Home> Entertainment
Advertisement

KGF: Chapter 2: ಕನ್ನಡದ ‘ರಾಕಿ’ ಅಬ್ಬರಕ್ಕೆ ಬಾಲಿವುಡ್ ಶೇಕ್ ಶೇಕ್..!

ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಅವರ ಖಡಕ್ ಲುಕ್‍ಗೆ​ ಸಿನಿಪ್ರಿಯರು ಫಿದಾ ಆಗಿದ್ದಾರೆ.

KGF: Chapter 2: ಕನ್ನಡದ ‘ರಾಕಿ’ ಅಬ್ಬರಕ್ಕೆ ಬಾಲಿವುಡ್ ಶೇಕ್ ಶೇಕ್..!

ಬೆಂಗಳೂರು: ಖಡಕ್ ಲುಕ್, ಜಬರ್ದಸ್ತ್​ ಡೈಲಾಗ್​ಗಳ ಮೂಲಕ ವಿಶ್ವದಾದ್ಯಂತ ಆರ್ಭಟಿಸಿದ್ದ ರಾಕಿ ಭಾಯ್​ ಅಬ್ಬರದ ಎಂಟ್ರಿಗೆ ಇಡೀ ಬಾಲಿವುಡ್ ಶೇಕ್ ಶೇಕ್ ಆಗಿದೆ. ಪೋಸ್ಟರ್,​ ಟೀಸರ್ ಮತ್ತು ಟ್ರೇಲರ್ ಮೂಲಕ ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ‘ಕೆಜಿಎಫ್: ಚಾಪ್ಟರ್ 2’ ದೇಶ-ವಿದೇಶಗಳಲ್ಲಿ ಭರ್ಜರಿ ಹವಾ ಸೃಷ್ಟಿಸಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ರಾಕಿ ಭಾಯ್ ಅಬ್ಬರ ಜೋರಾಗಿದೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಅವರ ಖಡಕ್ ಲುಕ್‍ಗೆ​ ಸಿನಿಪ್ರಿಯರು ಫಿದಾ ಆಗಿದ್ದಾರೆ. ರಾಕಿ ಅಬ್ಬರಕ್ಕೆ ಕೇವಲ ಬಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ಬಾಕ್ಸ್‍ ಆಫೀಸ್ ಉಡೀಸ್ ಆಗಿದೆ. ಕಲೆಕ್ಷನ್‍ನಲ್ಲಿ ‘ಕೆಜಿಎಫ್-2’ ಹೊಸ ದಾಖಲೆಯನ್ನೇ ಸೃಷ್ಟಿಸುತ್ತಿದೆ. ಸಿನಿಮಾ ನೋಡಿದ ಬಾಲಿವುಡ್ ಮಂದಿ ಬಾಯ್ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ವೀರೇಶ್ ಥಿಯೇಟರ್​ನಲ್ಲಿ ಮಹಾ ಯಡವಟ್ಟು.. ಕೆಜಿಎಫ್ 2 ಬದಲು ಕೆಜಿಎಫ್ 1 ರಿಲೀಸ್!

ರಾಮ್‍ ಗೋಪಾಲ್ ವರ್ಮಾ ಟ್ವೀಟ್

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದು, ‘ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಕನ್ನಡದ ಡಬ್ಬಿಂಗ್ ಚಿತ್ರ #KGF-2 ಮತ್ತು ತೆಲುಗಿನ ಡಬ್ಬಿಂಗ್ ಚಿತ್ರ #ಬಾಹುಬಲಿ-2 ಹೇಗೆ ಬಾಕ್ಸ್‍ ಆಫೀಸ್‍ನಲ್ಲಿ ದಾಖಲೆ ಬರೆದಿವೆ ನೋಡಿ’ ಎಂದು ಹೇಳಿದ್ದಾರೆ. ಬಿಡುಗಡೆಯಾದ ಮೊದಲ ದಿನವೇ ಅತಿಹೆಚ್ಚು ಗಳಿಕೆ ಮಾಡಿರುವ 10 ಸಿನಿಮಾಗಳ ಸ್ಕ್ರೀನ್‍ಶಾಟ್ ಅನ್ನು ಅವರು ಹಂಚಿಕೊಂಡಿದ್ದಾರೆ. ಈ ಪೈಕಿ ಕೆಜಿಎಫ್-2 ಮೊದಲ ದಿನವೇ 38-39 ಕೋಟಿ ರೂ. ಗಳಿಸಿದ್ದರೆ, ‘ಬಾಹುಬಲಿ-2’ 37.53 ಕೋಟಿ ರೂ. ಗಳಿಕೆ ಮಾಡಿವೆ. ನಂತರದ ಸ್ಥಾನಗಳಲ್ಲಿ ಬಾಲಿವುಡ್ ಸಿನಿಮಾಗಳಿವೆ. ಕೆಜಿಎಫ್-2 ಕೇವಲ ಬಾಲಿವುಡ್ ಮಾತ್ರವಲ್ಲ ಡಬ್ ಆದ ಎಲ್ಲಾ ಭಾಷೆಗಳಲ್ಲಿಯೂ ಸೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್‍ನಲ್ಲಿ ಹೊಸ ದಾಖಲೆ ಬರೆದಿದೆ.

ರಾಕಿಂಗ್ ಸ್ಟಾರ್ ಯಶ್ ಆರ್ಭಟಕ್ಕೆ ಇಡೀ ಬಾಲಿವುಡ್ ಮಂದಿ ಬೆಚ್ಚಿಬಿದ್ದಿದ್ದಾರೆ. ಹಾಲಿವುಡ್‍ ಲೇವಲ್‍ನಲ್ಲಿ ಕನ್ನಡ ಸಿನಿಮಾವೊಂದು ಈ ಪರಿ ಸೌಂಡ್ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ದೇಶ-ವಿದೇಶಗಳಲ್ಲಿಯೂ ಕೆಜಿಎಫ್-2 ಸಿನಿಮಾವನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ರಾಕಿ ಭಾಯ್ ಮತ್ತು ಅಧೀರನ ಕಾಳಗವನ್ನು ಕಣ್ತುಂಬಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಚಿತ್ರದ ಕೊನೆಯಲ್ಲಿ ‘ಕೆಜಿಎಫ್: ಚಾಪ್ಟರ್ 3’ ಕೂಡ ಬರಲಿದೆ ಎಂಬ ಹಿಂಟ್ ನೀಡಲಾಗಿದ್ದು, ಅದಕ್ಕಾಗಿ ಈಗ ಅಭಿಮಾನಿಗಳು ಕಾಯುವಂತಾಗಿದೆ.

ಇದನ್ನೂ ಓದಿ: KGF 2: ತೆರೆಯಲ್ಲಿ ಅಬ್ಬರಿಸಿದ ʼಜ್ಯೂನಿಯರ್‌ ರಾಕಿಭಾಯ್‌ʼ: ಕೆಜಿಎಫ್‌ ಬಗ್ಗೆ ಅನ್ಮೋಲ್‌ ಹೀಗೆ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More