Home> Entertainment
Advertisement

'ರಿಚರ್ಡ್ ಆಂಟನಿ' ಚಿತ್ರ ನಿರ್ಮಾಣದಿಂದ ಸರಿದ ಹೊಂಬಾಳೆ: ರಕ್ಷಿತ್‌ಗೆ ಸಾಥ್‌ ಕೊಡುವವರಾರು?

Richard Anthony Update: ಸಿಂಪಲ್‌ ಸ್ಟಾರ್‌ ಹಾಗೂ ಡೈರೆಕ್ಟರ್‌ ರಕ್ಷಿತ್ ಶೆಟ್ಟಿಯ 'ಉಳಿದವರು ಕಂಡಂತೆ' ಸೀಕ್ವೆಲ್‌ ರಿಚರ್ಡ್‌ ಆಂಟನಿ ಸಿನಿಮಾವನ್ನು  ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುವುದು ಖಚಿತವಾಗಿತ್ತು. ಆದರೆ ಸದ್ಯ ಈ ಸಂಸ್ಥೆ ಚಿತ್ರ ನಿರ್ಮಾಣದಿಂದ ಸರಿದಿದೆ. ಹಾಗಾದೇ ಈ ಸಿನಿಮಾವನ್ನು ನಿರ್ಮಿಸುವುದಾದರೂ ಯಾರು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌.
 

'ರಿಚರ್ಡ್ ಆಂಟನಿ' ಚಿತ್ರ ನಿರ್ಮಾಣದಿಂದ ಸರಿದ ಹೊಂಬಾಳೆ: ರಕ್ಷಿತ್‌ಗೆ ಸಾಥ್‌ ಕೊಡುವವರಾರು?

Richard Anthony And Hombale Films: ಸ್ಯಾಂಡಲ್‌ವುಡ್‌ ಸಿಂಪಲ್‌ ಸ್ಟಾರ್‌ ಹಾಗೂ ಡೈರೆಕ್ಟರ್‌ ರಕ್ಷಿತ್ ಶೆಟ್ಟಿ ಹತ್ತು ವರ್ಷಗಳ ಹಿಂದೆ 'ಉಳಿದವರು ಕಂಡಂತೆ' ಸಿನಿಮಾ ಬಂದು ಹೋಗಿದ್ದ  ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿ, ಆದರೆ ಒಂದು ವರ್ಗದ ಪ್ರೇಕ್ಷಕರಿಗೆ ಮಾತ್ರ ಇಷ್ಟವಾಗಿತ್ತು. ಬಳಿಕ ಕಲ್ಟ್ ಕ್ಲಾಸಿಕ್ ಸ್ಟೇಟಸ್ ಪಡೆದುಕೊಂಡಿದ್ದು, ಅದರಲ್ಲೂ ರಿಚರ್ಡ್ ಆಂಟನಿ ಆಗಿ ರಕ್ಷಿತ್ ಪರ್ಫಾರ್ಮನ್ಸ್ ಪ್ರೇಕ್ಷಕರಿಗೆ ಮಜಾ ಕೊಟ್ಟಿತ್ತು. ರಕ್ಷಿತ್‌ ಫ್ಯಾನ್ಸ್‌ ರಿಚರ್ಡ್ ಆಂಟನಿ ಕುರಿತು ಒಂದು ಚಿತ್ರವನ್ನು ಮಾಡಬೇಕೆಂದು  ಕೇಳಿದಕ್ಕೆ, 'ಉಳಿದವರು ಕಂಡಂತೆ' ಸೀಕ್ವೆಲ್ ಘೋಷಣೆ ಆಗಿತ್ತು. 

ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಬಹಳ ವರ್ಷಗಳ ಬಳಿಕ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು, 'ರಿಚರ್ಡ್ ಆಂಟನಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.ಈಗಾಗಲೇ ಸಿನಿಮಾ ಕತೆ, ಚಿತ್ರಕಥೆ ಸಿದ್ಧವಾಗಿದೆ. ಸಣ್ಣ ಟೀಸರ್ ಮೂಲಕ ಬಹಳ ಹಿಂದೆಯೇ ಸಿನಿಮಾ ಘೋಷಣೆ ಆಗಿದ್ದು, ಇದನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುವುದು ಖಚಿತವಾಗಿತ್ತು. ಹೊಂಬಾಳೆ ಸಂಸ್ಥೆ ಕೂಡ ಜೊತೆಯಾಗಿದ್ದರಿಂದ ದೊಡ್ಡಮಟ್ಟದಲ್ಲಿ ಚಿತ್ರ ಮೂಡಿ ಬರುತ್ತದೆ ಎನ್ನುವ ನಿರೀಕ್ಷೆ ಇದ್ದು, ಆದರೆ ಸದ್ಯ ಹೊಂಬಾಳೆ ಹಾಗೂ ರಕ್ಷಿತ್ ನಡುವೆ ವೈಮನಸ್ಸು ಮೂಡಿದೆ. 

