Home> Entertainment
Advertisement

Bigg Boss OTT 2: ಬಿಗ್‌ ಬಾಸ್‌ ಒಟಿಟಿ ಸೀಸನ್‌ 2 ರ ಸ್ಪರ್ಧಿಗಳ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ

Bigg Boss OTT season 2 contestants : ಹಿಂದಿಯ ಬಿಗ್ ಬಾಸ್ ಒಟಿಟಿ ಸೀಸನ್‌ 2 ಶುರುವಾಗಿದೆ.  ಟಿವಿ ಗಿಂತ ಒಟಿಟಿ ಸೀಸನ್ ಸ್ವಲ್ಪ ವಿಭಿನ್ನವಾಗಿರುತ್ತೆ. ಆದ್ರೆ ಈ ಬಾರಿ ಬಿಗ್ ಬಾಸ್ ಒಟಿಟಿ ಸೀಸನ್‌ 2 ಹಿಂದಿಯ ನಿರೂಪಕರು ಬದಲಾಗಿದ್ದಾರೆ. 
 

Bigg Boss OTT 2: ಬಿಗ್‌ ಬಾಸ್‌ ಒಟಿಟಿ ಸೀಸನ್‌ 2 ರ ಸ್ಪರ್ಧಿಗಳ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ

Bigg Boss OTT season 2: ಜನರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಅಂದ್ರೆ ಅದು ಬಿಗ್‌ ಬಾಸ್‌. ಇದೀಗ ಬಿಗ್‌ ಬಾಸ್‌ ಒಟಿಟಿ ಸೀಸನ್‌ 2 ಶುರುವಾಗಿದೆ. ಇಂದು ರಾತ್ರಿಯಿಂದ ಪ್ರಿಮೀಯರ್‌ ಆಗಲಿದೆ. ಹಿಂದಿಯ ಬಿಗ್ ಬಾಸ್ ಒಟಿಟಿ ಸೀಸನ್‌ 2 ಶುರುವಾಗಿದೆ.  ಟಿವಿ ಗಿಂತ ಒಟಿಟಿ ಸೀಸನ್ ಸ್ವಲ್ಪ ವಿಭಿನ್ನವಾಗಿರುತ್ತೆ. ಆದ್ರೆ ಈ ಬಾರಿ ಬಿಗ್ ಬಾಸ್ ಒಟಿಟಿ ಸೀಸನ್‌ 2 ಹಿಂದಿಯ ನಿರೂಪಕರು ಬದಲಾಗಿದ್ದಾರೆ. ಬಿಗ್ ಬಾಸ್ ಒಟಿಟಿ ಸೀಸನ್ 1 ರಲ್ಲಿ ಕರಣ್ ಜೋಹರ್ ಹೋಸ್ಟ್‌ ಆಗಿದ್ದರು. ಈ ಬಾರಿ ಬಿಗ್ ಬಾಸ್ ಒಟಿಟಿ 2 ಗೆ ಸಲ್ಮಾನ್‌ ಖಾನ್‌ ನಿರೂಪಕರಾಗಿದ್ದಾರೆ. 

ಬಾಲಿವುಡ್‌ ಭಾಯ್‌ಜಾಬ್‌ ಸಲ್ಮಾನ್ ಖಾನ್ ಅವರ ನಿರೂಪಣೆಯಲ್ಲಿ ಬಿಗ್ ಬಾಸ್ ಒಟಿಟಿ ಸೀಸನ್‌ 2 ಗ್ರ್ಯಾಂಡ್‌ ಆಗಿ ಶುರುವಾಗಿದೆ. ಈ ಸೀಸನ್‌ಗೆ ಯಾರು ಎಂಟ್ರಿ ಕೊಡ್ತಾರೆ ಎಂಬ ಕುತೂಹಲಕ್ಕೆ ಅಂತಿಮ ಉತ್ತರ ಕೂಡ ಸಿಕ್ಕಾಗಿದೆ. ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ OTT 2 ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಬಾರಿ ಬಿಗ್ ಬಾಸ್ ಒಟಿಟಿ ಸೀಸನ್‌ 2 ರಲ್ಲಿ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಇಲ್ಲಿದೆ ನೋಡಿ ಕಂಪ್ಲೀಟ್‌ ಲಿಸ್ಟ್‌. 

ಇದನ್ನೂ ಓದಿ: ಆದಿಪುರುಷ್‌ ಚಿತ್ರ ನಿಷೇದಕ್ಕೆ ಹೆಚ್ಚಿದ ಆಗ್ರಹ..!

ಬಿಗ್ ಬಾಸ್ OTT 2 ನಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳು 

ಅಂಜಲಿ ಅರೋರಾ, ಪಾಲಕ್ ತಿವಾರಿ, ಜನ್ನತ್ ಜುಬೇರ್ ರಹಮಾನಿ, ಸುರಭಿ ಜ್ಯೋತಿ, ಮುನಾವರ್ ಫಾರುಕಿ, ಕನಿಕಾ ಮನ್, ಅಲಿಯಾ ಸಿದ್ದಿಕಿ, ಶಿವಂಗಿ ಜೋಶಿ, ಜಿಯಾ ಶಂಕರ್, ಅಭಿಷೇಕ್ ಮಲ್ಹಾನ್, ಮನಿಷಾ ರಾಣಿ, ಬೇಬಿಕಾ ಧುರ್ವೆ ಈ 12 ಜನ ಸ್ಪರ್ಧಿಗಳು ಬಿಗ್‌ ಬಾಸ್‌ ಒಟಿಟಿ ಮನೆ ಸೇರಿದ್ದಾರೆ.  

ಬಿಗ್ ಬಾಸ್ OTT ಮನೆ ಲುಕ್ 

ಬಿಗ್ ಬಾಸ್ OTT 2 ರಲ್ಲಿ, 'ಸ್ಟ್ರೇಂಜ್‌ ಹೌಸ್' ಥೀಮ್ ಅನ್ನು ಇರಿಸಲಾಗಿದೆ. ಪ್ರವೇಶದ್ವಾರ ಮತ್ತು ಮಲಗುವ ಕೋಣೆಯಿಂದ ಹಿಡಿದು ಭವ್ಯವಾದ ಡೈನಿಂಗ್‌ ಏರಿಯಾವರೆಗೂ, ಪ್ರತಿಯೊಂದು ಮೂಲೆಯು ಕಲಾತ್ಮಕ ಕಥೆಯನ್ನು ಹೇಳುತ್ತದೆ. ದೀಪಗಳು ಮತ್ತು ಇತರ ಅಲಂಕಾರಿಕ ಅಂಶಗಳೊಂದಿಗೆ ಪ್ಲಾಸ್ಟಿಕ್ ಬಾಟಲಿಗಳ ಕಲೆ ಬಿಗ್ ಬಾಸ್ ಮನೆಗೆ ಹೊಸ ಜೀವನವನ್ನು ತುಂಬಿವೆ.

ಇದನ್ನೂ ಓದಿ: Bollywood: ಆದಿಪುರುಷ ನಟಿಯನ್ನು ಮಂಚಕ್ಕೆ ಕರೆದಿದ್ದನಂತೆ ಮನೆ ಮಾಲೀಕ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More