Home> Entertainment
Advertisement

"ಮಚ್ಚ್‌ಲಕ್ಷ್ಮೀ" ಸ್ವಾಗತಕ್ಕೆ ಕ್ಷಣಗಣನೆ; ಯಾರದು ʼಕೆಡಿʼಯ ಆ ಲೇಡಿ..?

KD Film : ಪ್ರೇಮ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲೊಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕರಿಯ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ ಪ್ರೇಮ್, ನಂತರ ಎಕ್ಸ್ ಕ್ಯೂ ಸ್ ಮಿ ಮತ್ತು ಶಿವರಾಜ್ ಕುಮಾರ್ ಜೊತೆ ಜೋಗಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಜೋಗಿ ಸಿನಿಮಾ ಸಖತ್‌ ಸೆನ್ಸೇಷನ್‌ ಕ್ರಿಯೆಟ್‌ ಮಾಡಿತ್ತು. 

Director Prem : ಇದೀಗ ಜೋಗಿ ಪ್ರೇಮ್‌ ಅವರ ನಿರ್ದೇಶನದ 'KD' ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ. ಈ ಸಿನಿಮಾ ಇನ್ನೂ ಮೇಕಿಂಗ್‌ ಹಂತದಲ್ಲಿದ್ದು, ಈಗಾಗಲೇ ಸಖತ್‌ ಸೌಂಡ್‌ ಮಾಡುತ್ತಿದೆ. ಈ ಸಿನಿಮಾ ತಂಡದಲ್ಲಿ ರವಿಚಂದ್ರನ್, ಸಂಜಯ್‌ ದತ್ ಹಾಗೂ ಶಿಲ್ಪಾ ಶೆಟ್ಟಿ ಸೇರಿದಂತೆ ಹಿರಿಯ ಕಲಾವಿದರೂ ಹಾಗೂ ಘಟಾನುಗಟಿಗಳು ಇದ್ದಾರೆ. 

ಇದೀಗ ಚಿತ್ರತಂಡ ಚಿತ್ರದ ನಾಯಕಿಯ ಸ್ವಾಗತಕ್ಕೆ ಸಿದ್ಧತೆ ನಡೆಸಿದೆ. ಇದೇ ಶುಕ್ರವಾರ ಚಿತ್ರದ ನಾಯಕಿ ಮಚ್ಚ್‌ಲಕ್ಷ್ಮಿ ಯಾರು ಅನ್ನೋದನ್ನು ಚಿತ್ರತಂಡ ಘೋಷಿಸಲಿದೆ. ಕೆಡಿ ಚಿತ್ರದ ಚಿತ್ರತಂಡ ನಾಯಕಿಯ ಫಸ್ಟ್‌ಲುಕ್‌ ಬಗೆಗಿನ ಪೋಸ್ಟರ್‌ನ್ನು ರವೀಲ್‌ ಮಾಡಿದ್ದು, "ರಾಜನು ಯುದ್ಧದಲ್ಲಿ ಗಾಯಗೊಂಡಾಗ, ರಾಣಿ ಅವನ ನೋವನ್ನು ಶಕ್ತಿಯಾಗಿ ಪರಿವರ್ತಿಸುತ್ತಾಳೆ" ಕೆಡಿ ಯ ರಾಣಿ, ಮಚ್ಚ್ ಲಕ್ಷ್ಮೀ ಯಾರೆಂದು ಏಪ್ರಿಲ್ 28 ರಂದು ತಿಳಿಸಲಿದ್ದೇವೆ ಎಂದು ಚಿತ್ರ ತಂಡ ಪೋಸ್ಟ್‌ ಒಂದನ್ನು ಹಂಚಿಕೊಡಿದೆ. 

ಇದನ್ನೂ ಓದಿ-Pooja Hegde: ಮಂಗಳೂರಿನಲ್ಲಿ ಈ ಹಣ್ಣಿಗಾಗಿ ಪರದಾಡಿದ ಕುಡ್ಲ ಬೆಡಗಿ ಪೂಜಾ ಹೆಗ್ಡೆ..!

ಹಾಗಾದರೇ ಈ ಮಚ್ಚ್‌ ಲಕ್ಷ್ಮೀ ಯಾರು? ಅವರು ಕನ್ನಡದವರಾ ಅಥವಾ ಬೇರೆ ಭಾಷೆಯವರಾ ಎನ್ನುವ ಚರ್ಚೆಗಳು ಗುಸುಗುಸು ಸುದ್ದಿಗಳು ಹರಿದಾಡುತ್ತಿವೆ. ಇವರು ನಿರ್ದೇಶಿದ ಸಿನಿಮಾ ಏಕ್‌ಲವ್‌ಯಾ ಸಿನಿಮಾದ ನಾಯಕಿಯಾದ ರೀಷ್ಮಾ ಅವರೇ ಈ ಚಿತ್ರದ ನಾಯಕಿಯಾಗಿರಬಹುದು ಎಂದು ಊಹಿಸಲಾಗುತ್ತದೆ.

ರವಿವರ್ಮಾ ಅವರ ಸಾಹಸ ಸಂಯೋಜನೆಯನ್ನು ಹೊಂದಿರುವ ಈ ಸಿನಿಮಾ ಅರ್ಜುನ್‌ ಜನ್ಯಾ ಅವರ ಸಂಗೀತ ನಿರ್ದೇಶನವನ್ನ ಒಳಗೊಂಡಿದೆ. ಮುಂದಿನ ವರ್ಷ ಬೇಸಿಗೆಯಲ್ಲಿ ಈ ಸಿನಿಮಾ ಸೆಟ್ಟೆರುವ ನಿರೀಕ್ಷೆಯಲ್ಲಿದ್ದು, ಸಿನಿರಸಿಕರಿಗೆಂದೇ ಟ್ರೈಲರ್,  ಟೀಸರ್, ಸಾಂಗ್ಸ್ ಗಳು ಭರ್ಜರಿಯಾಗಿ ಹೊರಬೀಳುತ್ತಿರುತ್ತವೆ. 

ಇದನ್ನೂ ಓದಿ-ಅಯಲಾನ್ ಚಿತ್ರದ ಹೊಸ ಪೋಸ್ಟರ್‌ ರಿಲೀಸ್‌; ದೀಪಾವಳಿಯಂದು ಸೆಟ್ಟೆರಲಿರುವ ಲೈವ್ ಆಕ್ಷನ್ ಸಿನಿಮಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More