Home> Entertainment
Advertisement

ವಿಶ್ವಸುಂದರಿ ಆಗುವ ಮೊದಲು ಐಶ್ವರ್ಯ ರೈ ಹೇಗಿದ್ದರು ಗೊತ್ತಾ?

ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ತಮ್ಮ ಮಾದಕ ಕಣ್ಣುಗಳಿಂದಲೇ ಅವರು ಜಗತ್ತಿನಾದ್ಯಾಂತ ಹೆಸರು ವಾಸಿಯಾದವರು. ಮೂಲತಃ ಮಂಗಳೂರಿನ ಬೆಡಗಿಯಾಗಿರುವ ಇವರು ಕರ್ನಾಟಕದ ಹೆಮ್ಮೆಯ ಪುತ್ರಿ.ಈಗ ವಿಶ್ವ ಸುಂದರಿ ಪಟ್ಟ ಅಲಂಕರಿಸುವ ಮೊದಲು ಇದ್ದಾಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶ್ವಸುಂದರಿ ಆಗುವ ಮೊದಲು ಐಶ್ವರ್ಯ ರೈ ಹೇಗಿದ್ದರು ಗೊತ್ತಾ?

ನವದೆಹಲಿ: ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ತಮ್ಮ ಮಾದಕ ಕಣ್ಣುಗಳಿಂದಲೇ ಅವರು ಜಗತ್ತಿನಾದ್ಯಾಂತ ಹೆಸರು ವಾಸಿಯಾದವರು. ಮೂಲತಃ ಮಂಗಳೂರಿನ ಬೆಡಗಿಯಾಗಿರುವ ಇವರು ಕರ್ನಾಟಕದ ಹೆಮ್ಮೆಯ ಪುತ್ರಿ. ವಿಶ್ವ ಸುಂದರಿ ಪಟ್ಟ ಅಲಂಕರಿಸುವ ಮೊದಲು ಇದ್ದಾಗಿನ ಅವರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

1994ರಲ್ಲಿ ವಿಶ್ವಸುಂದರಿ ಪಟ್ಟವನ್ನು ಧರಿಸುವ ಮೂಲಕ ನಂತರ ಬಾಲಿವುಡ್ ಸಿನಿಮಾಗೂ ಎಂಟ್ರಿ ಕೊಟ್ಟಿದ್ದರು.ತದನಂತರ ಸಲ್ಮಾನ್ ಖಾನ್ ರೊಂದಿಗೆ ಬ್ರೇಕ್ಆಪ್ ಆದ ನಂತರ ವಿವೇಕ್ ಒಬೆರಾಯ್ ಜೊತೆಯೂ ಕೆಲವ ವರ್ಷಗಳ ಕಾಲ ಲವ್ವಿ ಡವ್ವಿ ನಡೆದಿತ್ತು. ಆದರೆ ಇದಾದ ನಂತರ ತಮಗಿಂತಲು ಕಿರಿಯನಾದ ಜೂನಿಯರ್ ಬಚ್ಚನ್ ಅಭಿಷೇಕ್ ರನ್ನು ಐಶ್ವರ್ಯ ರೈ ವರಿಸಿದ್ದರು.

 
 
 
 

 
 
 
 
 
 
 
 
 

Before Miss World

A post shared by Aishwarya Rai Bachchan's crown (@aishwaryascrown) on

ಐಶ್ವರ್ಯ ರೈ ಮೊದಲ ಬಾರಿಗೆ 1997 ರಲ್ಲಿ ಮಣಿರತ್ನಂ ಅವರ ಇರುವರ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇದಾದ ನಂತರ ಬಾಲಿವುಡ್ ನಲ್ಲಿ ಔರ್ ಪ್ಯಾರ್ ಹೋ ಗಯಾ ಚಿತ್ರದಲ್ಲಿ ಬಾಬಿ ಡಿಯೋಲ್ ಜೊತೆ ನಟಿಸಿದ್ದರು. ತದನಂತರ ,ಉಮ್ರಾವೋ ಜಾನ್ ,ಗುರು,ಹಾಗೂ ಜೋಧಾ ಅಕ್ಬರ್ ನಂತರ ಚಿತ್ರಗಳಲ್ಲಿ ನಟಿಸುವ ಮೂಲಕ ಯಶಸ್ವಿ ನಟಿ ಎನಿಸಿಕೊಂಡಿದ್ದರು.

ಇತ್ತೀಚಿಗೆ ಅನಿಲ್ ಕಪೂರ್ ಜೊತೆ ಫನ್ನಿಖಾನ್ ಚಿತ್ರದಲ್ಲಿ ನಟಿಸಿದ್ದ ಐಶ್ವರ್ಯ ರೈ, ಮುಂದಿನ ಪ್ರೊಜೆಕ್ಟ್ ಗಳ ಕುರಿತಾಗಿ ಶೀಘ್ರದಲ್ಲಿ ಘೋಷಿಸುವುದಾಗಿ ಹೇಳಿದ್ದರು. ವಿಶೇಷವೆಂದರೆ ಈ ವರ್ಷ ನಿಜ ಜೀವನ ಕಥೆಯಾದಾರಿತ ಚಿತ್ರದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ.

 

Read More