Home> Entertainment
Advertisement

ದೀಪಿಕಾ ಪಾಲಿಗೆ ಮುಳುವಾದ JNU ಭೇಟಿ, ಇದೀಗ ಕೈಯಿಂದ ಜಾರಿದೆ ಈ ಅವಕಾಶ

'ಛಪಾಕ್' ಚಿತ್ರದ ಪ್ರಮೋಶನ್ ಗಾಗಿ JNU ಆವರಣಕ್ಕೆ ಭೇಟಿ ನೀಡಿದ್ದ ದೀಪಿಕಾ ಪಡುಕೋಣೆ ಇದೀಗ ಹಲವಾರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ.

ದೀಪಿಕಾ ಪಾಲಿಗೆ ಮುಳುವಾದ JNU ಭೇಟಿ, ಇದೀಗ ಕೈಯಿಂದ ಜಾರಿದೆ ಈ ಅವಕಾಶ

ನವದೆಹಲಿ: 'ಛಪಾಕ್' ಚಿತ್ರದ ಪ್ರಮೋಶನ್ ಗಾಗಿ JNU ಆವರಣಕ್ಕೆ ಭೇಟಿ ನೀಡಿದ್ದ ದೀಪಿಕಾ ಅವರ ಕ್ರಮಕ್ಕೆ ಅವರ ಅಭಿಮಾನಿಗಳು ತೀವ್ರ ಅಸಮಾಧಾನಗೊಂಡಿರುವ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಸದ್ಯ ದೀಪಿಕಾ ದೇಶ ವಿರೋಧಿ ವಿಚಾರಧಾರೆಯನ್ನು ಹೊಂದಿದ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗುತ್ತಿದೆ ಹಾಗೂ ಅವರು ಕೂಗಿರುವ ದೇಶವಿರೋಧಿ ಘೋಷಣೆಗಳಿಗೆ ಮೌನ ಪ್ರದರ್ಶಿಸಿ ಬೆಂಬಲ ಸೂಚಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇದಾದ ಬಳಿಕ ಅವರ ಚಿತ್ರವನ್ನು ನಿಷೇಧಿಸಲು ಜನರು #BYCOTTdeepika ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಇದೀಗ ಅದರ ಪ್ರಭಾವ ದೀಪಿಕಾ ವ್ಯಕ್ತಿತ್ವ ಅಷ್ಟೇ ಅಲ್ಲ, ಅವರ ಚಲನಚಿತ್ರದ ಗಳಿಕೆಯ ಮೇಲೂ ಕಂಡುಬಂದಿದೆ. ಅವರು ಅಭಿನಯಿಸಿದ ಚಿತ್ರ 'ಛಪಾಕ್' ಬಾಲಿವುಡ್ ಮೇಲೆ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಇನ್ನೊಂದೆಡೆ 'ಛಪಾಕ್' ಜೊತೆ ಬಾಕ್ಸ್ ಆಫೀಸ್ ನಲ್ಲಿ ಬಿಡುಗಡೆಯಾಗಿರುವ ಅಜಯ್ ದೇವಗನ್ ಅವರ ಚಿತ್ರ 'ತಾನಾಜಿ:ದಿ ಅನ್ಸಂಗ್ ವಾರಿಯರ್' ಇಂದಿಗೂ ಕೂಡ ತನ್ನ ಉತ್ತಮ ಪ್ರದರ್ಶನ ಮುಂದುವರೆಸಿದೆ.

ಅಷ್ಟೇ ಅಲ್ಲ ಈ ವಿವಾದದ ಬಳಿಕ ಹಲವು ಬ್ರಾಂಡ್ ಗಳು ದೀಪಿಕಾ ಜೊತೆ ತಮ್ಮ ಕಾಂಟ್ರಾಕ್ಟ್ ಮುಂದುವರೆಸಲು ಹಿಂದೇಟು ಹಾಕಿವೆ. ಇದೇ ವೇಳೆ ಬಾಕ್ಸ್ ಆಫೀಸ್ ಮೇಲೆ 'ಛಪಾಕ್' ನೀಡಿರುವ ನೀರಸ ಪ್ರದರ್ಶನದ ಹಿನ್ನೆಲೆ ಪ್ರದೀಪ್ ಸರ್ಕಾರ್ ನಿರ್ದೇಶನದ ಅವರ ಮುಂಬರುವ ಬಯೋಪಿಕ್ 'ನೋತಿ ಬಿನೋದಿನಿ' ಚಿತ್ರದಲ್ಲಿ ದೀಪಿಕಾ ನಟಿಸದೆ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಅವರ ತಂಡ ದೀಪಿಕಾ ಯಾವುದಾದರೊಂದು ಹಗುರವಾದ ಕಥಾಹಂದರ ಹೊಂದಿದ ಚಿತ್ರದಲ್ಲಿ ನಟಿಸಲು ಬಯಸಿದ್ದಾರೆ ಎಂದಿದೆ.

ಸದ್ಯ ದೀಪೀಕಾ ತೆಗೆದುಕೊಂಡ ಈ ನಿರ್ಣಯದಿಂದ ಐಶ್ವರ್ಯಾ ರೈಗೆ ಲಾಭವಾದಂತೆ ಕಂಡುಬರುತ್ತಿದೆ. ಬಹಳ ಹಿಂದಗಳಿಂದ ಐಶ್ವರ್ಯ ರೈ ಬೆಳ್ಳಿ ತೆರೆಯಿಂದ ದೂರವಿದ್ದು, 2018ರಲ್ಲಿ ಬಿಡುಗಡೆಗೊಂಡ ಅನಿಲ್ ಕಪೂರ್, ರಾಜ್ ಕುಮಾರ್ ರಾವ್ ಅಭಿನಯದ 'ಫನ್ನೇ ಖಾನ್' ಚಿತ್ರದಲ್ಲಿ ಅವರು ಕೊನೆಯಬಾರಿಗೆ ಕಾಣಿಸಿಕೊಂಡಿದ್ದರು. ಪ್ರದೀಪ್ ಸರ್ಕಾರ್ ನಿರ್ದೇಶಿಸುತ್ತಿರುವ 'ನೋತಿ ಬಿನೋದಿನಿ' ಚಿತ್ರದಲ್ಲಿ ನಟಿಸಲು ಐಶ್ವರ್ಯಾ ರೈ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಮೂಲಗಳು ವರದಿಮಾಡಿವೆ.

ಬಂಗಾಳ ಚಿತ್ರರಂಗದಲ್ಲಿ 'ನೋತಿ ಬಿನೋದಿನಿ' ಒಂದು ಲೋಕಪ್ರೀಯ ಹೆಸರಾಗಿದ್ದು, ಬಂಗಾಳ ನಾಟ್ಯರಂಗ ಮತ್ತು ಚಲನಚಿತ್ರಕ್ಕೆ ಅವರು ನೀಡಿರುವ ಕೊಡುಗೆಗಾಗಿ ಅವರನ್ನು ಇಂದಿಗೂ ಕೂಡ ನೆನಪಿಸಿಕೊಳ್ಳಲಾಗುತ್ತದೆ.

Read More