Home> Entertainment
Advertisement

KGF 2 Box Office:ಬಾಕ್ಸ್ ಆಫೀಸಿನಲ್ಲಿ ಇದು ವರೆಗೆ ಕೆಜಿಎಫ್2 ಕಲೆ ಹಾಕಿದ್ದೆಷ್ಟು?

KGF 2 Box Office: ಪೋಸ್ಟರ್, ಟೀಸರ್, ಟ್ರೇಲರ್, ಲಿರಿಕಲ್ ಸಾಂಗ್ ಗಳಿಂದ ದಾಖಲೆ ಬರೆದ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತೆ ಎಂಬುದು ಎಲ್ಲರಿಗೂ ಪಕ್ಕಾ ಆಗಿತ್ತು.

KGF 2 Box Office:ಬಾಕ್ಸ್ ಆಫೀಸಿನಲ್ಲಿ ಇದು ವರೆಗೆ ಕೆಜಿಎಫ್2 ಕಲೆ ಹಾಕಿದ್ದೆಷ್ಟು?

ಅಂತೂ ಇಂತೂ ಕೆಜಿಎಫ್2 ಬೆಳ್ಳಿತೆರೆ ಮೇಲೆ ಬಂದಾಯ್ತು. ರಾಕಿಭಾಯ್ ಅಬ್ಬರಕ್ಕೆ ಇಡೀ ಜಗತ್ತೇ ಫಿದಾ ಆಗಿದೆ. ನರಾಚಿ ಲೋಕದಿಂದ ಬಂದ ತೂಫಾನ್ ಗೆ ಎಲ್ಲ ದಾಖಲೆಗಳು ಉಡೀಸ್ ಆಗಿವೆ. 

ಇದನ್ನೂ ಓದಿ: KGF 2 Release:ಗರುಡ ಫಿನಿಶ್..‌ ಅಧೀರ ಉಡೀಸ್!‌ ಹೇಗಿತ್ತು ಗೊತ್ತಾ ರಾಕಿಭಾಯ್‌ ರಿಯಲ್‌ ಸಾಮ್ರಾಜ್ಯ

ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್2 ಸೃಷ್ಟಿಸಿದ್ದ ಕ್ರೇಜ್ ಅಷ್ಟಿಷ್ಟಲ್ಲ. 2018 ರಲ್ಲಿ ರಿಲೀಸ್ ಆಗಿದ್ದ  ಕೆಜಿಎಫ್ ಇಡೀ ವಿಶ್ವವೇ ಕನ್ನಡ  ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಅಲ್ಲಿಂದ ಕೆಜಿಎಫ್ ಕೇವಲ ಸಿನಿಮಾ ಆಗಿ ಮಾತ್ರವಲ್ಲ ಒಂದು ಬ್ರ್ಯಾಂಡ್ ಆಗಿ ಹವಾ ಹುಟ್ಟು ಹಾಕಿತು. 

ಕೆಜಿಎಫ್ ನಲ್ಲಿ ಗರುಡನ ಕೊಲೆ ಬಳಿಕ ಮುಂದೇನಾಯ್ತು ಎಂಬ ಪ್ರಶ್ನೆಗೆ 4 ವರ್ಷಗಳ ಬಳಿಕ ಉತ್ತರ ಕೊಟ್ಟಿದ್ದಾರೆ ಡೈರೆಕ್ಟರ್ ಪ್ರಶಾಂತ್ ನೀಲ್. ಪೋಸ್ಟರ್, ಟೀಸರ್, ಟ್ರೇಲರ್, ಲಿರಿಕಲ್ ಸಾಂಗ್ ಗಳಿಂದ ದಾಖಲೆ ಬರೆದ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತೆ ಎಂಬುದು ಎಲ್ಲರಿಗೂ ಪಕ್ಕಾ ಆಗಿತ್ತು.

ಇದನ್ನೂ ಓದಿ: KGFChapter2 : 'ಕೆಜಿಎಫ್‌-2'‌ ರಿಲೀಸ್..! ಥಿಯೇಟರ್‌ ಎದುರು ಹಬ್ಬದ ವಾತಾವರಣ..!‌

ವರದಿಗಳ ಪ್ರಕಾರ, ಕೆಜಿಎಫ್ 2 (ಹಿಂದಿ) ಬಾಕ್ಸ್ ಆಫೀಸ್‌ನಲ್ಲಿ ಮುಂಗಡ ಬುಕ್ಕಿಂಗ್ ನಲ್ಲಿ 50 ಕೋಟಿ ಕಲೆ ಹಾಕಿದೆ. 22.5 ಲಕ್ಷ ಟಿಕೆಟ್‌ಗಳನ್ನು ಇದು ವರೆಗೆ ಮಾರಾಟವಾಗಿದೆ. ಸ್ಯಾಂಪಲ್ ಟ್ಯಾಕಿಂಗ್ ಪ್ರಕಾರ, ಬುಧವಾರ ಸಂಜೆ 4 ಗಂಟೆಯವರೆಗೆ ಮೊದಲ ವಾರಾಂತ್ಯದಲ್ಲಿ ಚಲನಚಿತ್ರವು 56.73 ಕೋಟಿ ರೂಪಾಯಿ ಗಳಿಸಿದೆ. ಒಟ್ಟು ಮುಂಗಡ ಬುಕಿಂಗ್‌ನಲ್ಲಿ ಮೊದಲ ದಿನ 29 ಕೋಟಿ ಗ್ರಾಸ್ ಬಂದಿದ್ದು, ಶುಕ್ರವಾರ 12.85 ಕೋಟಿ, ಶನಿವಾರ 7.50 ಕೋಟಿ ಮತ್ತು ಭಾನುವಾರ 7.40 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More