Home> Entertainment
Advertisement

Shivarajkumar : ಮತ್ತೆ 'ಭೈರತಿ ರಣಗಲ್‌' ಅವತಾರದಲ್ಲಿ ಅಬ್ಬರಿಸಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವಣ್ಣ!

 Shivarajkumar New Movie : ಮಡಚಿಟ್ಟಿದ್ದ ಅಧ್ಯಾಯದ ಪುನಾರಾರಂಭ 'The Era, Where It All Began' ಯೆಸ್.. ಮಡಚಿಟ್ಟಿದ್ದ ಅಧ್ಯಾಯವನ್ನ ಮತ್ತೇ ಆರಂಭ ಮಾಡಲು ಶಿವಣ್ಣ ಸಜ್ಜಾಗಿದ್ದಾರೆ. ವೇದ ಸಿನಿಮಾದಲ್ಲಿ ಅದ್ಭುತ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡು ಅತ್ಯದ್ಭುತ ಸ್ಟೋರಿಯನ್ನ ಕೊಟ್ಟ ಶಿವಣ್ಣ ಇತ್ತೀಚಿಗೆ ಫುಲ್ ಬ್ಯುಸಿ ಆಗಿದ್ದಾರೆ.

Shivarajkumar : ಮತ್ತೆ 'ಭೈರತಿ ರಣಗಲ್‌' ಅವತಾರದಲ್ಲಿ ಅಬ್ಬರಿಸಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವಣ್ಣ!

 Shivarajkumar New Movie : ಮಡಚಿಟ್ಟಿದ್ದ ಅಧ್ಯಾಯದ ಪುನಾರಾರಂಭ 'The Era, Where It All Began' ಯೆಸ್.. ಮಡಚಿಟ್ಟಿದ್ದ ಅಧ್ಯಾಯವನ್ನ ಮತ್ತೇ ಆರಂಭ ಮಾಡಲು ಶಿವಣ್ಣ ಸಜ್ಜಾಗಿದ್ದಾರೆ. ವೇದ ಸಿನಿಮಾದಲ್ಲಿ ಅದ್ಭುತ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡು ಅತ್ಯದ್ಭುತ ಸ್ಟೋರಿಯನ್ನ ಕೊಟ್ಟ ಶಿವಣ್ಣ ಇತ್ತೀಚಿಗೆ ಫುಲ್ ಬ್ಯುಸಿ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡುತ್ತಿದ್ದಾರೆ.ಅದು ಕೂಡ ಒಳ್ಳೊಳ್ಳೆ ಸಂದೇಶವನ್ನ ಹೊತ್ತ ಸಿನಿಮಾಗಳನ್ನ ಮಾಡುತ್ತಾ ಸಮಾಜಕ್ಕೂ ಒಳ್ಳೆ ಮೆಸ್ಸೇಜ್ ಕೊಡುತ್ತಿದ್ದಾರೆ. 

ಶಿವರಾತ್ರಿ ಹಬ್ಬದ ದಿನದಂದು ತಮ್ಮನ್ನ ಪ್ರೀತಿಸೋ ಮಂದಿಗೆ ಸಖತ್ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ. ಅದೇನ್ ಅಂದ್ರೆ ತಮ್ಮ ಮುಂದಿನ ಸಿನಿಮಾ ಯಾವುದು ಅನ್ನೋದ್ರ ಟೈಟಲ್ ರಿವಿಲ್ ಮಾಡಿದ್ದಾರೆ.ಪೋಸ್ಟರ್ ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ.  ಟೈಟಲ್ ಕೂಡ ಕಿಕ್ ಕೊಡೋ ಲೆವೆಲ್ಲಿಗೆ ಇದೆ. "ರಣಗಲ್" ಅನ್ನೋ ಟೈಟಲ್ ಮೂಲಕ ಮತ್ತೇ ತೆರೆ ಮೇಲೆ ಅಬ್ಬರಿಸಲು ಶಿವಣ್ಣ ಸಿದ್ದರಾಗಿದ್ದಾರೆ. ರಣಗಲ್ ಸಿನಿಮಾದ ನಿರ್ದೇಶಕ ನರ್ತನ್ ಆದ್ರೆ ನಿರ್ಮಾಣದ ಜವಾಬ್ದಾರಿಯನ್ನ ಗೀತಾ ಪಿಕ್ಚರ್ ಕಡೆಯಿಂದ ಗೀತಾ ಶಿವರಾಜ್ ಕುಮಾರ್ ಅವರೇ ಮಾಡುತ್ತಿದ್ದಾರೆ.

