Home> Entertainment
Advertisement

1985ರಲ್ಲೇ ಅಣ್ಣಾವ್ರರಿಗೆ ʼಕೆಂಟಕಿʼ ಎಂಬ ಅಂತರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು..!

ಆರ್‌ಆರ್‌ಆರ್‌ಗೆ ಲಭಿಸಿದ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಕುರಿತ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದು ಭಾರತೀಯ ಸಿನಿರಂಗಕ್ಕೆ ಖುಷಿಯ ವಿಚಾರ. ಆದ್ರೆ, ಅಂತರಾಷ್ಟ್ರೀಯ ಪ್ರಶಸ್ತಿ ವಿಚಾರಕ್ಕೆ ಬಂದಾಗ ಪದ್ಮವಿಭೂಷಣ ಡಾ. ರಾಜಕುಮಾರ್ ಅವರು ನೆನಪಿಗೆ ಬರ್ತಾರೆ. ಕಾರಣ ಇಷ್ಟೇ.. ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೌರವಕ್ಕೆ ಅಂದೇ ರಾಜಣ್ಣ ಅವರು ಭಾಗಿಯಾಗಿದ್ದರು ಎನ್ನವುದು.

1985ರಲ್ಲೇ ಅಣ್ಣಾವ್ರರಿಗೆ ʼಕೆಂಟಕಿʼ ಎಂಬ ಅಂತರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು..!

RajkumAr Kentucky Colonel award : ಆರ್‌ಆರ್‌ಆರ್‌ಗೆ ಲಭಿಸಿದ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಕುರಿತ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದು ಭಾರತೀಯ ಸಿನಿರಂಗಕ್ಕೆ ಖುಷಿಯ ವಿಚಾರ. ಆದ್ರೆ, ಅಂತರಾಷ್ಟ್ರೀಯ ಪ್ರಶಸ್ತಿ ವಿಚಾರಕ್ಕೆ ಬಂದಾಗ ಪದ್ಮವಿಭೂಷಣ ಡಾ. ರಾಜಕುಮಾರ್ ಅವರು ನೆನಪಿಗೆ ಬರ್ತಾರೆ. ಕಾರಣ ಇಷ್ಟೇ.. ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೌರವಕ್ಕೆ ಅಂದೇ ರಾಜಣ್ಣ ಅವರು ಭಾಗಿಯಾಗಿದ್ದರು ಎನ್ನವುದು.

ಹೌದು.. 1985ರಲ್ಲಿ ಪ್ರತಿಷ್ಠಿತ ʼಕೆಂಟಕಿ ಕರ್ನಲ್ʼ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಅಂದ್ರೆ, ಡಾ. ರಾಜಕುಮಾರ್. ʼಕೆಂಟಕಿ ಕರ್ನಲ್ʼ ಎಂಬುದು ಅಮೇರಿಕಾದ ಕೆಂಟಕಿ ಎಂಬ ರಾಜ್ಯದಿಂದ ನೀಡಲ್ಪಡುವ ಅತ್ಯುನ್ನತ ಗೌರವ ಪ್ರಶಸ್ತಿಯಾಗಿದೆ. ಒಂದು ಸಮುದಾಯ, ರಾಜ್ಯ ಅಥವಾ ರಾಷ್ಟ್ರಕ್ಕೆ ಗಮನಾರ್ಹ ಸಾಧನೆ ಮತ್ತು ಅತ್ಯುತ್ತಮ ಸೇವೆ, ಸಾಧನೆಗೈದಿರುವ ವ್ಯಕ್ತಿಗಳಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಇದನ್ನೂ ಓದಿ: PM Modi wish RRR Team : ದೇಶಕ್ಕೆ ʼಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿʼ ತಂದ RRR ತಂಡಕ್ಕೆ ಮೋದಿ ಪ್ರಶಂಸೆ..!

