Home> Entertainment
Advertisement

James To Release Tomorrow: ಶಿವಣ್ಣ ಮಾಡಬೇಕಿದ್ದ ಸಿನಿಮಾ ಪವರ್‌ ಸ್ಟಾರ್‌ ಮಾಡಿದ್ದು ಏಕೆ ಗೊತ್ತಾ..?

James Film Updates - ನಾಳೆ ಕರುನಾಡಲ್ಲಿ 'ಜೇಮ್ಸ್' (James) ಜಾತ್ರೆ ಭರ್ಜರಿಯಾಗಿ ನಡೆಯಲಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, 'ಜೇಮ್ಸ್' (James Latest News) ಕಣ್ತುಂಬಿಕೊಳ್ಳಲು ಅಭಿಮಾನಿ ಬಳಗ ತುದಿಗಾಲಲ್ಲಿ ನಿಂತಿದೆ. 

James To Release Tomorrow: ಶಿವಣ್ಣ ಮಾಡಬೇಕಿದ್ದ ಸಿನಿಮಾ ಪವರ್‌ ಸ್ಟಾರ್‌ ಮಾಡಿದ್ದು ಏಕೆ ಗೊತ್ತಾ..?

James Film Updates - ನಾಳೆ ಕರುನಾಡಲ್ಲಿ 'ಜೇಮ್ಸ್' (James) ಜಾತ್ರೆ ಭರ್ಜರಿಯಾಗಿ ನಡೆಯಲಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, 'ಜೇಮ್ಸ್' (James Latest News) ಕಣ್ತುಂಬಿಕೊಳ್ಳಲು ಅಭಿಮಾನಿ ಬಳಗ ತುದಿಗಾಲಲ್ಲಿ ನಿಂತಿದೆ. ಆದರೆ ಇದೇ ಹೊತ್ತಲ್ಲಿ ಅಪ್ಪು ಬಗ್ಗೆ ಒಂದು ಮಹತ್ವದ ಮಾಹಿತಿಯನ್ನು ನಿರ್ದೇಶಕ ಮಹೇಶ್ ಬಾಬು (Director Mahesh Babu) ನೀಡಿದ್ದಾರೆ.

ಅಪ್ಪು ಮೊದಲ ಸಿನಿಮಾ ಮಾಡಿದ್ದು ಹೇಗೆ, ಶಿವಣ್ಣ (Shivaraj Kumar) ಮಾಡಬೇಕಿದ್ದ ಸಿನಿಮಾ ಅಪ್ಪು ಮಾಡಿದ್ದು ಏಕೆ ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ ನಿರ್ದೇಶಕ ಮಹೇಶ್ ಬಾಬು.

ಇದನ್ನೂ ಓದಿ-ಕನ್ನಡ ಚಿತ್ರರಂಗದಲ್ಲಿ ಕನ್ನಡತಿಯರಿಗೇ ಅವಕಾಶ ಸಿಗ್ತಿಲ್ವಾ!?

'ಅಪ್ಪು' ಸಿನಿಮಾ ಹಿಟ್..!
ಅಷ್ಟಕ್ಕೂ ಪವರ್‌ ಸ್ಟಾರ್‌ ಅಭಿನಯದ ಮೊದಲ ಸಿನಿಮಾ 'ಅಪ್ಪು' (Appu) ಚಿತ್ರದ ಕಥೆಯನ್ನ ಪುರಿ ಜಗನ್ನಾಥ್ (Puri Jagannath) ಮೊದಲು ನಟ ಶಿವಣ್ಣಗೆ ಹೇಳಿದ್ದರಂತೆ. ಆದರೆ ಶಿವಣ್ಣ ಅಪ್ಪುಗೆ ಈ ಕಥೆ ಸರಿಯಾಗುತ್ತೆ ಎಂದು ಮನೆಯಲ್ಲಿ ಮಾತುಕತೆ ನಡೆಸಿದ್ದರಂತೆ. ನಂತರ 'ಅಪ್ಪು' ಸಿನಿಮಾ ಸೆಟ್ಟೇರಿ, ದೊಡ್ಡ ಹಿಟ್‌ ಆಯಿತು. ಈ ಮೂಲಕ ಬಾಲ ನಟನಾಗಿ ಮಿಂಚಿದ್ದ ಡಾ.ಪುನೀತ್ ರಾಜ್‌ಕುಮಾರ್ (Dr. Puneeth Rajakumar) ನಾಯಕ ನಟನಾಗಿಯೂ ದೊಡ್ಡ ಹಿಟ್‌ ಸಿನಿಮಾ ನೀಡಿದ್ದರು.

ಇದನ್ನೂ ಓದಿ-ಹೊಸ ಅಪ್‌ಡೇಟ್‌ ಕೊಟ್ಟ ‘ಕೆಜಿಎಫ್’ ಟೀಂ..! ಹೇಗಿದೆ ಗೊತ್ತಾ ರಾಕಿ v/s ಅಧೀರನ ಫೈಟ್..?

ಅಂದಹಾಗೆ ಶಿವರಾಜ್ ಕುಮಾರ್ ಅಭಿನಯದ 'ಎಕೆ 47', 'ಯುವರಾಜ', 'ಭಾವ ಭಾಮೈದ' ಸಿನಿಮಾಗಳಲ್ಲಿ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿದ್ದ ಮಹೇಶ್ ಬಾಬು ಅವರು ಡಾ.ಪುನೀತ್ ರಾಜ್‌ಕುಮಾರ್ ನಟನೆಯ 2ನೇ ಸೂಪರ್ ಹಿಟ್ ಸಿನಿಮಾ 'ಆಕಾಶ್' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಹಾಗೇ ಪವರ್‌ ಸ್ಟಾರ್‌ ಡಾ.ಪುನೀತ್ ರಾಜ್‌ಕುಮಾರ್ ಅಭಿನಯದ ಮತ್ತೊಂದು ಬ್ಲಾಕ್ ಬಸ್ಟರ್ 'ಅರಸು' (Arasu) ಸಿನಿಮಾಗೆ ಆಕ್ಷನ್‌ ಕಟ್ ಹೇಳಿದ್ದೂ ಇವರೇ.

ಇದನ್ನೂ ಓದಿ-ಕಿರಣ್ ರಾವ್ ಜೊತೆಗೆ ಡೈವೋರ್ಸ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅಮೀರ್ ಖಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More