Home> Entertainment
Advertisement

Hostel Hudugaru Bekagiddare : ಹಾಸ್ಟೆಲ್‌ ಹುಡುಗರಿಗೆ ಲೆಕ್ಚರರ್‌ ಪದ್ಮಾವತಿ..ಟ್ರೈಲರ್‌ ಮಸ್ತ್‌ ಐತಿ

Hostel Hudugaru Bekagiddare Trailer : ಸಣ್ಣ ಸಣ್ಣ ಸ್ಯಾಂಪಲ್‌ಗಳ ಮೂಲಕ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಸಿನಿಮಾ ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ. ಇದೀಗ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

Hostel Hudugaru Bekagiddare : ಹಾಸ್ಟೆಲ್‌ ಹುಡುಗರಿಗೆ ಲೆಕ್ಚರರ್‌ ಪದ್ಮಾವತಿ..ಟ್ರೈಲರ್‌ ಮಸ್ತ್‌ ಐತಿ

Hostel Hudugaru Bekagiddare : ಕಿರಿಕ್‌ ಮಾಡುವ ವಾರ್ಡನ್‌ ಕಾಟದಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್‌ ಹುಡುಗರು ಏನೆಲ್ಲಾ ಮಾಡುತ್ತಾರೆ, ಅವರಿಂದ ಏನೆಲ್ಲಾ ಸಮಸ್ಯೆಗಳಾಗುತ್ತೆ ಅನ್ನೋದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಆದ್ರೆ ಇಷ್ಟೆ ಕಥೆಯಲ್ಲ. ದೊಡ್ಡ ತಿರುವು ಇದೆ. ಈ ಹಾಸ್ಟೆಲ್‌ ಹುಡುಗರ ಹಾವಳಿ ಯಾಕ್‌ ಕೇಳ್ತಿರಾ..? ಬರೀ ಟ್ರೈಲರ್‌ನಲ್ಲಿಯೇ ಹುಚ್ಚೆಬ್ಬಿಸಿದೆ ಇನ್ನು ಸಿನಿಮಾ ಸಖತ್‌ ಕಿಕ್‌ ಕೊಡೋದು ಗ್ಯಾರಂಟಿ..

ಸಣ್ಣ ಸಣ್ಣ ಗ್ಲಿಂಪ್ಸ್‌ನಿಂದ ಗಮನ ಸೆಳೆದಿದ್ದ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇದೀಗ 4:10 ನಿಮಿಷದ ಟ್ರೇಲರ್‌ ಬಿಡುಗಡೆ ಮಾಡಿದೆ. ಇದರಲ್ಲಿ ಹುಡುಗರ ಕಿತಾಪತಿ, ಮೋಜು ಮಸ್ತಿ, ಹಾಸ್ಟೆಲ್‌ ವಾರ್ಡನ್‌ ಕಾಟವನ್ನು ನೀವು ನೋಡಬಹುದು.

ಇದನ್ನೂ ಓದಿ-Rashmika Mandanna : ರಶ್ಮಿಕಾ ಬಾಯಲ್ಲಿ ಕನ್ನಡ..ಯಪ್ಪೊ ಏನಿದು ದುರಂತ ಎಂದ ನೆಟ್ಟಿಗರು..!

ಅದ್ಧೂರಿ ಕಾರ್ಯಕ್ರಮದಲ್ಲಿ ಈ ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಸಿನಿಮಾ ಟ್ರೇಲರ್‌ ಬಿಡುಗಡೆಯಾಯಿತು. ಅಶ್ವಿನಿ ಪುನೀತ್‌ ರಾಜಕುಮಾರ್‌, ರಿಷಬ್‌ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್‌ವುಡ್‌ ತಾರೆಯರು ಚಿತ್ರಕ್ಕೆ ಆಶೀರ್ವಾದಿಸಿದ್ದಾರೆ. ಇನ್ನು ಈ ಸಿನಿಮಾ ಜುಲೈ 21ಕ್ಕೆ ತೆರೆಗೆ ಬರಲಿದ್ದು, ಟ್ರೇಲರ್‌ನಿಂದ ಸಿನಿಮಾದ ಮೇಲಿನ ಭರವಸೆ ಇನ್ನು ಹೆಚ್ಚಾಗಿದೆ.

ನಿತಿನ್‌ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಅಜನೀಶ್‌ ಲೋಕನಾಥ್‌ ಅವರ ಸಂಗೀತವಿದ್ದು, ರಕ್ಷಿತ್‌ ಶೆಟ್ಟಿ ಪರವಂ ಬ್ಯಾನರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.    

ಇದನ್ನೂ ಓದಿ-ಆಫ್ ಸೆಂಚೂರಿ ಬಾರಿಸಿದ ಡೇರ್ ಡೆವಿಲ್ ಮುಸ್ತಫಾ.. ಚಿತ್ರತಂಡದ ಸಂಭ್ರಮ   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

                                                                                                                                                                                                                                                                                       

 

Read More