Home> Entertainment
Advertisement

Shivarajkumar Birthday : ಹುಟ್ಟುಹಬ್ಬದ ಸಂಭ್ರಮದಲ್ಲಿ 'ಹ್ಯಾಟ್ರಿಕ್‌ ಹೀರೋ': 60ನೇ ವಸಂತಕ್ಕೆ ಕಾಲಿಟ್ಟ‌ ಶಿವಣ್ಣ!

60ನೇ ವಸಂತಕ್ಕೆ ಕಾಲಿಟ್ಟ‌ ಹ್ಯಾಟ್ರಿಕ್‌ ಹೀರೋ ಶಿವಣ್ಣನಿಗೆ ಕನ್ನಡಿಗರಿಂದ ಪ್ರೀತಿಯ ಶುಭ ಹಾರೈಕೆಗಳು. ಅಪ್ಪು ಇಲ್ಲವೆಂಬ ಬೇಸರದ ನಡುವೆ ನಟ ಶಿವಣ್ಣ ಹುಟ್ಟುಹಬ್ಬವನ್ನ ಸರಳವಾಗಿ ಆಚರಿಸಿಕೊಂಡಿದ್ದಾರೆ.

Shivarajkumar Birthday : ಹುಟ್ಟುಹಬ್ಬದ ಸಂಭ್ರಮದಲ್ಲಿ 'ಹ್ಯಾಟ್ರಿಕ್‌ ಹೀರೋ': 60ನೇ ವಸಂತಕ್ಕೆ ಕಾಲಿಟ್ಟ‌ ಶಿವಣ್ಣ!

'ಹ್ಯಾಟ್ರಿಕ್‌ ಹೀರೋ' ಅಭಿಮಾನಿಗಳ ಪಾಲಿನ ಪ್ರೀತಿಯ ನಟ 'ಕರುನಾಡ ಚಕ್ರವರ್ತಿ' ಡಾ. ಶಿವರಾಜ್‌ ಕುಮಾರ್‌ ಅವರಿಗೆ ಇಂದು ಬರ್ತ್‌ ಡೇ ಸಂಭ್ರಮ. 60ನೇ ವಸಂತಕ್ಕೆ ಕಾಲಿಟ್ಟ‌ ಹ್ಯಾಟ್ರಿಕ್‌ ಹೀರೋ ಶಿವಣ್ಣನಿಗೆ ಕನ್ನಡಿಗರಿಂದ ಪ್ರೀತಿಯ ಶುಭ ಹಾರೈಕೆಗಳು. ಅಪ್ಪು ಇಲ್ಲವೆಂಬ ಬೇಸರದ ನಡುವೆ ನಟ ಶಿವಣ್ಣ ಹುಟ್ಟುಹಬ್ಬವನ್ನ ಸರಳವಾಗಿ ಆಚರಿಸಿಕೊಂಡಿದ್ದಾರೆ.

60ನೇ ವಸಂತಕ್ಕೆ ಕಾಲಿಟ್ಟರೂ ಶಿವಣ್ಣ ಈಗಲೂ ಎಂಗ್‌ ಆಂಡ್‌ ಎನರ್ಜೆಟಿಕ್.‌ ಯಾವ ಸೀನ್‌ ಇರಲಿ, ಎಂತಹದ್ದೇ ಕಷ್ಟದ ಫೈಟ್‌ ಇರಲಿ ನಟ ಶಿವಣ್ಣ ನೀರು ಕುಡಿದಂತೆ ಮಾಡಿಬಿಡ್ತಾರೆ. ಅವರ ಡಾನ್ಸ್‌ ನೋಡಲು ಕನ್ನಡಿಗರು ಕಾದು ಕುಳಿತಿರ್ತಾರೆ. ಹೀಗೆ ಎಲ್ಲಾ ಜಾನರ್‌ ಚಿತ್ರಕ್ಕೂ ಸೈ ಎನ್ನುವ ಚಿರ ಯುವಕ ಹ್ಯಾಟ್ರಿಕ್‌ ಹೀರೋ ಶಿವಣ್ಣ ಅವರ ಹುಟ್ಟುಹಬ್ಬ ಕನ್ನಡಿಗರಿಗೆ ಹಬ್ಬದಂತೆ ಭಾಸವಾಗಿತ್ತು.

