Home> Entertainment
Advertisement

Viruksha: ಎರಡನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್‌-ಅನುಷ್ಕಾ: ಗುಟ್ಟು ರಟ್ಟು ಮಾಡಿದ ಡಿವಿಲಿಯರ್ಸ್!

Virat And Anushka: ಇಂಡಿಯನ್‌ ಕ್ರಿಕೆಟ್‌ ಫ್ಯಾನ್ಸ್‌ನ ಮೋಸ್ಟ್‌ ಫೇವರೇಟ್‌ ಜೋಡಿ ವಿರಾಟ್‌ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂಬ ಮಾತುಗಳು ಹರಿದಾಡುತ್ತಿದ್ದು, ಈ ವಿಚಾರವನ್ನು ಆರ್‌ಸಿಬಿಯ  ಡಿ ವಿಲಿಯರ್ಸ್‌ ಖಚಿತಪಡಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
 

Viruksha: ಎರಡನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್‌-ಅನುಷ್ಕಾ: ಗುಟ್ಟು ರಟ್ಟು ಮಾಡಿದ ಡಿವಿಲಿಯರ್ಸ್!

Virat Kohli And Anushka Sharma Expecting Second Baby: ಭಾರತೀಯ ಕ್ರಿಕೇಟಿಗ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಿಂದ ದೂರ ಉಳಿದ ಬೆನ್ನಲ್ಲೇ ಹತ್ತಾರು ಸುದ್ದಿಗಳು ಒಬ್ಬರ ಬಾಯಿಂದ ಇನ್ನೊಬ್ಬರಿಗೆ ಹರಿದಾಡಿತ್ತು. ಅದೇ ವೇಳೆ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂಬ ಮಾತುಗಳೂ ಕೇಳಿಬಂದಿದ್ದು, ಆದರೆ ಇದಕ್ಕೆ ಯಾವಯದೇ ರೀತಿಯ ಸ್ಪಷ್ಟತೆ ಸಿಕ್ಕಿರಲಿಲ್ಲ. ಇಷ್ಟು ಮಾತ್ರವಲ್ಲದೆ ಇದರರೊಂದಿಗೆ  ವಿರಾಟ್ ಅನುಷ್ಕಾ ದಂಪತಿ ಜೊತೆಯಾಗಿ ಸಮಯ ಕಳೆಯುತ್ತಿರುವುದು ಏಕೆ ಅನ್ನೋದಕ್ಕೆ ಪ್ರಶ್ನೆ ಆಗಿತ್ತು. 

ಇದೀಗ ಸ್ಪೋರ್ಟ್ಸ್‌ನ ಮೋಸ್ಟ್ ಫೇವರಿಟ್ ಕಪಲ್ಸ್ ವಿರಾಟ್‌- ಅನುಷ್ಕಾ ಜೋಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೋದು ಖಚಿತವಾಗಿದೆ. ಆದರೆ ಈ ವಿಚಾರದ ಬಗ್ಗೆ ವಿರಾಟ್ ಕೊಹ್ಲಿ ಅತ್ಯಾಪ್ತ, ಆರ್‌ಸಿಬಿ ಫ್ಯಾನ್ಸ್‌ನ ಕ್ರೇಝಿ ಪ್ಲೇಯರ್ ಡಿ ವಿಲಿಯರ್ಸ್‌ ವಿರಾಟ್ ಹಾಗೂ ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸೀಕ್ರೆಟ್‌ ರಿವಿಲ್‌ ಮಾಡಿದ್ದಾರೆ. ನಿನ್ನೆ ಫೆಬ್ರವರಿ 3 ರಂದು ಖುದ್ದು ಎಬಿ ಡಿವಿಲಿಯರ್ಸ್ ತಮ್ಮದೇ ಆದ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Akshay Kumar deepfake video: ರಶ್ಮಿಕಾ, ಕತ್ರಿನಾ ನಂತರ ಅಕ್ಷಯ್ ಕುಮಾರ್ ಡೀಪ್‌ಫೇಕ್‌ ವಿಡಿಯೋ ವೈರಲ್