ಪ್ರಸಿದ್ಧ ವ್ಯಕ್ತಿಗಳು, ಕಲಾವಿದರು, ಬರಹಗಾರರು, ಕ್ರೀಡಾಪಟುಗಳು, ಪ್ರದರ್ಶಕರು, ಉದ್ಯಮಿಗಳು, ಅಮೆರಿಕಾ ಮತ್ತು ವಿದೇಶಿ ರಾಜಕಾರಣಿಗಳು ಮತ್ತು ವಿದೇಶಿ ರಾಜ ಕುಟುಂಬಗಳ ಸದಸ್ಯರನ್ನೂ ಒಳಗೊಂಡಂತೆ ಈ ಗೌರವವನ್ನು ವಿವಿಧ ಜನರಿಗೆ ನೀಡಲಾಗಿದೆ. ವಿಶೇಷ ಅಂದ್ರೆ, ಈ ಪ್ರತಿಷ್ಠಿತ ʼಕೆಂಟಕಿ ಕರ್ನಲ್ ಪ್ರಶಸ್ತಿʼ ಪಡೆದ ಏಕೈಕ ಭಾರತೀಯ ಅಂದ್ರೆ ನಮ್ಮ ಅಣಾವ್ರು. ಈ ವಿಚಾರ ಬರೀ ಕನ್ನಡಿಗರಿಗೇ ಅಷ್ಟೇ ಅಲ್ಲ, ಭಾರತಕ್ಕೆ ಹೆಮ್ಮೆ.

ಕಲೆ ಆರಾಧನೆ ಮಾಡುತ್ತಲೇ ನಟನೆಯನ್ನೇ ಜೀವನವನ್ನಾಗಿಸಿಕೊಂಡಿದ್ದ ಮುತ್ತಣ್ಣ ಕರುನಾಡಿನ ಕನ್ನಡ ಮನಗಳಲ್ಲಿ ಇಂದಿಗೂ ಅಜರಾಮರ. ಅದ್ಬುತ ಪಾತ್ರಗಳ ಮೂಲಕ ಕನ್ನಡಾಭಿಮಾನವನ್ನು ಮೆರೆದ ದೃವತಾರೆ ನಮ್ಮ ರಾಜಕುಮಾರ. ಇಂದಿಗೂ ಅಣ್ಣಾವ್ರ ಹಾಡುಗಳು ಕೇಳಿದ್ರೆ ಮನಸ್ಸಿಗೆ ನೆಮ್ಮದಿ. ಅಲ್ಲದೆ, ಅವರ ಸಿನಿಮಾಗಳನ್ನು  ನೋಡಿದ್ರೆ ಇಂದಿಗೂ ಸ್ಪೂರ್ತಿದಾಯಕವಾಗಿದೆ. 

ಇದನ್ನೂ ಓದಿ: Golden Globe Awards: RRRಗೆ ಪ್ರತಿಷ್ಠಿತ ಪ್ರಶಸ್ತಿಯ ಗರಿ; ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್!

ಇದುವರೆಗು, ಕುಸ್ತಿಪಟು ಮುಹಮ್ಮದ್ ಅಲಿ, ಅಮೆರಿಕಾ ಮಾಜಿ ಅಧ್ಯಕ್ಷ ಜಾರ್ಜ್ ಹೆಚ್ ಡಬ್ಲು ಬುಶ್, ಮಾಜಿ ಬ್ರಿಟಿಷ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್, ಮಾಜಿ ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್, ನಟ ಜಾನಿ ಡೆಪ್, ನಟಿ ಜೆನ್ನಿಫ಼ರ್ ಲಾರೆನ್ಸ್, ಬೀಟಲ್ಸ್ ಗಾಯಕ ಜಾನ್ ಲೆನನ್, ಮಾಜಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಮಾಜಿ ಅಮೆರಿಕಾ ಅಧ್ಯಕ್ಷ ರೊನಾಲ್ಡ್ ರೇಗನ್, ಸೇರಿದಂತೆ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಅವರಿಗೆ ಮಾತ್ರ ಕೆಂಟಕಿ ಕರ್ನಲ್‌ ಪ್ರಶಸ್ತಿ ಲಭಿಸಿದೆ. ಇಂತಹವರ ಸಾಲಿನಲ್ಲಿ 9ನೇ ಸಾಲಿನಲ್ಲಿ ಡಾ. ರಾಜ್‌ಕುಮಾರ್‌ ಅವರು ಹೆಸರು ಕೇಳಿಬರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More