Home> Entertainment
Advertisement

BBK9 : ದೊಡ್ಮನೆಯಲ್ಲಿ ಬಿಗ್‌ ಫೈಟ್‌! ಕೈ - ಕೈ ಮಿಲಾಯಿಸಿದ ಸ್ಪರ್ಧಿಗಳು!?

Bigg Boss Kannada Season 9 : ಬಿಗ್‌ ಬಾಸ್‌ ಮನೆಯಲ್ಲಿ ಸ್ನೇಹಿತರಾಗಿದ್ದ ಆರ್ಯವರ್ಧನ್ ಗುರೂಜಿ ಮತ್ತು ರೂಪೇಶ್ ರಾಜಣ್ಣ ನಡುವಿನ ಜಗಳ ನಡೆದಿದೆ. ಇವರಿಬ್ಬರೂ ಕೈ ಕೈ ಮಿಲಾಯಿಸಿದ್ದಾರೆ. ಇಬ್ಬರ ನಡುವಿನ ಹೊಡೆದಾಟ ಕಂಡು ಇತರೆ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.

BBK9 : ದೊಡ್ಮನೆಯಲ್ಲಿ ಬಿಗ್‌ ಫೈಟ್‌! ಕೈ - ಕೈ ಮಿಲಾಯಿಸಿದ ಸ್ಪರ್ಧಿಗಳು!?

Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್‌ ಫಿನಾಲೆಗೆ ಇನ್ನೇನೂ ನಾಲ್ಕು ವಾರಗಳು ಬಾಕಿಯಿವೆ. ಈ ಮಧ್ಯೆ ಸ್ಪರ್ಧಿಗಳ ನಡುವೆ ಪೈಪೋಟಿ ಕೂಡ ಹೆಚ್ಚಾಗಿದೆ. ಕೆಲವು ಬಂಧಗಳು ಬಿಗಿಯಾಗಿದ್ದರೆ, ಕೆಲವರ ಮಧ್ಯೆ ವೈಮನಸ್ಸು ಮೂಡಿದೆ. ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಸ್ನೇಹಿತರಾಗಿದ್ದ ಆರ್ಯವರ್ಧನ್ ಗುರೂಜಿ ಮತ್ತು ರೂಪೇಶ್ ರಾಜಣ್ಣ ನಡುವಿನ ಜಗಳ ನಡೆದಿದೆ. ಇವರಿಬ್ಬರೂ ಕೈ ಕೈ ಮಿಲಾಯಿಸಿದ್ದಾರೆ. ಇಬ್ಬರ ನಡುವಿನ ಹೊಡೆದಾಟ ಕಂಡು ಇತರೆ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ : Kiccha Sudeep : ತಮಿಳು ನಿರ್ಮಾಪಕರ ಜೊತೆ ಕಿಚ್ಚ! ನಟ ಸುದೀಪ್ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್‌

ಬಿಗ್ ಬಾಸ್ ಆಟದಲ್ಲಿ ಸ್ಪರ್ಧಿಗಳು ತಮಾಷೆ ಮಾಡುವುದು ಸಹಜ. ಆದರೆ ಕೆಲವೊಮ್ಮೆ ಅತಿರೇಕಕ್ಕೆ ಹೋಗುತ್ತದೆ. ಈಗ ಆರ್ಯವರ್ಧನ್ ಗುರೂಜಿ ಮತ್ತು ರೂಪೇಶ್ ರಾಜಣ್ಣ ನಡುವೆ ತಮಾಷೆ ಫೈಟ್‌ಗೆ ಕಾರಣವಾಗಿದೆ. ಆರಂಭದಲ್ಲಿ ಮೋಜಿಗಾಗಿ ಹೊಡೆದಾಡಿಕೊಳ್ಳುತ್ತಿದ್ದ ಇವರಿಬ್ಬರು ನಂತರ ಗಂಭೀರವಾಗಿ ಜಗಳವಾಡುವ ಮಟ್ಟಕ್ಕೆ ಕೋಪಗೊಳ್ಳುತ್ತಾರೆ. ಇಬ್ಬರ ನಡುವೆ ದೊಡ್ಡ ಜಗಳವಾಗಿದೆ. 

 

 

ಬಿಗ್‌ ಬಾಸ್‌ ಪ್ರಸಾರವಾಗುವ ವಾಹಿನಿ ಶೇರ್ ಮಾಡಿರುವ ಪ್ರೋಮೋದಲ್ಲಿ ಇಬ್ಬರ ಜಗಳ ಹೈಲೈಟ್ ಆಗಿದೆ.  ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮದಲ್ಲಿ ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಗುರೂಜಿಯ ಜಗಳ ಕಂಡು ನೋಡುಗರು ಸಹ ಅಚ್ಚರಿ ಪಟ್ಟಿದ್ದಾರೆ. 

ಇದನ್ನೂ ಓದಿ : ಮುದ್ದಾದ ನಾಯಿ ಮರಿ ವಿಡಿಯೋ ಶೇರ್ ಮಾಡಿ Love story ಹೇಳಿದ ʻಸಿಂಹಪ್ರಿಯೆʼ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More