Home> Entertainment
Advertisement

ಶಾರುಖ್ ಖಾನ್‌ʼಗೆ ಈ ಹಿಂದೂ ಹೆಸರು ಇಟ್ಟಿದ್ರಂತೆ ಪತ್ನಿ ಗೌರಿ ಖಾನ್!

Gauri Khan changed Shah Rukh Khan name : ಶಾರುಖ್‌ ಕುಟುಂಬವನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಹೆಂಡತಿ ಗೌರಿ ಖಾನ್‌ಗೆ ತುಂಬಾ ನಿಷ್ಠರಾಗಿದ್ದಾರೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ಮದುವೆಯಾಗಿ 30 ವರ್ಷಗಳು ಕಳೆದಿವೆ. 

ಶಾರುಖ್ ಖಾನ್‌ʼಗೆ ಈ ಹಿಂದೂ ಹೆಸರು ಇಟ್ಟಿದ್ರಂತೆ ಪತ್ನಿ ಗೌರಿ ಖಾನ್!

Shah Rukh Khan Birthhday : ಬಾಲಿವುಡ್‌ನ ಕಿಂಗ್‌ ಶಾರುಖ್ ಖಾನ್ ಯಶಸ್ವಿ ನಟ ಮಾತ್ರವಲ್ಲದೆ ಬೆಸ್ಟ್‌ ಫ್ಯಾಮಿಲಿ ಮ್ಯಾನ್‌ ಕೂಡ ಹೌದು. ಕುಟುಂಬವನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಹೆಂಡತಿ ಗೌರಿ ಖಾನ್‌ಗೆ ತುಂಬಾ ನಿಷ್ಠರಾಗಿದ್ದಾರೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ಮದುವೆಯಾಗಿ 30 ವರ್ಷಗಳು ಕಳೆದಿವೆ. ಆದರೆ ಈಗಲೂ ಇಬ್ಬರೂ ತುಂಬಾ ಪ್ರೀತಿಸುತ್ತಾರೆ. 

ಗೌರಿ ಮತ್ತು ಎಸ್‌ಆರ್‌ಕೆ ಇಬ್ಬರೂ ತಮ್ಮ ಸ್ವಂತ ಆಸೆಯಂತೆ ಮದುವೆಯಾದ ಕಾರಣ ಸಾಕಷ್ಟು ಅಡೆತಡೆಗಳನ್ನು ದಾಟಿದ್ದಾರೆ. ಗೌರಿ ಪೋಷಕರ ಒಪ್ಪಿಗೆಯೊಂದಿಗೆ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗುವುದು ಶಾರುಖ್‌ಗೆ ಸುಲಭದ್ದಾಗಿರಲಿಲ್ಲ. 

ಇದನ್ನೂ ಓದಿ: ಮಗಳ ವಯಸ್ಸಿನ ಈ ಖ್ಯಾತ ನಟಿಯ ಜೊತೆ ಲವ್ವಲ್ಲಿ ಬಿದ್ದ ಬಾಲಿವುಡ್ ನಟ ಆಮೀರ್ ಖಾನ್! 

ಎಸ್‌ಆರ್‌ಕೆಯನ್ನು ಮದುವೆಯಾಗುವ ತನ್ನ ನಿರ್ಧಾರದ ಬಗ್ಗೆ ಆಕೆಯ ಪೋಷಕರು ಅಷ್ಟೊಂದು ಉತ್ಸುಕರಾಗಿರಲಿಲ್ಲ ಎಂಬುದನ್ನು ಗೌರಿ  ನೆನಪಿಸಿಕೊಂಡಿದ್ದರು. 2008 ರಲ್ಲಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ನಾವು ತುಂಬಾ ಚಿಕ್ಕವರಾಗಿದ್ದೆವು. ಮದುವೆಯಾಗಲು ನಿರ್ಧರಿಸಿದ್ದೇವೆ. ಚಲನಚಿತ್ರಗಳಿಗೆ ಸೇರಲು ಹೋಗುವ ವ್ಯಕ್ತಿಯನ್ನು ಮತ್ತು ಬೇರೆ ಧರ್ಮದ ವ್ಯಕ್ತಿ ಎಂಬ ಕಾರಣಕ್ಕೆ ಅವರ ತಂದೆ ತಾಯಿ ಈ ಸಂಬಂಧಕ್ಕೆ ಒಪ್ಪುವುದು ಕಷ್ಟಾಗತ್ತು ಎಂದಿದ್ದಾರೆ. 

ಗೌರಿ ಮತ್ತು ಶಾರುಖ್ 1991ರಲ್ಲಿ ಮದುವೆಯಾದರು. ಆಗ ಶಾರುಖ್​ ಖಾನ್​ ಇನ್ನೂ ಫೇಮಸ್​ ಅಷ್ಟೊಂದು ಫೇಮಸ್‌ ಆಗಿರಲಿಲ್ಲ. ಗೌರಿ ಮತ್ತು ಶಾರುಖ್​ ಖಾನ್​ ಅಂತರ್​ ಧರ್ಮೀಯ ವಿವಾಹವಾಗಿದ್ದಾರೆ. ಹೇಗೋ ಕಷ್ಟಪಟ್ಟು ಮನೆಯವರನ್ನೆಲ್ಲ ಗೌರಿ ಒಪ್ಪಿಸಿದ್ದರು. ಕುಟುಂಬದ ಸದಸ್ಯರಿಗೆ ಶಾರುಖ್ ಕೂಡ ಹಿಂದೂ ಎಂದು ಅನಿಸಬೇಕು ಅನ್ನುವ ಕಾರಣಕ್ಕೆ ಅವರಿಗೆ ಅಭಿನವ್ ಎಂದು ಹೆಸರು ಇಡಲು ನಿರ್ಧರಿಸಿದ್ದರು ಎಂದು ಖುದ್ದು ಗೌರಿ ಖಾನ್‌ ಹೇಳಿದ್ದಾರೆ.

ಇದನ್ನೂ ಓದಿ: Shah Rukh Khan Birthday: 6,300 ಕೋಟಿ ಒಡೆಯ ಶಾರುಖ್‌ ಖಾನ್ ತಿಂಗಳ ಆದಾಯ ಎಷ್ಟು? 

ಮದುವೆಯ ಸಮಯದಲ್ಲಿ ಗೌರಿ ಖಾನ್ ಕೇವಲ 21 ವರ್ಷ ವಯಸ್ಸಿನವರಾಗಿದ್ದರೆ ಶಾರುಖ್ ಆ ಸಮಯದಲ್ಲಿ 26 ವರ್ಷ ವಯಸ್ಸಿನವರಾಗಿದ್ದರು. ಮದುವೆ ಬಳಿಕ ಹಿದೂ ಮುಸ್ಲಿಂ ಎರಡೂ ಧರ್ಮಗಳನ್ನು ದಂಪತಿ ಪಾಲಿಸುತ್ತಿದ್ದಾರೆ. ಗೌರಿ ಖಾನ್ ಅಭಿನವ್​ ಎಂದು ನಾಮಕರಣ ಮಾಡಿದ್ದು ನಿಜ. ಆದರೆ ಶಾರುಖ್​ ಖಾನ್​ ಎಂಬ ಹೆಸರಿಂದಲೆ ಅವರು ಪ್ರಸಿದ್ಧರಾದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More