ ಬಜೆಟ್‌ನಲ್ಲಿ ಚಿತ್ರೀಕರಿಸಲಾಗಿತ್ತು, ಈ ಚಿತ್ರವು ದಕ್ಷಿಣ ಭಾರತ ಮತ್ತು ಹಿಂದಿ ಬೆಲ್ಟ್‌ನಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿತು. ಈಗ ಬಿಡುಗಡೆಯಾಗಿರುವ ಕೆಜಿಎಫ್ 2 ಟ್ರೈಲರ್ ನೋಡಿದಾಗ ಈ ಚಿತ್ರವೂ ಒಂದು ರೀತಿ ಹಾಲಿವುಡ್ ಸಿನಿಮಾದಂತೆ ಭಾಸವಾಗುತ್ತದೆ. ಚಿತ್ರದಲ್ಲಿ ಯಶ್,ಸಂಜಯ ದತ್ (Sanjay Dutt) ,ರವೀನಾ ಟಂಡನ್, ಪ್ರಕಾಶ್ ರಾಜ್, ಶ್ರೀನಿಧಿ ಶೆಟ್ಟಿ, ವಸಿಷ್ಠ ಸಿಂಹ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತ ಮತ್ತು ಭುವನ್ ಗೌಡ ಅವರ ಛಾಯಾಗ್ರಹಣವಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Read More