ಇದನ್ನೂ ಓದಿ : Shiva Rajkumar Birthday: ಶಿವಣ್ಣ ನಟನೆಯ ʻಘೋಸ್ಟ್ʼ ಪೋಸ್ಟರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್‌ ‌

'ಬೈರಾಗಿ' ಸಂಭ್ರಮ

60ನೇ ವಸಂತಕ್ಕೆ ಕಾಲಿಟ್ಟರೂ ಶಿವಣ್ಣ ಅಭಿನಯದ 'ಬೈರಾಗಿ' ಇತ್ತೀಚೆಗಷ್ಟೇ ಅದ್ಧೂರಿಯಾಗಿ ರಿಲೀಸ್‌ ಆಗಿತ್ತು. ಹಾಗೇ ನೂರಾರು ಥಿಯೇಟರ್‌ಗಳಲ್ಲಿ 'ಬೈರಾಗಿ' ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಹೊತ್ತಲ್ಲೇ ಶಿವಣ್ಣ ಬರ್ತ್‌ ಡೇ ಸಂಭ್ರಮ ಫ್ಯಾನ್ಸ್‌ಗೆ ಡಬಲ್‌ ಧಮಾಖಾ ಕೊಟ್ಟಂತಾಗಿದೆ. ಮತ್ತೊಂದು ಕಡೆ 60ನೇ ವಸಂತಕ್ಕೆ ಕಾಲಿಟ್ಟರುವ ನಟ ಶಿವಣ್ಣ ಅವರಿಗೆ ಶುಭಾಶಯಗಳ ಮಹಾಪೂರ ಹರಿದುಬಂದಿದೆ.

fallbacks

ಹೌದು, ಒಂದೆಡೆ ದೊಡ್ಮನೆ ಹಿರಿ ಮಗನ ಬರ್ತ್‌ ಡೇ ಸಂಭ್ರಮ ಕರುನಾಡಿನ ಜನರಿಗೆ ಸಂತಸ ತಂದಿದ್ದರೆ, ಮತ್ತೊಂದು ಕಡೆ ಅಪ್ಪು ಅಗಲಿಕೆ ಎಲ್ಲರನ್ನೂ ದುಖಃದ ಮಡುವಿಗೆ ತಳ್ಳಿದೆ. ಹೀಗಾಗಿ ನಟ ಡಾ. ಶಿವಣ್ಣ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಆದರೂ ಅಭಿಮಾನಿಗಳು ನಟ ಶಿವಣ್ಣ ಅವರ ಬೆಂಗಳೂರಿನ ನಿವಾಸಕ್ಕೆ ಆಗಮಿಸಿದ್ದರು. ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಕಾದು ನಿಂತಿದ್ದರು.

ಇದನ್ನೂ ಓದಿ : ಅರ್ಜುನ್​ ಜನ್ಯ ಆಕ್ಷನ್‌ ಕಟ್‌ ಹೇಳಲಿರುವ ಶಿವಣ್ಣನ ಚಿತ್ರದ ಟೈಟಲ್​ ಅನೌನ್ಸ್​

ಬೆಂಗಳೂರು ಮಾತ್ರವಲ್ಲ, ನಟ ಡಾ. ಶಿವರಾಜ್‌ ಕುಮಾರ್‌ ಅವರ ಬರ್ತ್‌ ಡೇ ಸಂಭ್ರಮವನ್ನ ರಾಜ್ಯಾದ್ಯಂತ ಸೆಲೆಬ್ರೇಟ್‌ ಮಾಡಲಾಯಿತು. ಕರುನಾಡ ಚಕ್ರವರ್ತಿ ಹುಟ್ಟುಹಬ್ಬ ಸರಳವಾಗಿ ನಡೆದರೂ, ಕನ್ನಡಿಗರು ಹಬ್ಬದಂತೆ ಆಚರಿಸಿದ್ರು. ಹಾಗೇ ಶಿವಣ್ಣನ ಭವಿಷ್ಯದ ಸಿನಿಮಾಗಳಿಗೆ ಶುಭ ಹಾರೈಸಿದ್ರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More