Home> Entertainment
Advertisement

B-Town ನ Halloween ಪಾರ್ಟಿಯಲ್ಲಿ ತುಂಡುಡುಗೆ ಧರಿಸಿ ಝಲಕ್ ನೀಡಿದ ಬಾಲಿವುಡ್ ಲಲನೆಯರು... Watch Videos

Halloween Party: ಬಿ-ಟೌನ್‌ನ ಹ್ಯಾಲೋವೀನ್ ಪಾರ್ಟಿಯಲ್ಲಿ ಸೆಲೆಬ್‌ಗಳ ದಂಡೆ ಹರಿದುಬಂದಿದೆ. ಈ ಸಮಯದಲ್ಲಿ ಅನೇಕ ಸ್ಟಾರ್ ಮಕ್ಕಳುಗಳು ಕೂಡ ತುಂಡುಡುಗೆ ಧರಿಸಿ ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ನೀವೂ ಕೂಡ ಈ ಬಾಲಿವುಡ್ ಲಲನೆಯರ ಒಂದು ಝಲಕ್ ನೋಡಿ.

B-Town ನ Halloween ಪಾರ್ಟಿಯಲ್ಲಿ ತುಂಡುಡುಗೆ ಧರಿಸಿ ಝಲಕ್ ನೀಡಿದ ಬಾಲಿವುಡ್ ಲಲನೆಯರು... Watch Videos

Halloween Party: ಬಾಲಿವುಡ್ ಪಾರ್ಟಿಗಳೆಂದರೆ ಸಕತ್ ಸದ್ದು ಮಾಡುತ್ತವೆ. ಇತ್ತೀಚಿಗೆ ಹಲವು ದೀಪಾವಳಿ ಪಾರ್ಟಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳನ್ನು ಕೇಳಿದ್ದೇವೆ. ಇದೇ ವೇಳೆ ಮತ್ತೊಂದು ಪಾರ್ಟಿ ಬಾಲಿವುಡ್‌ ಅಂಗಳದಲ್ಲಿ ಸಕತ್ ಸದ್ದು ಮಾಡಿದ್ದು  ಅದುವೆ  ಹ್ಯಾಲೋವೀನ್ ಪಾರ್ಟಿಯಾಗಿದೆ. ಮುಂಬೈನ ಪ್ರಸಿದ್ಧ ಸೆಲೆಬ್ ಮತ್ತು ಸಮಾಜವಾದಿ ಓರ್ಹಾನ್ ಅವತ್ರಾಮಣಿ ಅವರು ಈ ಹ್ಯಾಲೋವೀನ್ ಪಾರ್ಟಿಯನ್ನು ಆಯೋಜಿಸಿದ್ದರು, ಇದರಲ್ಲಿ ಬಾಲಿವುಡ್ ಸೆಲೆಬ್ಸ್ ತಮ್ಮ ಮೋಜಿನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಯನ್ ಖಾನ್, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್, ಶನಯಾ ಕಪೂರ್ ಸೇರಿದಂತೆ ಹಲವು ಸ್ಟಾರ್ ಕಿಡ್ಸ್ ಕೂಡ ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ
.

1. ಆರ್ಯನ್ ಖಾನ್: ಶಾರುಕ್ ಹಾಗೂ ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್ ಈ ಪಾರ್ಟಿಗೆ ಡೆವಿಲ್-ಮೇ-ಕೆಯರ್ ಲುಕ್ ನಲ್ಲಿ ಅದ್ಭುತ ಎಂಟ್ರಿ ನೀಡಿದ್ದಾರೆ. ಆರ್ಯನ್ ಕಾಣಿಸಿಕೊಂಡ ಪರಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

2. ಅನನ್ಯ ಪಾಂಡೆ: ಅನನ್ಯ ಪಾಂಡೆ 'ಕಭಿ ಖುಷಿ ಕಭಿ ಗಮ್' ಚಿತ್ರದ ಕರೀನಾ ಕಪೂರ್ ಅವತಾರದಿಂದ ಪ್ರೇರಣೆ ಪಡೆದಂತೆ ಕಾಣಿಸಿಕೊಂಡಿದ್ದಾರೆ. ಆಕೆ ತಿಳಿ ಗುಲಾಬಿ ಟಾಪ್ ಮತ್ತು ನ್ಯೂಡ್ ಬಣ್ಣದ ಮಿನಿ ಸ್ಕರ್ಟ್ ನಲ್ಲಿ ಕಾಣಿಸಿಕೊಂಡಿದ್ದಾಳೆ. ಪದೇ ಪದೇ ತನ್ನ ಸ್ಕರ್ಟ್  ಅನ್ನು  ಸರಿಪಡಿಸುತ್ತಿದ್ದ ಅನನ್ಯ ತುಂಬಾ ಅಸಹಜವಾಗಿರುವಂತೆ ಕಂಡಿದ್ದಾಳೆ.

