Home> Entertainment
Advertisement

'ಕೆ.ಜಿ.ಎಫ್-2 ಮತ್ತು ರಿಕ್ಕಿ ಕೇಜ್‌ ಕನ್ನಡದ ಹೆಮ್ಮೆ'

ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಲಹರಿ ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷಗಳು ಕಳೆದಿವೆ. ಈಗ ಮತ್ತೊಂದು ವಿಶೇಷವೆಂದರೆ ಈ ಸಂಸ್ಥೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿಕೇಜ್ ನೇತೃತ್ವದಲ್ಲಿ  "ಡಿವೈನ್ ಟೈಡ್ಸ್" ಎಂಬ ಅದ್ಭುತ ಆಲ್ಬಂ ಮೂಡಿಬಂದಿದೆ. ಈ ಆಲ್ಬಂಗಾಗಿ ರಿಕ್ಕಿಕೇಜ್ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಅವಾರ್ಡ್ ಬಂದಿರುವುದು ಇದು ಎರಡನೇ ಬಾರಿ.

 'ಕೆ.ಜಿ.ಎಫ್-2 ಮತ್ತು ರಿಕ್ಕಿ ಕೇಜ್‌ ಕನ್ನಡದ ಹೆಮ್ಮೆ'

ಬೆಂಗಳೂರು: ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಲಹರಿ ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷಗಳು ಕಳೆದಿವೆ. ಈಗ ಮತ್ತೊಂದು ವಿಶೇಷವೆಂದರೆ ಈ ಸಂಸ್ಥೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿಕೇಜ್ ನೇತೃತ್ವದಲ್ಲಿ  "ಡಿವೈನ್ ಟೈಡ್ಸ್" ಎಂಬ ಅದ್ಭುತ ಆಲ್ಬಂ ಮೂಡಿಬಂದಿದೆ. ಈ ಆಲ್ಬಂಗಾಗಿ ರಿಕ್ಕಿಕೇಜ್ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಅವಾರ್ಡ್ ಬಂದಿರುವುದು ಇದು ಎರಡನೇ ಬಾರಿ.

ಈ ಸಂತಸ ಹಂಚಿಕೊಳ್ಳಲು ಲಹರಿ ಸಂಸ್ಥೆ ಆತ್ಮೀಯ ಸಮಾರಂಭ ಏರ್ಪಡಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್, ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್, ಕ್ರೇಜಿಸ್ಟಾರ್ ರವಿಚಂದ್ರನ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಾಜೇಂದ್ರ ಸಿಂಗ್ ಬಾಬು, ವಸಿಷ್ಠ ಸಿಂಹ, ಗುರುಕಿರಣ್, ಉದಯ್ ಕೆ. ಮೆಹ್ತಾ, ಕೆ.ಪಿ.ಶ್ರೀಕಾಂತ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನಾನು ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ವೇಲು ಅವರನ್ನು ಮೊದಲಿನಿಂದಲೂ ಬಲ್ಲೆ. ನಮ್ಮ ಪಕ್ಕದ ಮನೆಯವರು ಅವರು. ಲಹರಿ ಸಂಸ್ಥೆ ಈ ಎತ್ತರಕ್ಕೆ ಬೆಳೆದಿರುವುದು ಖುಷಿ ತಂದಿದೆ. ಇಲ್ಲಿಗೆ ಬಂದಾಗ ಈ ಆಲ್ಬಂನ ಒಂದು ಹಾಡು ನೋಡಿ ತುಂಬಾ ಸಂತೋಷವಾಯಿತು. ಗ್ರ್ಯಾಮಿ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಅದರ ಬಗ್ಗೆ ತಿಳಿದು ಆಶ್ಚರ್ಯವಾಯಿತು. ರಿಕ್ಕಿ ಕೇಜ್ ಎರಡು ಸಲ ಈ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಅಭಿನಂದನಾರ್ಹ.ಅವರ ಸಾಧನೆ ಇಡೀ ಕನ್ನಡಿಗರು ಹೆಮ್ಮೆ ಪಡುವಂತದು. ಅವರಿಂದ ಇನ್ನಷ್ಟು ಈ ರೀತಿಯ ಸಾಧನೆಯಾಗಲಿ. ಅದು ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು. fallbacks

ಇದನ್ನೂ ಓದಿ: Head Bush Movie : ಡಾಲಿ ಧನಂಜಯ 'ಹೆಡ್ ಬುಶ್' ಸಿನಿಮಾ ಬಿಡುಗಡೆಗೆ ಎದುರಾಯ್ತು ಕಂಟಕ!

