Home> Entertainment
Advertisement

ಈ ಬಾರಿಯ ಬಿಗ್ ಬಾಸ್ ಮನೆ ಸೇರಲಿದ್ದಾರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ..! ಯಾರು ಗೊತ್ತಾ?

Venugopal Rao in Bigg boss : ಬಿಗ್ ಬಾಸ್ ಕಿರುತೆರೆಯ ಅತ್ಯಂತ ಮನರಂಜನೆಯ ಕಾರ್ಯಕ್ರಮಗಳಲ್ಲಿ ಒಂದು. ಈ ಶೋ ಸ್ಟಾರ್ಟ್‌ ಮುಗಿತು ಎಲ್ಲರೂ ಟಿವಿ ಮುಂದೆ ಕುಳಿತೊಂಡು ಏನಾಗುತ್ತೆ ಅಂತ ಕ್ಯೂರಿಯಾಸಿಟಿಯಿಂದ ನೋಡ್ತಾರೆ. ಈ ಮೆಗಾ ಶೋ ತೆಲುಗಿನಲ್ಲಿ ಆರು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿ ಇದೀಗ ಏಳನೇ ಸೀಸನ್ ಗೆ ರೆಡಿಯಾಗಿದೆ. ಇತ್ತೀಚೆಗಷ್ಟೇ ಈ ಕಾರ್ಯಕ್ರಮದ ಬಗ್ಗೆ ಕುತೂಹಲಕಾರಿ ಸುದ್ದಿಯೊಂದು ಹರಿದಾಡುತ್ತಿದೆ.   

ಈ ಬಾರಿಯ ಬಿಗ್ ಬಾಸ್ ಮನೆ ಸೇರಲಿದ್ದಾರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ..! ಯಾರು ಗೊತ್ತಾ?

Bigg Boss 7 : ಸೂಪರ್ ಹಿಟ್ ಟಿವಿ ಶೋ ಬಿಗ್ ಬಾಸ್ ಮತ್ತೆ ಬರಲಿದೆ. ಈಗಾಗಲೇ ತೆಲುಗಿನಲ್ಲಿ ಆರು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿರುವ ಈ ರಿಯಾಲಿಟಿ ಶೋ ಏಳನೇ ಸೀಸನ್ ಗೆ ರೆಡಿಯಾಗಿದೆ. ಈ ಬಾರಿ ಇನ್ನಷ್ಟು ಭಾವುಕತೆಗಳೊಂದಿಗೆ ಈ ಮೆಗಾ ಶೋ ನಮ್ಮ ಮುಂದೆ ಬರಲಿದೆ.

ಬಿಗ್‌ಬಾಸ್‌ ನೋಡಲು ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಅದರಂತೆ ಇತ್ತೀಚೆಗಷ್ಟೇ ಸ್ಟಾರ್ ಮಾ ಬಿಗ್ ಬಾಸ್ ಸೀಸನ್ 7 ರ ಟೈಟಲ್ ಪ್ರೋಮೋ ಬಿಡುಗಡೆ ಮಾಡಿತ್ತು. ಈ ಸೀಸನ್‌ಗೂ ಕಿಂಗ್ ನಾಗಾರ್ಜುನ ನಿರೂಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಬಿಗ್ ಬಾಸ್ 7 ಯಾವಾಗ ಪ್ರಾರಂಭವಾಗುತ್ತದೆ? ಈ ಬಾರಿ ಮನೆ ಪ್ರವೇಶಿಸುತ್ತಿರುವ ಸ್ಪರ್ಧಿಗಳು ಯಾರು? ವಿಷಯಗಳ ಮೇಲೆ ದೊಡ್ಡ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಆರ್ಯನ್ ಖಾನ್ ವೆಬ್ ಸಿರೀಸ್‌ನಲ್ಲಿರುವ ಈ ನಟಿ ಯಾರು ಗೊತ್ತಾ?

ಇದೀಗ ಈ ಸೀಸನ್ ಬಗ್ಗೆ ಸುದ್ದಿಯೊಂದು ಟ್ರೆಂಡಿಂಗ್ ಆಗಿದೆ. ಅದೇನೆಂದರೆ.. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಆಂಧ್ರದ ಆಟಗಾರ ವೈ. ವೇಣುಗೋಪಾಲ ರಾವ್ ಈ ಮೆಗಾ ಶೋಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅವರನ್ನು ಮನೆಯೊಳಗೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ವರದಿಯಾಗಿದೆ. ಈ ಸುದ್ದಿ ನಿಜವಾದರೆ ವೇಣುಗೋಪಾಲ ರಾವ್ ಬಿಗ್ ಬಾಸ್ ಪ್ರವೇಶಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. 

ಟೀಂ ಇಂಡಿಯಾ ಪರ ಆಡಿದ ಕೆಲವೇ ಕೆಲವು ತೆಲುಗು ಕ್ರಿಕೆಟಿಗರಲ್ಲಿ ವೇಣು ಕೂಡ ಒಬ್ಬರು. ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್‌ ತಂಡಕ್ಕಾಗಿ ಆಡಿದರು. ಟೀಮ್ ಇಂಡಿಯಾ ಪರ 16 ODI ಮತ್ತು IPL ನಲ್ಲಿ 65 ಪಂದ್ಯಗಳನ್ನು ಆಡಿದ್ದಾರೆ. 2019 ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More