Home> Entertainment
Advertisement

Kantara New Record : ಕನ್ನಡ ಗಲ್ಲಾಪೆಟ್ಟಿಗೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ 'ಕಾಂತಾರ'!

Kantara New Record : ಮೊದಲು ಕನ್ನಡದಲ್ಲಿ ರಿಲೀಸ್‌ ಆಗಿ ಆ ನಂತರ ಬೇರೆ ಭಾಷೆಗಳಿಗೆ ಡಬ್‌ ಆಗಿ ಇದೀಗ ಎಲ್ಲೆಡೆ ಸುಂಟರಗಾಳಿ ಎಬ್ಬಿಸಿದ ಸಿನಿಮಾ ಕಾಂತಾರ. ಸಿನಿಮಾದ ಕತೆ, ನಿರ್ದೇಶನ, ನಟನೆ ಎಲ್ಲವೂ ಅದ್ಭುತ ಎಂದು ಸಿನಿ ಪ್ರಿಯರು ಹಾಡಿ ಹೊಗಳುತ್ತಿದ್ದಾರೆ. 

Kantara New Record : ಕನ್ನಡ ಗಲ್ಲಾಪೆಟ್ಟಿಗೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ 'ಕಾಂತಾರ'!

Kantara New Record : 2022 ಇದು ಕನ್ನಡ ಚಿತ್ರರಂಗಕ್ಕೆ ಅವಿಸ್ಮರಣೀಯ ವರ್ಷವಾಗಿದೆ. ಪ್ಯಾನ್ ಇಂಡಿಯಾ ಹಿಟ್‌ಗಳನ್ನು ಗಳಿಸಿದೆ. ಈ ವರ್ಷದ ಆರಂಭದಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರ 'ಜೇಮ್ಸ್' ಸೂಪರ್‌ ಹಿಟ್‌ ಕಂಡಿತು. ಬಳಿಕ ಯಶ್ ಅವರ 'ಕೆಜಿಎಫ್ 2' ಅದ್ಭುತ ಕಲೆಕ್ಷನ್‌ಗಳೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತು. ಆ ನಂತರ ಬಂದ ರಕ್ಷಿತ್ ಶೆಟ್ಟಿ ಅವರ '777 ಚಾರ್ಲಿ' ಸಿನಿ ಪ್ರೇಕ್ಷಕರ ಮನಗೆದ್ದಿತು. 3D ಯಲ್ಲಿ ತಯಾರಾದ ಸುದೀಪ್ ಅವರ 'ವಿಕ್ರಾಂತ್ ರೋಣ' ಸಹ ಹಿಟ್‌ ಸಿನಿಮಾ ಸಾಲಿಗೆ ಸೇರಿತು. ಮೊದಲು ಕನ್ನಡದಲ್ಲಿ ರಿಲೀಸ್‌ ಆಗಿ ಆ ನಂತರ ಬೇರೆ ಭಾಷೆಗಳಿಗೆ ಡಬ್‌ ಆಗಿ ಇದೀಗ ಎಲ್ಲೆಡೆ ಸುಂಟರಗಾಳಿ ಎಬ್ಬಿಸಿದ ಸಿನಿಮಾ ಕಾಂತಾರ. ಸಿನಿಮಾದ ಕತೆ, ನಿರ್ದೇಶನ, ನಟನೆ ಎಲ್ಲವೂ ಅದ್ಭುತ ಎಂದು ಸಿನಿ ಪ್ರಿಯರು ಹಾಡಿ ಹೊಗಳುತ್ತಿದ್ದಾರೆ.

ಇದನ್ನೂ ಓದಿ : ‘ಸದ್ದು ವಿಚಾರಣೆ ನಡೆಯುತ್ತಿದೆ’ ನ. 25ಕ್ಕೆ ರಾಜ್ಯಾದ್ಯಂತ ಬಿಡುಗಡೆ

ರಿಷಬ್ ಶೆಟ್ಟಿ ಅವರ 'ಕಾಂತಾರ' ಚಿತ್ರವು ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಲ್ಲಿ ಎಲ್ಲಾ ನಿರೀಕ್ಷೆಗಳನ್ನು ಮೀರಿಸುವ ಮೂಲಕ ಪ್ರಪಂಚದಾದ್ಯಂತ ಪ್ರೇಕ್ಷಕರ ಮನ ಸೆಳೆಯುತ್ತಿದೆ. 'ಕಾಂತಾರ' ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ ಮತ್ತು ಈಗ ಈ ಚಿತ್ರವು ಕರ್ನಾಟಕದ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿದೆ. 

ಹೊಂಬಾಳೆ ಫಿಲಂಸ್ ನಿರ್ಮಿಸಿರುವ 'ಕಾಂತಾರ' ಪ್ಯಾನ್ ಇಂಡಿಯಾ ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಕಲೆಕ್ಷನ್‌ನ ಬೆಳವಣಿಗೆಯ ಅಂಕಿಅಂಶಗಳು ಅತ್ಯದ್ಭುತ ಮಟ್ಟದಲ್ಲಿವೆ ಮತ್ತು ಈಗ ಹಿಂದಿ ಮಾರುಕಟ್ಟೆಯಲ್ಲಿ 75 ಕೋಟಿ ಮಾರ್ಕ್ ಅನ್ನು ತಲುಪಿದೆ. ಕಾಂತಾರ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಸತತವಾಗಿ ಬೆಳೆಯುತ್ತಿದೆ, ಒಟ್ಟು 81.05 ಕೋಟಿ ಕಲೆಕ್ಷನ್‌ಗಳನ್ನು ತಲುಪಿದೆ. ಒಟ್ಟಾರೆ ವಿಶ್ವಾದ್ಯಂತ ಸಿನಿಮಾದ ಗಳಿಕೆ 400 ಕೋಟಿ ರೂ. ಗಡಿ ತಲುಪಿರುವ ಕುರಿತು ಮಾಹಿತಿ ಕೇಳಿಬಂದಿದೆ. 

ಇದನ್ನೂ ಓದಿ : ಕಾಂತಾರ ಸಿನಿಮಾ ಸ್ಪೂರ್ತಿದಾಯಕವಾಗಿದೆ ಎಂದ ಕಮಲ್ ಹಾಸನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More