3. ಸಾರಾ ಅಲಿ ಖಾನ್: ಬಿಳಿ ಬಣ್ಣದ ಕಾರಿನಿಂದ ಇಳಿದ ಸಾರಾ ಅಲಿ ಖಾನ್ ಹೈ ಹೀಲ್ಸ್ ಶೂ, ಕಪ್ಪು ಬಣ್ಣದ ಸ್ಕರ್ಟ್ ಹಾಗೂ ಸಿಲ್ವರ್ ಬ್ಲಾಕ್ ಕಾಂಬಿನೇಶನ್ ಟಾಪ್ ಧರಿಸಿ ಪಾಪರಾಜಿಗಳಿಗೆ ಪೋಸ್ ನೀಡಿದ್ದಾಳೆ.

4. ಶನಾಯಾ ಕಪೂರ್:ಶನಾಯಾ ಕಪೂರ್ ಕೂಡ ಓರ್ವ ರಾಜಕುಮಾರಿಯ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾಳೆ. ಒಂದು ಶಾರ್ಟ್ ವೈಟ್ ಫ್ರಾಕ್ ಜೊತೆಗೆ ಮ್ಯಾಚಿಂಗ್ ಗ್ಲೌಸ್ ಹಾಗೂ ಶೂಗಳನ್ನು ಧರಿಸಿದ್ದ ಶನಾಯ ಲುಕ್ ತುಂಬಾ ಕ್ಲಾಸಿಯಾಗಿತ್ತು. ಶನಾಯಾ ರಾಜಕುಮಾರಿಯಂತೆ ತನ್ನ ಮುಡಿಗೆ ಕಿರೀಟ ಕೂಡ ಧರಿಸಿದ್ದಳು. ಆದರೆ ಈ ಲುಕ್ ನಲ್ಲಿ ಆಕೆ ತುಂಬಾ ಅಸಹಜತೆ ಅನುಭವಿಸುವುದನ್ನು ನೀವು ನೋಡಬಹುದು.

5. ಜಾಹ್ನವಿ ಕಪೂರ್: ಇನ್ನೊಂದೆಡೆ ಕಪ್ಪು ಬಣ್ಣದ ಸಿಂಗಲ್ ಮೊನೋಕಾನಿ ಧರಿಸಿ ಬೂದು ಬಣ್ಣದ ಕಾರಿನಿಂದ ಇಳಿದ ಜಾಹ್ನವಿ ಕಪೂರ್, ತನ್ನ ಮೈಮಾಟ ದಿಫೆಂಡ್ ಮಾಡುತ್ತಾ ಸಾಗುವುದನ್ನು ನೀವು ನೋಡಬಹುದು.

ಇದನ್ನೂ ಓದಿ-Nithya Menen Pregnancy: ಮದುವೆಗೂ ಮುನ್ನವೇ ತಾಯಿಯಾಗಲಿದ್ದಾಳೆಯೇ ದಕ್ಷಿಣ ಚಿತ್ರರಂಗದ ಈ ಖ್ಯಾತ ತಾರೆ?

6. ನವ್ಯಾ ನವೆಲಿ ನಂದಾ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮೊಮ್ಮಗಳು ಆಗಿರುವ ನವ್ಯಾ ನವೆಲಿ ನಂದಾ ಜಾಸ್ಮೀನ್ ನಿಂದ ಪ್ರೇರಣೆ ಪಡೆದು ತಿಳಿ ನೀಲಿ ಬಣ್ಣದ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದಾಳೆ. ಇದರ ಜೊತೆಗೆ ಆಕೆ ಮೆಂನಯೇಕ್ ಟೀಯಾರಾ ಕೂಡ ಧರಿಸಿದ್ದಳು.

ಇದನ್ನೂ ಓದಿ-Samantha Ruth Prabhu: ಸಮಂತಾ ಹೋರಾಡುತ್ತಿರುವ ಮಯೊಸೈಟಿಸ್ ಕಾಯಿಲೆ ಏನು? ಏನದರ ಗುಣ-ಲಕ್ಷಣಗಳು?

7. ಅಹಾನ್ ಶೆಟ್ಟಿ: 2021 ರಲ್ಲಿ ತೆರೆಕಂಡ 'ತಡಪ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಶಾಸ್ತ್ರಾಸ್ತ್ರಗಳ ಜೊತೆಗೆ ಓರ್ವ ಸೈನಿಕನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಅಹಾನ್ ಗರ್ಲ್ ಫ್ರೆಂಡ್ ತಾನಿಯಾ ಶ್ರಾಫ್ ಪಿಂಕ್ ಬಾಡಿ ಸೂಟ್ ನಲ್ಲಿ ಕಾಣಿಸಿಕೊಂಡಿದ್ದಾಳೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More