Home> Entertainment
Advertisement

ಆನ್‌ಲೈನ್‌ನಲ್ಲಿ 'ಜವಾನ್' ಲೀಕ್: ಪೈರಸಿಗೆ ಬಲಿಯಾಗುತ್ತಾ ಕಿಂಗ್‌ ಖಾನ್‌ ನ್ಯೂ ಸಿನಿಮಾ?

Jawan HD Video Leak : ಬಹು ನಿರೀಕ್ಷೆಯ ಜವಾನ್‌ ಸಿನಿಮಾ ನಿನ್ನೆ (ಸೆ.7) ಗ್ರಾಂಡ್‌ ಆಗಿ ರಿಲೀಸ್‌ ಆಗಿದೆ. ಸದ್ಯ ಮೂರು ಭಾಷೆಗಳಲ್ಲಿ ಈ ಸಿನಿಮಾ ನಿರೀಕ್ಷೆಯಷ್ಟು ಗಳಿಸಿ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಧೂಳೀಪಟ ಮಾಡುತ್ತಿದೆ. ಇದೀಗ ಈ ಚಿತ್ರ ಹಲವಾರು ವೆಬ್‌ಸೈಟ್‌ಗಳಲ್ಲಿ ಸೋರಿಕೆಯಾಗಿದೆ ಎನ್ನಲಾಗುತ್ತಿದೆ. 
 

ಆನ್‌ಲೈನ್‌ನಲ್ಲಿ 'ಜವಾನ್' ಲೀಕ್: ಪೈರಸಿಗೆ ಬಲಿಯಾಗುತ್ತಾ ಕಿಂಗ್‌ ಖಾನ್‌ ನ್ಯೂ ಸಿನಿಮಾ?

Jawan : ಜವಾನ್‌ ಚಿತ್ರ ತನ್ನ ದೊಡ್ಡ ತಾರಾಬಳಗದಿಂದಲೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಸಿನಿಮಾ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ.  ಅಟ್ಲಿ ನಿರ್ದೇಶನದಡಿಯಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಹಿರೋ ಆಗಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಬಹುತೇಕ ಸೀನ್‌ಗಳು ಅಭಿಮಾನಗಳಿಗೆ ಸಖತ್‌ ಖುಷಿ ನೀಡುತ್ತಿವೆ. ಇನ್ನು ಈ ಸಿನಿಮಾದ ಮತ್ತೊಂದು ವಿಶೇಷತೆಯೆಂದರೆ ಲೇಡಿ ಸೂಪರ್‌ ಸ್ಟಾರ್‌, ಸೌತ್‌ ಬ್ಯೂಟಿ ನಯನತಾರಾ ಇದೇ ಚಿತ್ರದ ಮೂಲಕ ಬಾಲಿವುಡ್‌ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಅಲ್ಲದೇ ಈ ಸಿನಿಮಾ ಹೆಚ್ಚು ಸೌತ್‌ ನಟ ನಟಿಯರನ್ನು ಒಳಗೊಂಡಿದೆ.

ಇದನ್ನೂ ಓದಿ-Jawan Collection Day 1 : ಜವಾನ್‌ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನವೇ ಹೊಸ ದಾಖಲೆ

ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್‌ ಪಡೆಯುತ್ತಿರುವ ಸಿನಿಮಾಗೆ ಇದೀಗ ಕಂಟಕವೊಂದು ಎದುರಾಗಿದೆ. ಹೌದು ಜವಾನ್‌ ಸಿನಿಮಾ ಎಲ್ಲ ಕಡೆಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಪಡೆಯುತ್ತಿದೆ. ಈ ನಡುವೆ ಈ ಚಿತ್ರ ಪೈರಸಿಯಾಗಿದೆ. ಹಲವಾರು ವೆಬ್‌ಸೈಟ್‌ಗಳಲ್ಲಿ ಸಿನಿಮಾ ಸೋರಿಕೆಯಾಗಿದೆ. 

ಕೆಲವು ವರದಿಗಳ ಪ್ರಕಾರ ಟೊರೆಂಟ್ ವೆಬ್‌ಸೈಟ್‌ಗಳು, ತಮಿಳು ರಾಕರ್ಸ್, ಟೆಲಿಗ್ರಾಮ್ ಮತ್ತು ಮೂವೀರುಲ್ಜ್‌ನಲ್ಲಿ ಹೆಚ್‌ಡಿ ಫಾರ್ಮ್ಯಾಟ್‌ನಲ್ಲಿ ಜವಾನ್‌ ಆನ್‌ಲೈನಲ್ಲಿ ಲೀಕ್‌ ಆಗಿದೆ. ಈ ಸಿನಿಮಾ ಬಿಡುಗಡೆ ದಿನವೇ ಲೀಕ್‌ ಆಗಿರುವುದರಿಂದ ಇದು ಚಿತ್ರದ ಕಲೆಕ್ಷನ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದರೆ ಇದು ಶಾರುಖ್‌ ಅವರ ಸಿನಿಮಾ ಆಗಿರುವುದರಿಂದ ಬಾಕ್ಸ್ ಆಫೀಸ್ ಕಲೆಕ್ಷನ್‌ ಮೇಲೆ ಯಾವ ಪರಿಣಾಮವೂ ಬೀರಲಾಗದು ಎನ್ನುವುದು ಸಿನಿಮಾ ವಿಶ್ಲೇಷಕರ ಅಭಿಪ್ರಾಯವಾಗಿದೆ. 

ಇದನ್ನೂ ಓದಿ-ಭೋಜ್‌ಪುರಿ ಬ್ಯೂಟಿ ನಮ್ರತಾ ಮಲ್ಲ ಹಾಟ್‌ ಫೋಟೋಸ್‌ ವೈರಲ್‌ : ನೋಡಿ ಬೆರಗಾದ ಫ್ಯಾನ್ಸ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

 

Read More