Home> Entertainment
Advertisement

ಜಾಲತಾಣ ನಕಲಿ ಮಾಡಿ ದುರ್ಬಳಕೆ ಮಾಡುತ್ತಿರುವವರ ವಿರುದ್ಧ ಜಗ್ಗೇಶ್ ದೂರು

ತಮ್ಮ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಇಲ್ಲಸಲ್ಲದ ಹೇಳಿಕೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಗ್ಗೇಶ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಜಾಲತಾಣ ನಕಲಿ ಮಾಡಿ ದುರ್ಬಳಕೆ ಮಾಡುತ್ತಿರುವವರ ವಿರುದ್ಧ ಜಗ್ಗೇಶ್ ದೂರು

ಬೆಂಗಳೂರು: ಟ್ವಿಟ್ಟರ್'ನಲ್ಲಿ ಖಾತೆಗಳನ್ನು ನಕಲು ಮಾಡಿ ಸೃಷ್ಟಿಸಿ ದುರ್ಬಳಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನವರಸನಾಯಕ ಜಗ್ಗೇಶ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಕಲಿ ಫಾಲೋವರ್'ಗಳು, ನಕಲಿ ಖಾತೆ ಸೃಷ್ಟಿಸಿ ಇಲ್ಲಸಲ್ಲದ ಟ್ವೀಟ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವ ಕಿಡಿಗೇಡಿಗಳ ಕಾಟ ಜಗ್ಗೇಶ್ ಅವರಿಗೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದರಿಂದ ಬೇಸತ್ತಿರುವ ಅವರು ಸಾಮಾಜಿಕ ಜಾಲತಾಣ ನಕಲು ಮಾಡಿ,  ತಮ್ಮ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಇಲ್ಲಸಲ್ಲದ ಹೇಳಿಕೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಹೆಸರು ಹಾಳುಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರಿನ ಮಲ್ಲೇಶ್ವರಂ ಪೋಲಿಸ್ ಠಾಣೆ ಹಾಗೂ ಸೈಬರ್ ಕ್ರೈಂಗೂ ಸಹ ದೂರು ನೀಡಿರುವುದಾಗಿ ಜಗ್ಗೇಶ್ ತಿಳಿಸಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ಯಾರೋ ಕಿಡಿಗೇಡಿಗಳು ನನ್ನ ಖಾತೆ ಚಿತ್ರ ತೆಗೆದು ನಕಲು  ಮಾಡಿ ಅದರಲ್ಲಿ ಜನರಿಗೆ ಗೊಂದಲ ಮೂಡಿಸುವ ಸಂದೇಶಗಳನ್ನು ನಾನೇ ಹಾಕಿದಂತೆ ಹಾಕಿ ವೈರಲ್ ಮಾಡುತ್ತಿದ್ದಾರೆ. ಚುನಾವಣೆ ಸಮಯ ಆದ್ದರಿಂದ ಫೇಕ್ ಐಡಿ ಹಾಗೂ ಪ್ರಸಿದ್ಧ ಜನರ ಬಗ್ಗೆ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯ ಮೂಡಿಸುವ ಹುನ್ನಾರ ನಡೆಯುತ್ತಿದೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
 

Read More