Home> Entertainment
Advertisement

ರಾಜ್ಯ ಸರ್ಕಾರದ ವಿರುದ್ದ ನಟ Dhruva Sarja ಗರಂ

ಕೋವಿಡ್-19 (Covid 19) 2ನೇ ಅಲೆಗೆ ಹೆದರಿ  ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ  ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಜನರಿಗೆ ಮಾತ್ರ ಅವಕಾಶ ಎಂದು ಹೇಳಿದೆ.

ರಾಜ್ಯ ಸರ್ಕಾರದ ವಿರುದ್ದ ನಟ Dhruva Sarja ಗರಂ

ಬೆಂಗಳೂರು : ವಾರದ ಹಿಂದಷ್ಟೇ ಚಿತ್ರಮಂದಿರಗಳಲ್ಲಿ ಶೇ. 100ರಷ್ಟೂ ಪ್ರೇಕ್ಷಕರು ಕುಳಿತು ಸಿನಿಮಾ ವೀಕ್ಷಿಸಬಹುದು ಎಂದು ಕೇಂದ್ರ ಸರ್ಕಾರ ಅನುಮತಿ ನೀಡಿತು. ಆದರೆ ಕೋವಿಡ್-19 (Covid 19) 2ನೇ ಅಲೆಗೆ ಹೆದರಿ  ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ  ರಾಜ್ಯ ಸರ್ಕಾರ ಚಿತ್ರಮಂದಿರ (Cinema Hall)ಗಳಲ್ಲಿ ಶೇ. 50ರಷ್ಟು ಜನರಿಗೆ ಮಾತ್ರ ಅವಕಾಶ ಎಂದು ಹೇಳಿದೆ. 

ಕರೋನಾವೈರಸ್ ಅಟ್ಟಹಾಸ ಕಡಿಮೆ ಆಗಿದೆ ಅಷ್ಟೇ, ಆದರೂ ನಾವು ಮೈಮರೆಯುವಂತಿಲ್ಲ ಎಂದಿರುವ ರಾಜ್ಯ ಸರ್ಕಾರ ಈ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಶೇ. 50 ಪ್ರೇಕ್ಷಕರಿಗೆ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಬೇಕು ಎಂದು ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಮಂಡಿಸಿರುವ ನಟ ಧ್ರುವ ಸರ್ಜಾ (Dhruva Sarja) ಟ್ವೀಟ್​ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. 

ಇದನ್ನೂ ಓದಿ - Pogaru Movie: 'ಪೊಗರು' ಸಿನಿಮಾದ ಬಗ್ಗೆ 'ಗುಡ್ ನ್ಯೂಸ್' ನೀಡಿದ ಆ್ಯಕ್ಷನ್‌ ಪ್ರಿನ್ಸ್..!

ಥಿಯೇಟರ್​ಗೆ ಮಾತ್ರ ನಿರ್ಬಂಧ...
ಟ್ವೀಟ್ ಮೂಲಕ @drashwathcn @CMofKarnataka @mla_sudhakar ಅವರನ್ನು ಟ್ಯಾಗ್ ಮಾಡಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಧ್ರುವ ಸರ್ಜಾ ಮಾರ್ಕೆಟ್​ನಲ್ಲಿ ಗಿಜಿಗಿಜಿ ಜನ. ಬಸ್​​ನಲ್ಲೂ ಫುಲ್​ ರಶ್​. ಆದರೆ ಚಿತ್ರಮಂದಿರಗಳಿಗೆ ಮಾತ್ರ ಶೇ. 50ರಷ್ಟು ಅವಕಾಶ ಏಕೆ ಎಂದಿದ್ದಾರೆ.

ಇದೇ ತಿಂಗಳು ತೆರೆಗೆ ಕಾಣಲಿರುವ 'ಪೊಗರು' :
ನಟ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ 'ಪೊಗರು' (Pogaru) ಚಿತ್ರ ಇದೇ ತಿಂಗಳ 19ನೇ ತಾರೀಖಿನಂದು ತೆರೆ ಕಾಣಲು ಸಜ್ಜಾಗಿದೆ. ಈ ನಡುವೆ ರಾಜ್ಯ ಸರ್ಕಾರದ ಈ ಕ್ರಮದಿಂದ ಬೇಸರಗೊಂಡಿರುವ ಧ್ರುವ ಸರ್ಜಾ ಸರ್ಕಾರಕ್ಕೆ ಟ್ವೀಟ್​ ಮೂಲಕ ಪ್ರಶ್ನೆ ಮಾಡಿದ್ದಾರೆ. 

ಇದನ್ನೂ ಓದಿ - Sandalwood : ಪೊಗರು ಚಿತ್ರದ ತೆಲುಗು, ತಮಿಳಿನ ಟ್ರೇಲರ್ ಬಿಡುಗಡೆ

ನಟ ಧ್ರುವ ಸರ್ಜಾ ಮಾತ್ರವಲ್ಲದೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಬಹುತೇಕ ಸದಸ್ಯರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾ ಮಂದಿರಗಳಲ್ಲಿ ಶೇಕಡ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿರುವ ರಾಜ್ಯ ಸರ್ಕಾರದ ಆದೇಶದಿಂದ ಬೇಸರಗೊಂಡ ಫಿಲಂ ಚೇಂಬರ್ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಕೇಂದ್ರದ ಆದೇಶದನ್ವಯ ಚಿತ್ರಮಂದಿರದಲ್ಲಿ ಸಂಪೂರ್ಣ ಪ್ರೇಕ್ಷಕರಿಗೆ ಅವಕಾಶ ನೀಡುವಂತೆಯೂ ರಾಜ್ಯ ಸರ್ಕಾರದ ಆದೇಶವನ್ನು ಪರಿಶೀಲಿಸುವಂತೆ ಮನವಿ ಮಾಡಲಾಗುವುದು ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Read More