ನನಗೆ ಇದು ಕುಟುಂಬದ ಸಮಾರಂಭ ಇದ್ದ ಹಾಗೆ. ಕಳೆದ ವರ್ಷ ಕೊರೊನಾದಿಂದ ಅನೇಕ ಜನ ಹತ್ತಿರದವರನ್ನು ಕಳೆದುಕೊಂಡಿದ್ದೀವಿ. ಕೆಟ್ಟ ಸಮಯ ಹೋದ ಮೇಲೆ ಒಳ್ಳೆಯ ಸಮಯ ಬರುತ್ತದೆ ಎನ್ನುತ್ತಾರೆ. ಈಗ ಒಳ್ಳೆಯ ಸಮಯ ಬಂದಿದೆ. ಕೆ.ಜಿ.ಎಫ್-೨  ಚಿತ್ರ ಪ್ರಚಂಡ ಜಯಭೇರಿ ಬಾರಿಸುತ್ತಿದೆ. ರಿಕ್ಕಿಕೇಜ್‌ಗೆ ಗ್ರ್ಯಾಮಿ ಬಂದಿದೆ. ಇನ್ನು ಲಹರಿ ಸಂಸ್ಥೆ ಜೊತೆ ನನ್ನ ಸ್ನೇಹ ಬಹಳ ವರ್ಷಗಳದ್ದು. ನನ್ನ ಪ್ರೇಮಲೋಕ ಸೇರಿದಂತೆ ಅನೇಕ ಚಿತ್ರಗಳ ಹಾಡುಗಳು ಈ ಸಂಸ್ಥೆ ಮೂಲಕ ಬಿಡುಗಡೆಯಾಗಿವೆ ಎಂದರು ಕ್ರೇಜಿಸ್ಟಾರ್ ರವಿಚಂದ್ರನ್.

ನಿಜಕ್ಕೂ ಇದೊಂದು ಆತ್ಮೀಯ ಸಮಾರಂಭ. "ಮನ ಮೆಚ್ಚಿದ ಹುಡುಗಿ" ಸೇರಿದಂತೆ ನಮ್ಮ ಸಂಸ್ಥೆಯ ಅನೇಕ ಚಿತ್ರಗಳು ಲಹರಿ ಮೂಲಕ ಬಿಡುಗಡೆಯಾಗಿವೆ. ಈಗ ಅವರ ಸಂಸ್ಥೆಯ ನಿರ್ಮಾಣದ ಆಲ್ಬಂ ಸಾಂಗ್‌ಗಾಗಿ  ರಿಕ್ಕಿಕೇಜ್ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ಇಬ್ಬರಿಗೂ ಶುಭಾಶಯ ಎಂದರು ಶಿವರಾಜ್‌ಕುಮಾರ್‌.

ಇದನ್ನೂ ಓದಿ: ರವಿಚಂದ್ರನ್‌ ಪುತ್ರನ ʻವಿವಾಹ ಆಹ್ವಾನʼ ಪತ್ರಿಕೆ! ಇಲ್ಲಿದೆ ವೈರಲ್ ಫೋಟೋದ ಅಸಲಿಯತ್ತು

ಕೇವಲ ಐನ್ನೂರು ರೂಪಾಯಿಯಿಂದ ಆರಂಭವಾದ ಈ ಸಂಸ್ಥೆ ಈ ಮಟ್ಟಕ್ಕೆ ಬರಲು ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ. ಇದರಲ್ಲಿ ಅಣ್ಣ ಮನೋಹರ್ ನಾಯ್ಡು ಅವರ ಪರಿಶ್ರಮ ಸಾಕಷ್ಟಿದೆ. ಲಹರಿ ನಿರ್ಮಾಣದ ಆಲ್ಬಂಗಾಗಿ ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿರುವುದು ಸಂತೋಷ. ಅದಕ್ಕಾಗಿ ರಿಕ್ಕಿಕೇಜ್ ಅವರಿಗೆ ಧನ್ಯವಾದ ಎಂದರು ಲಹರಿ ವೇಲು.

ಲಹರಿ ಜೊತೆಗಿನ ಸಂಬಂಧ ಹಾಗೂ ಈ ಆಲ್ಬಂ ಸಾಂಗ್ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟ ರಿಕ್ಕಿಕೇಜ್, ಎಲ್ಲರಿಗೂ ಧನ್ಯವಾದ ಅರ್ಪಿಸಿದರು.ಪಬ್ಲಿಕ್‌ ಟಿವಿ ರಂಗನಾಥ್ ಸೇರಿದಂತೆ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರು ಲಹರಿ ಸಂಸ್ಥೆ ಹಾಗೂ ರಿಕ್ಕಿಕೇಜ್ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Read More