Home> Entertainment
Advertisement

ಶೀಘ್ರದಲ್ಲೇ ಜೀ ಕನ್ನಡದಲ್ಲಿ ಅಬ್ಬರಿಸಲಿದ್ದಾನೆ ರಾಕಿ ಭಾಯ್...!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಭಾರತೀಯ ಚಲನಚಿತ್ರ ರಂಗದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ ಸಿನಿಮಾ ಎಂದು ಹೇಳಬಹುದು.

ಶೀಘ್ರದಲ್ಲೇ ಜೀ ಕನ್ನಡದಲ್ಲಿ ಅಬ್ಬರಿಸಲಿದ್ದಾನೆ ರಾಕಿ ಭಾಯ್...!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಭಾರತೀಯ ಚಲನಚಿತ್ರ ರಂಗದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ ಸಿನಿಮಾ ಎಂದು ಹೇಳಬಹುದು.

ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳೆಂದರೆ ಚಿಕ್ಕ ಮಾರುಕಟ್ಟೆ ಎನ್ನುವ ಜಮಾನಾ ಇದ್ದ ಸಂದರ್ಭದಲ್ಲಿ ಅದೆಲ್ಲವನ್ನು ಹುಸಿ ಮಾಡಿದ ಹೆಗ್ಗಳಿಕೆಯನ್ನು ಈ ಸಿನಿಮಾ ಹೊಂದಿದೆ.ಬಾಕ್ಸ್ ಆಫೀಸ್ ನಲ್ಲಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕುವ ಮೂಲಕ ಈಗ ಚಂದನವನದ ಹಿರಿಮೆಯನ್ನು ಜಗದಲ ಹಬ್ಬಸಿದ ಕೀರ್ತಿಯೂ ಈ ಚಿತ್ರಕ್ಕಿದೆ.

ಇದನ್ನೂ ಓದಿ: ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ ಶೇರ್ ಮಾಡಿದ ಐಎಎಸ್ ಅಧಿಕಾರಿ..! ಟ್ವಿಟ್ಟರ್ ನಲ್ಲಿ ಏನಂದ್ರು ಗೊತ್ತಾ ಫಾಲೋವರ್ಸ್

ಹೌದು, ಈ ಚಿತ್ರದ ಯಶಸ್ಸನ್ನು ನೋಡಿದ ಬಾಲಿವುಡ್ ಮಂದಿಗೆಲ್ಲಾ ಇದೊಂದು ರೀತಿ ಅಚ್ಚರಿಯನ್ನು ಮೂಡಿಸಿತ್ತು, ಬಾಕ್ಸ್ ಆಫೀಸ್ ನಲ್ಲಿ 1240 ಕೋಟಿ ಅಧಿಕ ಕಲೆಕ್ಷನ್ ಮಾಡುವ ಮೂಲಕ ಸಿನಿ ವಿಮರ್ಶಕರನ್ನು ಸಹ ಹುಬ್ಬೇರಿಸುವಂತೆ ಮಾಡಿತ್ತು.ರಾಕಿಂಗ್ ಸ್ಟಾರ್ ಯಶ್ ಅಭಿನಯ, ಪ್ರಶಾಂತ್ ನೀಲ್ ಅವರ ಮೇಕಿಂಗ್ ಸ್ಟೈಲ್ ಹಾಗೂ ಚಿತ್ರದ ಶ್ರೀಮಂತಿಕೆ ಎಲ್ಲವೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಸಾರ್ವಕಾಲಿಕ ಹಿಟ್ ಸಿನಿಮಾಗಳಲ್ಲಿ  ಸ್ಥಾನ ಪಡೆಯುವಂತೆ ಮಾಡಿತ್ತು.

ಏಪ್ರಿಲ್ 14 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾದ ಸಿನಿಮಾ ಸತತ 50 ದಿನಗಳ ಕಾಲ ಬೆಳ್ಳಿ ಪರದೆಯಲ್ಲಿ ಹಾಲಿವುಡ್, ಬಾಲಿವುಡ್ ಘಟಾನುಘಟಿಗಳ ಚಿತ್ರಗಳ ಬಿಡುಗಡೆ ನಡುವೆಯೂ ಯಶಸ್ವಿಯಾಗಿ ಪ್ರದರ್ಶನವನ್ನು ಕಂಡಿತ್ತು,ಇದಾದ ನಂತರ ಒಟಿಟಿಯಲ್ಲಿಯೂ ಬಿಡುಗಡೆಯಾಗಿ ಹೊಸ ದಾಖಲೆಯನ್ನು ನಿರ್ಮಿಸಿತ್ತು.

ಇದನ್ನೂ ಓದಿ: Udupi : ಚಾಕಲೇಟ್ ನುಂಗಿ ಉಸಿರುಗಟ್ಟಿ 6 ವರ್ಷದ ಬಾಲಕಿ ಸಾವು!

ಇಂತಹ ಬ್ಲಾಕ್ ಬಸ್ಟರ್ ಸಿನಿಮಾದ ಸ್ಯಾಟ್ಲೈಟ್ ಹಕ್ಕನ್ನು ಪಡೆದ ಜೀ ಸಂಸ್ಥೆ ಶೀಘ್ರದಲ್ಲೇ ಜೀ ಕನ್ನಡ ವಾಹಿನಿಯಲ್ಲಿ ಕೆಜಿಎಫ್ 2 ಚಿತ್ರವನ್ನು ಪ್ರಸಾರ ಮಾಡುತ್ತಿದೆ.ಈ ಬಗ್ಗೆ ಪ್ರೋಮೋ ಹಂಚಿಕೊಂಡಿರುವ ಜೀ ಕನ್ನಡ ವಾಹಿನಿ, "‘ಪ್ರಪಂಚದಲ್ಲಿರೋ ಬಂಗಾರನೆಲ್ಲ ಅಮ್ಮನಿಗೆ ತಂದುಕೊಡೋ ಧೀರ ಸುಲ್ತಾನ ನಿಮ್ಮನೆ ಪರದೆಯಲ್ಲೂ ಬರ್ತಿದ್ದಾನೆ.ಕೆಜಿಎಫ್ ಚಾಪ್ಟರ್-2 ಅತಿ ಶೀಘ್ರದಲ್ಲಿ’ ಎಂದು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಬರೆದುಕೊಂಡಿದೆ.

ಈ ಸುದ್ದಿ ಈಗ ಅಧಿಕೃತವಾಗಿರುವ ಬೆನ್ನಲ್ಲೇ ಅಭಿಮಾನಿಗಳು ಕಿರುತೆರೆಯಲ್ಲಿ ಕೆಜಿಎಫ್ 2 ಚಿತ್ರವನ್ನು ಕಣ್ಣು ತುಂಬಿಕೊಳ್ಳಲು ಪ್ರೇಕ್ಷಕರು ತುದಿಗಾಲಲ್ಲಿ ಕಾಯ್ದು ಕುಳಿತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More