Home> Entertainment
Advertisement

ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕರವೇ ಪ್ರತಿಭಟನೆ ; ಶಿವರಾಜ್ ಕುಮಾರ್ ಜೊತೆ ಮಾತುಕತೆ

ಜೇಮ್ಸ್ ಸಿನಿಮಾಕ್ಕೆ ಇತರ ಭಾಷೆಗಳ ಸಿನಿಮಾಗಳಿಂದ ಅಡ್ಡಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ,  ಕಾಶ್ಮೀರ್ ಫೈಲ್ಸ್ ಗೂ RRR ಗೂ ಯಾವುದೇ ಸಂಬಂಧ ಇಲ್ಲ. ಕಾಶ್ಮೀರಿ ಸಿನಿಮಾ ಎಲ್ಲಾ ಕಡೆ ಕೂಡ ನಡೆಯುತ್ತಿದೆಯಲ್ಲ. ಯಾವುದೇ ಒಳ್ಳೆ ಸಿನಿಮಾ ನಡೆಯುವಾಗ ಅದನ್ನು ತೆಗೆಯಬಾರದು ಎಂದು ಹೇಳಿದ್ದಾರೆ. 

ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕರವೇ ಪ್ರತಿಭಟನೆ ; ಶಿವರಾಜ್ ಕುಮಾರ್ ಜೊತೆ ಮಾತುಕತೆ

ಬೆಂಗಳೂರು : ಅನುಪಮಾ ಥಿಯೇಟರ್ ಮುಂದೆ ಪ್ರತಿಭಟನೆ ನಡೆಸಿದ  ಬಳಿಕ ಪಾದಯಾತ್ರೆಯಲ್ಲೇ ಹೋಗಿ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike)ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಿತು. ಜೇಮ್ಸ್ ನಿರ್ಮಾಪಕರು (James producer) ಹಾಗೂ ನಟ ಶಿವರಾಜ್ ಕುಮಾರ್ (Shivarajkumar) ಈ ವೇಳೆ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. 

ಮಾಜಿ ಫಿಲಂ ಚೇಂಬರ್ ಅಧ್ಯಕ್ಷರಾದ ಚಿನ್ನೇಗೌಡ (Chinne Gowda) ಮಾತನಾಡಿ, ಸರ್ಕಾರ ಇದನ್ನು ಗಮನಿಸಬೇಕು. ದಯವಿಟ್ಟು ಕನ್ನಡ ಚಿತ್ರರಂಗ ಉಳಿಸಿ ಎಂದು ಮನವಿ ಮಾಡಿದರು. ರಾಜ ಕುಮಾರ್ (Rajkumar) ಹೇಳಿದ ಹಾಗೆ ನಾವು ಪರಭಾಷ ವಿರೋಧಿಗಳಲ್ಲ. ಕಲೆಕ್ಷನ್ ತುಂಬಾ ಚೆನ್ನಾಗಿದ್ದ ಸಿನಿಮಾ ತೆಗಿಬೇಡಿ ಎಂದು ಹೇಳಿದರು. ಚೇಂಬರ್ ಅಧ್ಯಕ್ಷರ (Karnataka Film Chamber) ಜೊತೆಗೆ ಮಾತಾಡ್ತಿನಿ ಎಲ್ಲೆಲ್ಲಿ ಸಿನಿಮಾ ತೆಗೆಯಲು ಮುಂದಾಗಿದ್ದಾರೆ ಅದನ್ನು ತೆಗೆಯಬಾರದು ಅಂತ ಮನವಿ ಮಾಡುವುದಾಗಿ ಹೇಳಿದರು. ಥಿಯೇಟರ್ ಗಳಿಗೆ ನಾವೂ ಬಾಡಿಗೆ ಕೊಡ್ತಿವಿ ಅವರೂ ಬಾಡಿಗೆ ಕೊಡ್ತಾರೆ ಎಂದರು. 

