Home> Entertainment
Advertisement

Puttakkana Makkalu Serial: ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಕಂಠಿ ವಿದ್ಯಾರ್ಹತೆ ಗೊತ್ತಾ..? 

Puttakkana Makkalu Hero: ಕಿರುತೆರೆಯಲ್ಲಿ ಫೇಮಸ್‌ ಆದ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟರ ಸಂಖ್ಯೆ ಹೆಚ್ಚಾಗಿಯೇ ಇದೆ...ಇದೀಗ ಕಿರುತೆರೆಯಲ್ಲಿ ಭಾರಿ ಸದ್ದು ಮಾಡುತ್ತಿರುವ  ಸೀರಿಯಲ್‌ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಕಂಠಿ ಪಾತ್ರದಿಂದ ಮನೆ ಮಾತಾಗಿರುವ ಧನುಷ್‌ ಗೌಡ

Puttakkana Makkalu Serial: ಪುಟ್ಟಕ್ಕನ ಮಕ್ಕಳು ಸೀರಿಯಲ್‌  ಕಂಠಿ ವಿದ್ಯಾರ್ಹತೆ  ಗೊತ್ತಾ..? 

Puttakkana Makkalu Serial: ಕಿರುತೆರೆಯಲ್ಲಿ ಫೇಮಸ್‌ ಆದ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟರ ಸಂಖ್ಯೆ ಹೆಚ್ಚಾಗಿಯೇ ಇದೆ...ಇದೀಗ ಕಿರುತೆರೆಯಲ್ಲಿ ಭಾರಿ ಸದ್ದು ಮಾಡುತ್ತಿರುವ  ಸೀರಿಯಲ್‌ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಕಂಠಿ ಪಾತ್ರದಿಂದ ಮನೆ ಮಾತಾಗಿರುವ ಧನುಷ್‌ ಗೌಡ...ಸಿನಿಮಾ ರಂಗಕ್ಕೆ ಎಂಟ್ರಿ  ಕೊಡ್ತಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಾಇದೆ...ಏನಿದು ಹೊಸ ಗಾಸಿಪ್‌? ಧನುಷ್‌ ಗೌಡ ಕಿರುತೆರೆ ಜರ್ನಿ ಹೇಗಿತ್ತು? 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು'ಸೀರಿಯಲ್ ಅಪಾರ ಜನಮೆಚ್ಚುಗೆಯನ್ನು ಪಡೆದುಕೊಂಡಿದೆ. ಇದರ ಜೊತೆಗೆ ಹೊಸ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ ಕಲ್ಪಿಸಿದೆ...ಧಾರಾವಾಹಿಯಲ್ಲಿ ಪುಟ್ಟಕ್ಕ ತನ್ನ ಮೂವರು ಹೆಣ್ಣು ಮಕ್ಕಳಲ್ಲಿ ದೊಡ್ಡ ಮಗಳು ಸಹನಾಳ ಮದುವೆ ಸಂಭ್ರಮ ನಡೆಯುತ್ತಿದೆ. ಈ ನಡುವೆ ಕಂಠಿ ಮತ್ತು ಪುಟ್ಟಕ್ಕನ ಎರಡನೇ ಮಗಳ ಮನದಲ್ಲಿ ಪ್ರೀತಿ ಅರಳಿದೆ...

