Home> Entertainment
Advertisement

ಯುವರತ್ನ ಟೀಸರ್ ಬಿಡುಗಡೆ; ರಗ್ಬಿ ಪ್ಲೇಯರ್ ಆಗಿ ಅಪ್ಪು ಕಮಾಲ್

ದಸರಾ ಹಬ್ಬದ ನಿಮಿತ್ತ ಬಿಡುಗಡೆಯಾಗಿರುವ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ ಟೀಸರ್ ಅಭಿಮಾನಿಗಳಿಗೆ ರಸದೌತಣ ನಿಡುವಂತಿದೆ.

ಯುವರತ್ನ ಟೀಸರ್ ಬಿಡುಗಡೆ; ರಗ್ಬಿ ಪ್ಲೇಯರ್ ಆಗಿ ಅಪ್ಪು ಕಮಾಲ್

ಬೆಂಗಳೂರು: ದಸರಾ ಹಬ್ಬದ ನಿಮಿತ್ತ ಬಿಡುಗಡೆಯಾಗಿರುವ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ ಟೀಸರ್ ಅಭಿಮಾನಿಗಳಿಗೆ ರಸದೌತಣ ನಿಡುವಂತಿದೆ.

ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿರುವ ಪುನೀತ್ ರಾಜ್ ಕುಮಾರ್ ಎಂದಿನಂತೆ ತಮ್ಮ ಕಡಕ್ ಪವರ್ ಫುಲ್ ಲುಕ್ ನಲ್ಲಿ ಕಂಗೊಳಿಸುತ್ತಾರೆ. ಈ ಹಿಂದೆ ಪುನೀತ್ ರಾಜಕುಮಾರಗೆ 'ರಾಜಕುಮಾರ' ಚಿತ್ರ ನಿರ್ದೇಶಿಸಿ ಗಮನ ಸೆಳೆದಿದ್ದ ಸಂತೋಷ ಆನಂದ್ ರಾಮ್ ಈಗ ಪುನೀತ್ ಗೆ ಭಿನ್ನವಾದ ಕಥೆಯೊಂದನ್ನು ಹೆಣೆದಿದ್ದಾರೆ. ವಿಶೇಷವೆಂದರೆ ಈಗ ಪುನೀತ್ ರಾಜಕುಮಾರ್ ಅವರು ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣದಲ್ಲಿ ಮೂರನೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.ಈಗ ಹಿಂದೆ ಅವರು ನಿನ್ನಿಂದಲೇ, ಹಾಗೂ ರಾಜಕುಮಾರ್ ಚಿತ್ರದಲ್ಲಿ ನಟಿಸಿ ಯಶಸ್ವಿ ಕಂಡಿದ್ದರು. 

ಈ ದುನಿಯಾದಲ್ಲಿ ಮೂರು ತರ ಗಂಡಸರಿಸುತ್ತಾರೆ. ನಿಯಮವನ್ನು ಪಾಲೋ ಮಾಡೋನು, ನಿಯಮವನ್ನು ಬ್ರೇಕ್ ಮಾಡೋನು, ಮೂರನೇಯವನು ನನ್ನ ತರ ರೂಲ್ ಮಾಡೋನು' ಎನ್ನುವ ಟೀಸರ್ ನಲ್ಲಿನ ಪುನೀತ್ ಡೈಲಾಗ್ ಆಕರ್ಷಣೆ ಕೇಂದ್ರ ಬಿಂದು ಎನ್ನಬಹುದು. ಯುಟ್ಯೂಬ್ ನಲ್ಲಿ ಬಿಡುಗಡೆಯಾದ 24 ಗಂಟೆಯಲ್ಲಿ ದೇಶಾದ್ಯಂತ ಟ್ರೆಂಡಿಂಗ್ ನಲ್ಲಿ 13 ನೇ ಸ್ಥಾನದಲ್ಲಿರುವ 'ಯುವರತ್ನ' ಟೀಸರ್ ನ್ನು ಈಗಾಗಲೇ 9 ಲಕ್ಷಕ್ಕೂ ಅಧಿಕ ಬಾರಿ ವಿಕ್ಷಿಸಲಾಗಿದೆ.

ಚಿತ್ರದ ತಾರಾಗಣದಲ್ಲಿ ಸಾಯ್ಯೇಷಾ ಸೈಗಲ್, ಸೋನು ಗೌಡ, ಧನಂಜಯ, ವಶಿಷ್ಟ ಎನ್ ಸಿಂಹ, ಬೊಮನ್ ಇರಾನಿ, ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದಾರೆ. ಸಂಗೀತವನ್ನು ಎಸ್.ತಮನ್ ನೀಡಿದ್ದಾರೆ. 

Read More