ಇದನ್ನೂ ಓದಿ: Janhvi Kapoor: ಬ್ಲ್ಯಾಕ್ ಡ್ರೆಸ್‌ನಲ್ಲಿ ಜಾನ್ವಿ ಕಪೂರ್‌ ಮಿಂಚಿಂಗ್..‌ ಮೋಹಕ ಅತಿ ರೋಚಕ ಎಂದ ನೆಟ್ಟಿಜನ್‌

ಆದರೆ ಇತ್ತೀಚೆಗೆ ಈ ವಿಚಾರದ ಬಗ್ಗೆ ಅನುಮಾನ ಶುರುವಾಗಿದ್ದು, ಇದೇ ಸಂದರ್ಭದಲ್ಲಿ ಹೊಂಬಾಳೆ ಸಂಸ್ಥೆ 'ರಿಚರ್ಡ್ ಆಂಟನಿ' ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದೆ, ರಕ್ಷಿತ್ ಶೆಟ್ಟಿ ಖುದ್ದು ಸಿನಿಮಾ ನಿರ್ಮಾಣ ಮಾಡುತ್ತಾರೆ? ಎನ್ನುವ ವದಂತಿ ಹರಿದಾಡುತ್ತಿದೆ. ಇದರ ಬಗ್ಗೆ ಇಲ್ಲಿಯವರೆಗೂ ಯಾರೊಬ್ಬರು ಪ್ರತಿಕ್ರಿಯಿಸದ ಕಾರಣ ಗಾಳಿಸುದ್ದಿಯನ್ನೇ ಕೆಲವರು ನಿಜವೆಂದು ನಂಬಿದ್ದು, ಆದರೆ ಕೆಲ ಅಭಿಮಾನಿಗಳು ರಕ್ಷಿತ್ ಶೆಟ್ಟಿ ಪರ ನಿಂತು ಒಳ್ಳೆ ನಿರ್ಧಾರ, ನೀವೇ ಸಿನಿಮಾ ಮಾಡಿ ಎನ್ನುತ್ತಿದ್ದಾರೆ.'ರಿಚರ್ಡ್ ಆಂಟನಿ' ಚಿತ್ರವನ್ನು ಹೊಂಬಾಳೆ ನಿರ್ಮಾಣ ಮಾಡಲ್ಲ. ಹಾಗಾಗಿ ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋಸ್ ಸಂಸ್ಥೆ ಅಡಿಯಲ್ಲೇ ಸಿನಿಮಾ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. 

ಇತ್ತೀಚೆಗೆ KVN ಹಾಗೂ ರಕ್ಷಿತ್ ನಡುವೆ ಇತ್ತೀವೆಗೆ ಒಳ್ಳೆ ಬಾಂಧವ್ಯವಿರುವುದರಿಂದ, KVN ಪ್ರೊಡಕ್ಷನ್ಸ್ ಸಂಸ್ಥೆ ರಿಚರ್ಡ್ ಆಂಟನಿ ಚಿತ್ರ ನಿರ್ಮಾಣಕ್ಕೆ ರಕ್ಷಿತ್ ಶೆಟ್ಟಿ ಜೊತೆ ಕೈ ಜೋಡಿಸುತ್ತದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಕಳೆದ ವರ್ಷ ತೆರೆಕಂಡ ರಕ್ಷಿತ್ ನಿರ್ಮಿಸಿ ನಟಿಸಿದ 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳನ್ನು ಕೂಡ KVN ಪ್ರೊಡಕ್ಷನ್ಸ್ ವಿತರಣೆ ಮಾಡಿತ್ತು. ಸದು ಕೆವಿನ್‌ ಸಂಸ್ಥೆ'ಟಾಕ್ಸಿಕ್' ಹಾಗೂ 'KD' ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಹಾಗೆಯೇ ದರ್ಶನ್-ಪ್ರೇಮ್ ಕಾಂಬಿನೇಷನ್‌ ಚಿತ್ರ ಕೂಡ ಘೋಷಣೆ ಆಗಿದ್ದು, ಇದನ್ನು ಸಹ ಈ ಸಂಸ್ಥೆಯ ನಿರ್ಮಿಸುತ್ತಿದೆ. ಇದೀಗ 'ರಿಚರ್ಡ್ ಆಂಟನಿ' ಸಿನಿಮಾ ನಿರ್ಮಾಣಕ್ಕೂ ಸಿಂಪಲ್ ಸ್ಟಾರ್ ಜೊತೆ ಕೈಜೋಡಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. 

ಇದನ್ನೂ ಓದಿ: ನಾಡದೇವತೆ ಸನ್ನಿಧಿಯಲ್ಲಿ ಧನ್ವೀರ್‌ 'ಹಯಗ್ರೀವ' ಚಿತ್ರಕ್ಕೆ ಚಾಲನೆ..!

KVN ಹಾಗೂ ಪರಂವಃ ಜಂಟಿಯಾಗಿ 'ರಿಚರ್ಡ್ ಆಂಟನಿ' ಸಿನಿಮಾ ನಿರ್ಮಿಸಬಹುದು ಎನ್ನುವುದು ಕೆಲವರ ಲೆಕ್ಕಾಚಾರ. 'ರಿಚರ್ಡ್ ಆಂಟನಿ' ಚಿತ್ರದಿಂದ ಹೊಂಬಾಳೆ ಸಂಸ್ಥೆ ಹೊರಬಂದಿದೆ ಎನ್ನುವ ವದಂತಿ ಹೇಗಿ ಶುರುವಾಯಿತು ಎನ್ನುವುದು ಗೊತ್ತಿಲ್ಲ. ಆದರೆ ಇದೇ ವಿಚಾರದ ಬಗ್ಗೆ ಮಾಹಿತಿ ಇದ್ದ ಯೂಟ್ಯೂಬ್ ವಿಡಿಯೋಗೆ ಟ್ವಿಟ್ಟರ್‌ನಲ್ಲಿ ರಕ್ಷಿತ್ ಲೈಕ್ ಕೊಟ್ಟಿದ್ದರು ಎನ್ನಲಾಗ್ತಿದೆ. ಇದನ್ನು ನೋಡಿ ನೋಡಿ ಅಂತೆ ಕಂತೆ ಎಲ್ಲಾ ನಿಜ ಆಗುತ್ತದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More