ಇದನ್ನೂ ಓದಿ : ‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನದ ಬಗ್ಗೆ ಹೀಗಂದ್ರು ರಾಧಿಕಾ ಪಂಡಿತ್

ನಟ ಶಿವರಾಜ್ ಕುಮಾರ್ (Shivarajkumar) ಮಾತನಾಡಿ, ಜೇಮ್ಸ್ ಸಿನಿಮಾಕ್ಕೆ (James Film) ಇತರ ಭಾಷೆಗಳ ಸಿನಿಮಾಗಳಿಂದ ಅಡ್ಡಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ,  ಕಾಶ್ಮೀರ್ ಫೈಲ್ಸ್ ಗೂ RRR ಗೂ ಯಾವುದೇ ಸಂಬಂಧ ಇಲ್ಲ. ಕಾಶ್ಮೀರಿ (Kashmir Files) ಸಿನಿಮಾ ಎಲ್ಲಾ ಕಡೆ ಕೂಡ ನಡೆಯುತ್ತಿದೆಯಲ್ಲ. ಯಾವುದೇ ಒಳ್ಳೆ ಸಿನಿಮಾ ನಡೆಯುವಾಗ ಅದನ್ನು ತೆಗೆಯಬಾರದು. ಅದನ್ನೇ ನಮ್ಮ ಅಪ್ಪ ಅಮ್ಮ ನಮಗೆ ಹೇಳಿಕೊಟ್ಟಿರೋದು. ಜೇಮ್ಸ್ ಸಿನಿಮಾ ಬಗ್ಗೆ ನಿರ್ಮಾಪಕರು ಸಿಎಂ ಜೊತೆ ಹೇಳಿಕೊಂಡಿದ್ದಾರೆ ಅಷ್ಟೇ. ಆದರೆ ಕಾಶ್ಮೀರಿ ಫೈಲ್ ನಿಂದ ಜೇಮ್ಸ್ ಸಿನಿಮಾಗೆ ಸಮಸ್ಯೆ ಆಗಿದೆ ಅಂತಾ ಹೇಳಿಲ್ಲ ಎಂದರು. 

ಇನ್ನು ಜೇಮ್ಸ್ ಸಿನಿಮಾ ನಿರ್ಮಾಪಕ ಕಿಶೋರ್ ಮಾಜಿ ಸಿಎಂ ಸಿದ್ದರಾಮಯ್ಯರನ್ನು (siddaramaiah) ಭೇಟಿ ಮಾಡಿದ ವಿಚಾರ ಮಾತನಾಡಿ,  ನಾನು ಇಲ್ಲಿ ರಾಜಕೀಯ ಮಾತಾಡೋಕೆ ಬಂದಿಲ್ಲ. ನಾನೊಬ್ಬ ಇಂಡಸ್ಟ್ರಿಯ ನಟನಾಗಿ, ಶಿವಣ್ಣನಾಗಿ ಮಾತನಾಡಲು ಬಂದಿದ್ದೇನೆ. ಯಾವುದೇ ರಾಜಕಾರಣ ಬೇಡ. ನಾನು ಶಕ್ತಿಧಾಮ ಕಾರ್ಯಕ್ರಮಕ್ಕೆ ಸಿಎಂಗೆ  ಆಹ್ವಾನ ನೀಡಲು ಬಂದಿದ್ದೆ. ಇದೇ ಸಮಯದಲ್ಲಿ ಜೇಮ್ಸ್ ನಿರ್ಮಾಪಕರಿಗೂ ನೀವೇ ಬಂದು ಸಿಎಂ ಬಳಿ ಮಾತನಾಡಿ ಎಂದು ಹೇಳಿದ್ದೆ. ನನಗೂ ಏನು ಸಮಸ್ಯೆ ಆಗುತ್ತಿದೆ ಅನ್ನೋದು ಗೊತ್ತಿಲ್ಲ. ಅಭಿಮಾನಿಗಳ ಆರೋಪದ ಬಗ್ಗೆ ಗೊತ್ತಿಲ್ಲ. ಎಷ್ಟು ಥಿಯೇಟರ್‌ಗಳಲ್ಲಿ ಜೇಮ್ಸ್ ಸಿನಿಮಾ ನಡೆಯುತ್ತಿದೆ ಎಂದು ಪರಿಶೀಲನೆ ಮಾಡಿ ಬಂದು ಹೇಳಿ. ಎಲ್ಲಾ ಪರೀಕ್ಷಿಸಿ ಜನತೆಗೆ ನೀವು ಹೇಳಬೇಕು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. 

ಇದನ್ನೂ ಓದಿ : Natabhayankara: "ನಟ ಭಯಂಕರ" ನಿಗೆ "ಮದಗಜ"ನ ಸಾಥ್.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More