ಇದನ್ನೂ ಓದಿ: Barane aiti Song: ಗುರುದೇವ್ ಹೊಯ್ಸಳ ಚಿತ್ರದ ಟ್ರೈಲರ್‌ ಖಡಕ್‌ ಆಗಿ ಐತಿ ಇದರ ಹಾಡು ʼಬ್ಯಾರೇನೇ ಐತಿʼ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೂಲಕ ಮನೆ ಮಾತಾಗಿರುವ ಧನುಷ್ ಗೌಡಗೆ ಈಗ ಕೆಲವು ಸಿನಿಮಾ ಆಫರ್‌ಗಳು ಬರುತ್ತಿವೆಯಂತೆ. ಹೀಗಾಗಿ ಈ ಕಿರುತೆರೆ ಹೀರೋ ಶೀಘ್ರದಲ್ಲೇ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರೂ ಅಚ್ಚರಿಯಿಲ್ಲ...ಪುಟ್ಟಕ್ಕನ ಮಗಳನ್ನು ಇಷ್ಟಪಟ್ಟು ಕಣ್ಣು ಹಾಕುವುದು ಈ ಕಂಠಿಯ ಕೆಲಸ. ಅದಕ್ಕಾಗಿಯೇ ಗೆಳೆಯರ ಜೊತೆ ಮಾಡುವ ಸರ್ಕಸ್ ಧಾರಾವಾಹಿಯಲ್ಲಿ ಕಚಗುಳಿ ನೀಡುತ್ತಿದೆ. ಕಂಠಿ ಅವರ ನಿಜವಾದ ಹೆಸರು ಧನುಷ್ ಗೌಡ. ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದೇ ತಡ ಧನುಷ್ ನೇರವಾಗಿ ಬಣ್ಣದ ಬದುಕಿಗೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: Ram Charan's Birthday:  ರಾಮ್ ಚರಣ್ ಹುಟ್ಟುಹಬ್ಬಕ್ಕೆ  ಕಿಯಾರಾ ಅಡ್ವಾಣಿಯಿಂದ ಬಿಗ್ ಸರ್ಪ್ರೈಸ್

ಇದಕ್ಕೂ ಮೊದಲು ಧನುಷ್ ಅವರು,  ಕಿರುಚಿತ್ರಗಳಲ್ಲಿ ನಟಿಸಿದ್ದರು. 'ನನ್ನ ನಗು'ಎಂಬ ಹಾಡಿನ ಆಲ್ಬಂ ಕೂಡ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾಯಕನಾಗಬೇಕು ಎಂಬ ಕನಸು ಕಂಡವರು. ಆ ಕನಸಿನ ದಾರಿಯಲ್ಲಿ 'ಪುಟ್ಟಕ್ಕನ ಮಕ್ಕಳ' ಜೊತೆ ಹೆಜ್ಜೆ ಹಾಕಿದ್ರು.... ಕೋಲಾರ ಜಿಲ್ಲೆಯ ಸಂತೆಹಳ್ಳಿಯವರಾದ ಧನುಷ್ ತಂದೆ ಉದ್ಯಮಿ.

ಧನುಷ್ ಅವರು ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆಯೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಆಡಿಷನ್‌ನಲ್ಲಿ ಆಯ್ಕೆಯಾದರು. ಇತ್ತೀಚೆಗಷ್ಟೇ ಧನುಷ್ ಗೌಡ ಕಾಣಿಸಿಕೊಂಡಿದದ 'ಮನಸೆಲ್ಲಾ ನೀನೇ' ಆಲ್ಬಂ ರಿಲೀಸ್ ಆಗಿತ್ತು. ಇನ್ನು ಕಂಠಿಗೆ ಉತ್ತಮ ಪಾತ್ರದಲ್ಲಿ ಸ್ಯಾಂಡಲ್‌ವುಡ್‌ನಲ್ಲೂ ಮಿಂಚಬೇಕು ಎಂಬ ಆಸೆ ಇದೆ. ಉತ್ತಮ ಆಫರ್ ಅನ್ನು ನಿರೀಕ್ಷಿಸುತ್ತಿದ್ದಾರೆ.̤ಸ್ನೇಹಾ ಹಾಗೂ ಕಂಠಿ ಇಬ್ಬರ ಜೋಡಿಯನ್ನು ನೋಡಲು ವೀಕ್ಷಕರು ಬಹಳ ಇಷ್ಟ ಪಡುತ್ತಾರೆ. ಆಗಾಗ ಈ ಜೋಡಿ ಒಟ್ಟಿಗೆ ಫೋಟೋಶೂಟ್ ನಡೆಸಿ, ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಾರೆ...

  ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More