ಬಿಡುಗಡೆಗೆ ಮೊದಲೇ ಸಖತ್ ಹವಾ ಸೃಷ್ಟಿಸಿತ್ತು ಕೆಜಿಎಫ್ 2. ರಿಲೀಸ್ಗೂ ಮೊದಲೇ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುವ ಜೊತೆ ಹಲವು ದಾಖಲೆ ಬರೆಯಲಿದೆ ಎಂಬುದನ್ನು ಊಹಿಸಲಾಗಿತ್ತು. ಏ.14ರ ಗುರುವಾರ ಬಿಡುಗಡೆಯಾದ ಕೆಜಿಎಫ್ 2 ದಿನದಿಂದ ದಿನಕ್ಕೆ ಬಾಕ್ಸ್ ಆಫೀಸಿನಲ್ಲಿ ತನ್ನ ನಾಗಲೋಟವನ್ನು ದಾಖಲಿಸುತ್ತಲೇ ಇದೆ.
ಇದನ್ನೂ ಓದಿ: The Kashmir Files:ಅತೀ ಶೀಘ್ರದಲ್ಲೇ OTT ಅಲ್ಲಿ ದಿ ಕಾಶ್ಮೀರ ಫೈಲ್ಸ್ ರಿಲೀಸ್!
ಕನ್ನಡ ಸಿನಿಮಾವೊಂದು ವಿಶ್ವಮಟ್ಟದಲ್ಲಿ ಈ ರೀತಿ ಹವಾ ಮಾಡುತ್ತಿರುವುದು ಅನೇಕ ಸಿನಿಮಾ ರಂಗದ ನಿರ್ಮಾಪಕರಿಗೆ ಹೊಸದೊಂದು ಮಾರ್ಗ ಕಾಣಿಸಿದಂತಾಗಿದೆ. ಈ ಸಿನಿಮಾ ಮುಟ್ಟಿದ್ದೆಲ್ಲ ರೆಕಾರ್ಡ್ ಆಗುತ್ತಿದೆ. ಐದು ಭಾಷೆಗಳಲ್ಲಿ ರಿಲೀಸ್ ಆದ ಈ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 29 ದಾಖಲೆಗಳನ್ನು ಬರೆದಿದೆ.
ಕೆಜಿಎಫ್ ಚಾಪ್ಟರ್ 2 ಸ್ಯಾಂಡಲ್ವುಡ್ ಹಾಗೂ ಬಾಲಿವುಡ್ನಲ್ಲಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು ಕೆಲವೇ ದಿನಗಳಲ್ಲಿಈ ಚಿತ್ರ ಬಾಲಿವುಡ್ ಮಾರುಕಟ್ಟೆಯಿಂದ 300 ಕೋಟಿ ಕಮಾಯಿ ಮಾಡಲಿದೆ ಎಂಬುದು ಅನೇಕರ ಊಹೆಯಾಗಿದೆ.
29 ದಾಖಲೆ ಬರೆದ ಕೆಜಿಎಫ್ ಚಾಪ್ಟರ್ 2:
ಇದನ್ನೂ ಓದಿ: ಕೆಜಿಎಫ್2 ನಲ್ಲಿ ಮಾಯವಾದ ಕೆಜಿಎಫ್1 ರ ಈ 4 ಪಾತ್ರಗಳು!
ಗಲ್ಲಾಪೆಟ್ಟಿಗೆಯಲ್ಲಿ ಕೆಜಿಎಫ್ ಚಿತ್ರವು ಇದುವರೆಗೆ ಎಲ್ಲಾ ಭಾಷೆಯ ಆವೃತ್ತಿಗಳಲ್ಲಿ ಕೇವಲ ನಾಲ್ಕನೇ ದಿನಕ್ಕೆ ಬರೋಬ್ಬರಿ 552 ಕೋಟಿ.ರೂ ಗಳನ್ನು ಬಾಚಿಕೊಂಡಿದೆ. ಇದಲ್ಲದೆ, ಸಿನಿಮಾ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ವಾರಾಂತ್ಯದಲ್ಲಿ ವಿಶ್ವದಲ್ಲೇ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿರುವ ಚಿತ್ರದಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ.
ಇನ್ನೊಂದು ವಿಶೇಷವೆಂದರೆ ಈ ಸಿನಿಮಾ ಎಪ್ರಿಲ್ 15 ರಿಂದ 17 ರ ವರೆಗೆ ಜಾಗತಿಕ ಟಾಪ್ 10 ಚಲನಚಿತ್ರಗಳ ಕಾಮ್ಸ್ಕೋರ್ ಪಟ್ಟಿಯು ಕೆಜಿಎಫ್ 2 ಅನ್ನು ಎರಡನೇ ಸ್ಥಾನದಲ್ಲಿದೆ ಎನ್ನಲಾಗಿದೆ. ಕಾಮ್ಸ್ಕೋರ್ ಒಂದು ಅಮೇರಿಕನ್ ಮಾಧ್ಯಮ ಮಾಪನ ಮತ್ತು ವಿಶ್ಲೇಷಣಾ ಕಂಪನಿಯಾಗಿದ್ದು ಅದು ಮಾರುಕಟ್ಟೆ ಡೇಟಾ ಮತ್ತು ವಿಶ್ಲೇಷಣೆಗಳನ್ನು ಒದಗಿಸುತ್ತದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವೂ ಕೆಜಿಎಫ್ 1 ರ ಮುಂದಿನ ಅನುಸರಣೆಯಾಗಿದ್ದು, ಗ್ಯಾಂಗ್ ಸ್ಟಾರ್ ಆಗಿರುವ ರಾಕಿ ಕೆಜಿಎಫ್ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದು ಸಾವನ್ನಪ್ಪುವುದನ್ನು ಕೆಜಿಎಫ್ 2 ಭಾಗವು ಹೇಳುತ್ತದೆ.ಚಿತ್ರದ ಪ್ರಮುಖ ತಾರಾಗಣದಲ್ಲಿ ಯಶ್,ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ಜಾನ್ ಕೊಕ್ಕೆನ್ ಮತ್ತು ಸರಣ್ ಕಾಣಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.