Home> Entertainment
Advertisement

Singer Nisha Upadhyaya: ಲೈವ್​ ಶೋ ವೇಳೆ ಖ್ಯಾತ ಗಾಯಕಿ ಮೇಲೆ ಗುಂಡೇಟು!

Nisha Upadhyay: ನಿಶಾ ಉಪಾಧ್ಯಾಯ ಸಂಗೀತ ಲೈವ್​ ಕಾರ್ಯಕ್ರಮ ವೇಳೆ ಗಾಯಕಿ ಮೇಲೆ ಗುಂಡಿನ ದಾಳಿ ನಡೆದಿದೆ. ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದರ  ಪರಿಣಾಮ ಗಾಯಕಿಗೆ ಗುಂಡು ತಗುಲಿದೆ. 

Singer Nisha Upadhyaya: ಲೈವ್​ ಶೋ ವೇಳೆ ಖ್ಯಾತ ಗಾಯಕಿ ಮೇಲೆ ಗುಂಡೇಟು!

ಬೆಂಗಳೂರು: ಖ್ಯಾತ ಗಾಯಕಿ ನಿಶಾ ಉಪಾಧ್ಯಾಯ ಸಂಗೀತ ಲೈವ್​ ಕಾರ್ಯಕ್ರಮ ವೇಳೆ ಗಾಯಕಿ ಮೇಲೆ ಗುಂಡಿನ ದಾಳಿ ನಡೆದಿದೆ.  ಸರನ್​ ಜಿಲ್ಲೆಯ ಸೇಡೂರ್ ಗ್ರಾಮದ ವೀರೇಂದ್ರ ಸಿಂಗ್ ಎಂಬುವವರ ಮನೆಯಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಕಾರ್ಯಕ್ರಮ ಜೋರು ಇದ್ದಿದ್ದರಿಂದ ಸ್ಥಳೀಯ ಜನರು ಸಂಭ್ರಮದಲ್ಲಿದ್ದರು. ಆ ವೇಳೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದರ ಪರಿಣಾಮ ಗಾಯಕಿ ನಿಶಾ ಕಾಲಿಗೆ ಗುಂಡು ತಗುಲಿದೆ.

ಇದನ್ನೂ ಓದಿ: Actress Leelavati: ಹಿರಿಯ ನಟಿ ಲೀಲಾವತಿ ಕುಶಲ ಕ್ಷೇಮ ವಿಚಾರಿಸಿದ ಚಿತ್ರರಂಗ ಕಲಾವಿದರ ದಂಡು !

ಗುಂಡೇಟಿನಿಂದ ಗಾಯಕಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗಾಯಕಿಯನ್ನು ಪಾಟ್ನಾದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಜಂತಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸೇಂದೂರ್ ಗ್ರಾಮದಲ್ಲಿ ಉಪನಯನ ಸಂಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಬಲು ಜೋರು ಇದ್ದಿದ್ದರಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸುವ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಗಾಯಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ್ದರಿಂದ ಆಕೆಯ ಕುಟುಂಬದವರು, ಅಭಿಮಾನಿಗಳು ಎಲ್ಲರೂ ಅಲ್ಲೆ ಜಮಾಯಿಸಿದ್ದಾರೆ. ಸದ್ಯ ನಿಶಾ ಉಪಾಧ್ಯಾಯ ಚೇತರಿಕೆಗಾಗಿ ಎಲ್ಲರೂ ಹಾರೈಸುತ್ತಿದ್ದಾರೆ. 

ಇದನ್ನೂ ಓದಿ: Actress Leelavati: ಹಿರಿಯ ನಟಿ ಲೀಲಾವತಿ ನಟನೆ ಅನುಕರಣೆ ಮಾಡಿದ ನಟ ಶ್ರೀಧರ್ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More