Home> Entertainment
Advertisement

Ghost Trailer: ಗ್ಯಾಂಗ್‌ಸ್ಟರ್‌ ಲುಕ್‌ನಲ್ಲಿ ಕರುನಾಡ ಚಕ್ರವರ್ತಿ..! ಆಕ್ಷನ್ ರಸದೌತಣ ಕೊಟ್ಟ ಶಿವಣ್ಣ

Ghost Trailer release: ಶಿವರಾಜ್‌ ಕುಮಾರ್‌ ನಟನೆಯ ಬಹುನಿರೀಕ್ಷಿತ ಘೋಸ್ಟ್‌ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದ್ದು, ಶಿವಣ್ಣನ ಮಾಸ್‌ ಲುಕ್‌ಗೆ ಅಭಿಮಾನಿಗಳು ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

Ghost Trailer: ಗ್ಯಾಂಗ್‌ಸ್ಟರ್‌ ಲುಕ್‌ನಲ್ಲಿ ಕರುನಾಡ ಚಕ್ರವರ್ತಿ..! ಆಕ್ಷನ್ ರಸದೌತಣ ಕೊಟ್ಟ ಶಿವಣ್ಣ

Ghost Movie: ಶಿವರಾಜ್‌ ಕುಮಾರ್‌ ನಟನೆಯ ಬಹುನಿರೀಕ್ಷಿತ ಘೋಸ್ಟ್‌ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದ್ದು, ಶಿವಣ್ಣನ ಮಾಸ್‌ ಲುಕ್‌ಗೆ ಅಭಿಮಾನಿಗಳು ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.ಇಡೀ ಭಾರತದ ಚಿತ್ರರಂಗವೇ ಎದುರು ನೋಡುತ್ತಿದ್ದ ಶಿವಣ್ಣ ಅಭಿನಯದ ಘೋಸ್ಟ್‌ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಹ್ಯಾಟ್ರಿಕ್‌ ಹಿರೋ ಶಿವಣ್ಣ ಇಲ್ಲಿ ಗ್ಯಾಂಗ್‌ಸ್ಟಾರ್‌ ಆಗಿ "ಇದು ಸಾಮ್ರಾಜ್ಯ ಕಟ್ಟೋ ಕಥೆಯಲ್ಲ, ಸಾಮ್ರಾಜ್ಯ ಧ್ವಂಸ ಮಾಡೋಕ್ಕೆ ಬಂದಿರೋದೆ ನಾನು" ಎಂದು ಖಡಕ್ ಡೈಲಾಗ್‌ ಮೂಲಕ ಎಂಟ್ರಿ ಕೊಟ್ಟಿದ್ದಾರೆ. 

ಈ ಘೋಸ್ಟ್‌ ಸಿನಿಮಾ ಕನ್ನಡ ಮಾತ್ರಲ್ಲದೇ ತೆಲುಗು ಭಾಷೆಯಲ್ಲಿಯೂ ಟ್ರೈಲರ್‌ ಬಿಡುಗಡೆಯಾಗಿದ್ದು, ಅದನ್ನು ರಾಜಮೌಳಿ ಬಿಡುಗಡೆ ಮಾಡಿದ್ದಾರೆ. ಸದ್ಯ ಘೋಸ್ಟ್‌ ಸಿನಿಮಾದ ಟ್ರೈಲರ್‌ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದೆ. ಇನ್ನು ಜವಾನ್‌ ಸಿನಿಮಾದ ಬಳಿಕ ಶಿವಣ್ಣನ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದ ತಮಿಳು ಪ್ರೇಕ್ಷಕರಿಗೆ ಶಿವಣ್ಣ ಭರ್ಜರಿ ಟ್ರೀಟ್‌ ಕೊಟ್ಟಿದ್ದಾರೆ.  

ಇದನ್ನೂ ಓದಿ-ವಯಸ್ಸಲ್ಲಿ ರಾಘವ್‌ ಚಡ್ಡಾ ಅವರಿಗಿಂತ ದೊಡ್ಡವರಾ ಪರಿಣಿತಿ ಚೋಪ್ರಾ?

ಟ್ರೈಲರ್‌ನಲ್ಲಿ "ಯುದ್ಧ ಮಾನವ ಲೋಕದ ಮಾಗದ ಕರಗ, ಇಂತಹ ಯುದ್ಧಗಳಿಂದ, ಸಾಮ್ರಾಜ್ಯಗಳಿಂದ ಕಟ್ಟಿದ್ದಕ್ಕಿಂತ ಅಧಃಪತನವೇ ಜಾಸ್ತಿ. ಸಾಮ್ರಾಜ್ಯ ಕಟ್ಟಿರುವವರನ್ನ ಇತಿಹಾಸ ಮರೆತಿರಬಹುದು. ಆದರೆ... ಧ್ವಂಸ ಮಾಡೋಣ ನನ್ನಂತವರನ್ನ ಎಂದಿಗೂ ಮರೆತಿಲ್ಲ" ಎಂದು ಆರಂಭದಲ್ಲಿಯೇ ಹಿನ್ನೆಲೆ ಧ್ವನಿಯ ಮೂಲಕ ಶಿವಣ್ಣ ಘರ್ಜಿಸಿದ್ದಾರೆ. ನಂತರ ಶಿವಣ್ಣ ಮಾಸ್‌ ಆಗಿ ಗನ್‌ ಹಿಡಿದು ಎಂಟ್ರಿ ಕೊಟ್ಟು ಅಬ್ಬರಿಸಿದ್ದಾರೆ.

ಇನ್ನು ಈ ಟ್ರೈಲರ್‌ನಲ್ಲಿ ಬ್ಯಾಕ್‌ ಗ್ರೌಂಡ್‌ ಮ್ಯೂಸಿಕ್‌ ಹೈಲೈಟ್‌ ಆಗಿದ್ದು, ಕಪ್ಪು ಕೋಟ್‌ ಧರಿಸಿ ಶಿವಣ್ಣ ಆಗಮಿಸೋ ದೃಶ್ಯ ಹಳೆಯ ಗ್ಯಾಂಗ್‌ಸ್ಟಾರ್‌ ಯುದ್ಧವನ್ನು ನೆನಪಿಸುವಂತಿದೆ. ಒಟ್ಟಾರೆಯಾಗಿ ಶಿವಣ್ಣ ಈ ಟ್ರೈಲರ್‌ ಮೂಲಕವೇ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದ್ದಾರೆ. 

 

ಶ್ರೀನಿ ನಿರ್ದೇಶನದಡಿಯಲ್ಲಿ ಮೂಡಿಬಂದ ಘೋಸ್ಟ್‌ ಸಿನಿಮಾ ಅಕ್ಟೋಬರ್‌ 19ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದ್ದು, ಈಗಾಗಲೇ ಹೈಪ್‌ ಕ್ರಿಯೆಟ್‌ ಮಾಡಿದೆ. ಇದೀಗ ಈ ಚಿತ್ರದ  ಡಿಜಿಟಲ್‌ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಆರ್ ಆರ್ ಆರ್, ಜವಾನ್‌ ಸಿನಿಮಾಗಳಂತಹ ಸೂಪರ್‌ ಹಿಟ್‌ ಸಿನಿಮಾಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೋ ಸಂಸ್ಥೆಯೇ ಈ ಘೋಸ್ಟ್ ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.

ಇದನ್ನೂ ಓದಿ-ಕಾಂತಾರ ಚಿತ್ರಕ್ಕೆ 1 ವರ್ಷ...! ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡಲು ಸಜ್ಜಾದ ಹೊಂಬಾಳೆ

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More