ಇದನ್ನೂ ಓದಿ : Kabzaa: ಮಹಾಶಿವರಾತ್ರಿ ಹಬ್ಬಕ್ಕೆ ಮಹಾಶಿವನಿಗೆ ‘ಕಬ್ಜ’ ಚಿತ್ರದಿಂದ ಗೀತನಮನ

ಭೈರತಿ ರಣಗಲ್ ಹಿಯರ್ ಅಂತ ಇದೀಗ ಶಿವಣ್ಣ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡು ಇದ್ದಾರೆ. ಇದೀಗ ಅವರ ಅಭಿಮಾನಿಗಳು ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.
  ಇಲ್ಲೂ ಕೂಡ ಶಿವಣ್ಣನ ಲುಕ್ ಅದ್ಭುತವಾಗಿ ಕಾಣುತ್ತಿದೆ.ಖಡಕ್ ಲುಕ್ ನಲ್ಲಿ ಈ  ಸಿನಿಮಾದಲ್ಲಿ ಕಾಣೋ ಸಾಧ್ಯತೆ ಹೆಚ್ಚಾಗಿದೆ.ಇದು 'ಮಫ್ತಿ' ಸಿನಿಮಾ ಪ್ರಿಕ್ವೇಲ್‌ ಆಗಿರಲಿದ್ದು, 'ಭೈರತಿ ರಣಗಲ್‌' ಎಂದೇ ಹೆಸರಿಡಲಾಗುತ್ತಿದೆ. 

ಮಫ್ತಿ’ ಮುಗಿದ ಮೇಲೆ ನರ್ತನ್‌ ಶಿವರಾಜ್‌ಕುಮಾರ್‌ ಅವರಿಗೆ ‘ಭೈರತಿ ರಣಗಲ್‌’ ಎಂಬ ಸಿನಿಮಾ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಅದೀಗ ನಿಜವಾಗುತ್ತಿದೆ.ಮಫ್ತಿ’ ಸಿನಿಮಾದ ಪ್ರೀಕ್ವೆಲ್‌ ಆಗಲಿದ್ದು, ಭೈರತಿ ರಣಗಲ್‌ ಅಷ್ಟು ದೊಡ್ಡ ಮಾಫಿಯಾ ಡಾನ್‌ ಆಗಿದ್ದು ಹೇಗೆ ಎಂಬ ವಿವರ ಈ ಸಿನಿಮಾದಲ್ಲಿ ಇರಲಿದೆ' ಎಂದು ನರ್ತನ್‌ ಮತ್ತು ಶಿವರಾಜ್‌ಕುಮಾರ್‌ ಅವರ ಆಪ್ತ ಮೂಲಗಳು ಸುಳಿವು ಬಿಟ್ಟುಕೊಟ್ಟಿವೆ. ಈ ವರ್ಷವೇ ‘ಭೈರತಿ ರಣಗಲ್‌’ ಸಿನಿಮಾ ಸೆಟ್ಟೇರಲಿದ್ದು, ಇದೇ ವರ್ಷ ಚಿತ್ರೀಕರಣ ಕಂಪ್ಲೀಟ್‌ ಮಾಡಲು ನರ್ತನ್‌ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಹನ್ಸಿಕಾ ಮೋಟ್ವಾನಿಗೆ ರ್ಮೋನ್ ಇಂಜೆಕ್ಷನ್ ನೀಡಲಾಗಿದೆ ಎಂಬ ವದಂತಿ ಬಗ್ಗೆ ಮೌನ ಮುರಿದ ತಾಯಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More