ಹೌದು.. ಎಬಿ ಡಿವಿಲಿಯರ್ಸ್ ನಿನ್ನೆ ತಮ್ಮದೇ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಎಬಿ ಡಿ ವಿಲಿಯರ್ಸ್, ವಿರಾಟ್ ಕೊಹ್ಲಿ ಸದ್ಯ ಕುಟುಂಬದೊಂದಿಗೆ ಕಾಲ ಕಳೆಯುವುದು ಅತ್ಯಂತ ಮುಖ್ಯವಾಗಿದೆ ಅಲ್ಲದೆ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ನಿನ್ನೆ ಯುಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಯೊಬ್ಬರು ‘ಎಬಿ ಡಿ ವಿಲಿಯರ್ಸ್ ಅವರೇ ನೀವು ವಿರಾಟ್ ಕೊಹ್ಲಿ ಅವರೊಂದಿಗೆ ಮಾತನಾಡಿದ್ದೀರಾ? ಅವರು ಚೆನ್ನಾಗಿದ್ದಾರಾ? ಅವರು 3ನೇ ಟೆಸ್ಟ್ ಪಂದ್ಯಕ್ಕೆ ತಂಡಕ್ಕೆ ಮರಳುತ್ತಾರಾ? ಭಾರತಕ್ಕೆ ಅವರ ಅವಶ್ಯಕತೆ ಇದೆ. ನಾವು ಅವರು ತಂಡಕ್ಕೆ ಮರಳುವುದನ್ನು ಎದುರು ನೋಡುತ್ತಿದ್ದೇವೆ’ ಎಂದು ಕೇಳಿದ್ದಾರೆ. 

ಅದಕ್ಕೆ ಡಿವಿಲಿಯರ್ಸ್ ಉತ್ತರಿಸುವಾಗ, ‘ಇದು ಕುಟುಂಬದ ಸಮಯವಾಗಿದ್ದು, ವಿರುಷ್ಕಾ ಜೋಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಮಯದಲ್ಲಿ ಕುಟುಂಬದವರಿಗೆ ಸಮಯ ಕೊಡುವುದು ಎಷ್ಟು ಮುಖ್ಯ ಎಂಬುದು ನಿಮಗೆ ತಿಳಿದಿದೆ. ನಿಮಗೂ ಇದರ ನಿಜವಾದ ಅನುಭವವಾಗಿಲ್ಲವೇ? ನೀವು ಇಂತಹ ಸಂದರ್ಭದಲ್ಲಿ ನಿಮ್ಮ ದಾರಿ ಬದಲಾಯಿಸಿಕೊಳ್ಳದಿದ್ದರೆ, ನೀವು ಭೂಮಿ ಮೇಲೆ ಏಕೆ ಇದ್ದೀರಿ?’ ಎಂದು ಪ್ರಶ್ನಿಸಿದ್ದಾರೆ. 
ಅಷ್ಟು  ಮಾತ್ರವಲ್ಲದೇ, "ಇಂತಹ ಸಮಯದಲ್ಲಿ ಬಹಳಷ್ಟು ಜನರು ತಮ್ಮ ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ನೀವು ವಿರಾಟ್ ಕೊಹ್ಲಿ ಅವರನ್ನು ಈ ವಿಷಯದಲ್ಲಿ ಸುಲಭವಾಗಿ ಅಂದಾಜಿಸಲು ಆಗುವುದಿಲ್ಲ. ನೀವು ವಿರಾಟ್ ಕೊಹ್ಲಿಯ ಆಟವನ್ನು ನೋಡುವ ಅವಕಾಶ ಕಳೆದುಕೊಂಡಿದ್ದೀರಿ, ಆದರೆ ಆತ ನಿಜಕ್ಕೂ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ" ಎಂದು ಡಿವಿಲಿಯರ್ಸ್ ಸ್ನೇಹಿತನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IND vs ENG 2nd Test:ಅಪರೂಪದ ಸಾಧನೆ ಮಾಡಿದ ಸ್ಟಾರ್ ಕ್ರಿಕೆಟರ್.. 72 ವರ್ಷ ಹಳೆಯ ದಾಖಲೆ ಬ್ರೇಕ್!

ವಿರಾಟ್ ಮತ್ತು ಅನುಷ್ಕಾ ದಂಪತಿ ಎರಡನೇ ಮಗುವಿಗಾಗಿ ಕಾಯುತ್ತಿರುವ ವಿಷಯವನ್ನು ಖುದ್ದು ಎಬಿ ಡಿವಿಲಿಯರ್ಸ್ ವಿಡಿಯೋ ಮೂಲಕ ಈ ಮಾಹಿತಿ ಬಹಿರಂಗಪಡಿಸಿದ್ದು, ಫೆಬ್ರವರಿ 3ರಂದು ತಮ್ಮದೇ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಡಿವಿಲಿಯರ್ಸ್ ಈ ಮಾಹಿತಿ ತಿಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದು, ಆದರೆ ವೈಯಕ್ತಿಕ ಕಾರಣಗಳನ್ನು ನೀಡಿ ವಿರಾಟ್‌ ಕೊಹ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಜೊತೆ ಚರ್ಚಿಸಿ ಹೊರಗುಳಿದಿದ್ದಾರೆಂದು ಎಂದು ಬಿಸಿಸಿಐ ತಿಳಿಸಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More