Home> Entertainment
Advertisement

ತೆಲುಗು ಗಾಯಕ ಸಿದ್ದ್ ಶ್ರೀರಾಮ್ ಮ್ಯಾಜಿಕಲ್ ವಾಯ್ಸ್‌ನಲ್ಲಿ ಮೂಡಿಬಂದ ಕನ್ನಡ ಹಾಡು!

Sid Sriram: ತೆಲುಗಿನ ಸಿದ್ದ್ ಶ್ರೀರಾಮ್ ತನ್ನ ಕಂಠ ಸಿರಿಯಿಂದಲೇ ಜನರನ್ನು ಮೋಡಿ ಮಾಡುವ ಗಾಯಕ.  ಅವರ ಮ್ಯಾಜಿಕಲ್ ವಾಯ್ಸ್‌ನಲ್ಲಿ ಕನ್ನಡದ ಹಾಡೊಂದು ಫುಲ್ ವೈರಲ್ ಆಗಿದೆ.

ತೆಲುಗು ಗಾಯಕ ಸಿದ್ದ್ ಶ್ರೀರಾಮ್ ಮ್ಯಾಜಿಕಲ್ ವಾಯ್ಸ್‌ನಲ್ಲಿ ಮೂಡಿಬಂದ ಕನ್ನಡ ಹಾಡು!

ತೆಲುಗಿನ ಸಿದ್ದ್ ಶ್ರೀರಾಮ್ (Sid Sriram) ತನ್ನ ಕಂಠ ಸಿರಿಯಿಂದಲೇ ಜನರನ್ನು ಮೋಡಿ ಮಾಡುವ ಗಾಯಕ. ಈಗಾಗಲೇ ಇವರ ಅನೇಕ ಹಾಡುಗಳು ಜನರ ಮನಗೆದ್ದಿವೆ. ಮ್ಯಾಜಿಕಲ್ ವಾಯ್ಸ್‌ಗೆ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ.  'ಪುಷ್ಪ' (Pushpa) ಚಿತ್ರದ ಬಳಿಕ ಇವರ ಅಬ್ಬಿಮಾನಿ ಬಳಗ ದೊಡ್ಡದಾಯಿತು. ಕನ್ನಡದಲ್ಲೂ ಕೂಡ ಸಿದ್ದ್ ಶ್ರೀರಾಮ್ ಹವಾ ಜೋರಾಗಿದೆ.  

ಇದನ್ನೂ ಓದಿ: Prince Mahesh Babu Daughter: ಹಾಡಿನಲ್ಲಿ ಡಾನ್ಸ್ ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದ ಮಹೇಶ್ ಬಾಬು ಪುತ್ರಿ, Video Viral

ಇತ್ತೀಚೆಗೆ ಸಿದ್ದ್ ಶ್ರೀರಾಮ್ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಬಂದಿದ್ದರು. ಲೈವ್‌ನಲ್ಲಿ ಕನ್ನಡದ ಅಭಿಮಾನಿಗಳು ಒಂದು ಕನ್ನಡ ಹಾಡನ್ನು (Kannada Song) ಹಾಡಿ ಎಂದು ಮನವಿ ಮಾಡಿದ್ದಾರೆ. ಆಗ ಸಿದ್ದ್ 'ಲೈಫ್ 360' ಚಿತ್ರದ 'ಜಗವೇ ನೀನು' (Jagave Neenu) ಎಂಬ ಹಾಡನ್ನು ಹಾಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ದಿಲ್ ಖುಷ್ ಆಗಿದೆ.

 

 

ಸಿದ್ದ್ ಶ್ರೀರಾಮ್‌ ಪರಭಾಷಾ ಗಾಯಕನಾಗಿದ್ದರೂ ಕನ್ನಡವನ್ನು ಸ್ವಚ್ಚವಾಗಿ ಉಚ್ಚರಿಸಿದ್ದನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಸಿದ್ದ್ ಹಾಡಿರುವ ಈ ಕನ್ನಡದ ಹಾಡು ಫುಲ್ ವೈರಲ್ (Viral Video) ಆಗುತ್ತಿದೆ. ಹೆಚ್ಚು ಖ್ಯಾತಿ ಪಡೆದಿರುವ ಸಿದ್ಧ್‌ಗೆ ಬಹು ಬೇಡಿಕೆ ಇರುವ ಗಾಯಕ.  

ಇದನ್ನೂ ಓದಿ: RRR Pre Release Even : ಪ್ರೇಕ್ಷಕರಿಂದ ನೂಕು ನುಗ್ಗಲು, ಪೊಲೀಸರಿಂದ ಲಘು ಲಾಠಿ ಪ್ರಹಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More