Home> Entertainment
Advertisement

ʼಆದಿಪುರುಷʼ ಪ್ರಭಾಸ್‌ ಸೇರಿ ಚಿತ್ರತಂಡಕ್ಕೆ ಲೀಗಲ್‌ ನೋಟಿಸ್‌..!

ಬಾಹುಬಲಿ ಪ್ರಭಾಸ್ ನಾಯಕನಾಗಿ ನಟಿಸಿರುವ ಆದಿಪುರುಷ ಸಿನಿಮಾಕ್ಕೆ ಕಷ್ಟಗಳು ಬರುತ್ತಿವೆ. ಪ್ರಾರಂಭದಿಂದಲೂ ಚಿತ್ರ ಗ್ರಾಪಿಕ್ಸ್‌ ಮತ್ತು ರಾವಣನ ವೇಷಭೂಣಗಳು ಸಖತ್‌ ಟ್ರೋಲ್‌ಗೆ ಗುರಿಯಾಗಿದ್ದವು. ಸದ್ಯ ಸಿನಿಮಾದಲ್ಲಿ ಹಿಂದೂಗಳ ಭಾವನಗೆ ದಕ್ಕೆ ತರುವಂತೆ ರಾವಣ ಮತ್ತು ಹನುಮಂತನ ರೂಪವನ್ನು  ಸೃಷ್ಟಿಸಲಾಗಿದೆ ಎಂದು ದೂರಿ ಹಲವು ಸಂಘಟನೆಗಳು, ಜನರು, ರಾಜಕೀಯ ವ್ಯಕ್ತಿಗಳು ದೂರು ನೀಡಿದ್ದಾರೆ. 

 ʼಆದಿಪುರುಷʼ ಪ್ರಭಾಸ್‌ ಸೇರಿ ಚಿತ್ರತಂಡಕ್ಕೆ ಲೀಗಲ್‌ ನೋಟಿಸ್‌..!

ಬೆಂಗಳೂರು : ಬಾಹುಬಲಿ ಪ್ರಭಾಸ್ ನಾಯಕನಾಗಿ ನಟಿಸಿರುವ ಆದಿಪುರುಷ ಸಿನಿಮಾಕ್ಕೆ ಕಷ್ಟಗಳು ಬರುತ್ತಿವೆ. ಪ್ರಾರಂಭದಿಂದಲೂ ಚಿತ್ರ ಗ್ರಾಪಿಕ್ಸ್‌ ಮತ್ತು ರಾವಣನ ವೇಷಭೂಣಗಳು ಸಖತ್‌ ಟ್ರೋಲ್‌ಗೆ ಗುರಿಯಾಗಿದ್ದವು. ಸದ್ಯ ಸಿನಿಮಾದಲ್ಲಿ ಹಿಂದೂಗಳ ಭಾವನಗೆ ದಕ್ಕೆ ತರುವಂತೆ ರಾವಣ ಮತ್ತು ಹನುಮಂತನ ರೂಪವನ್ನು  ಸೃಷ್ಟಿಸಲಾಗಿದೆ ಎಂದು ದೂರಿ ಹಲವು ಸಂಘಟನೆಗಳು, ಜನರು, ರಾಜಕೀಯ ವ್ಯಕ್ತಿಗಳು ದೂರು ನೀಡಿದ್ದಾರೆ. 

ಆದಿಪುರುಷ ಸಿನಿಮಾದ ಟೀಸರ್ ದಸರಾ ಹಬ್ಬದಂದು ಬಿಡುಗಡೆಯಾಗಿತ್ತು. ಚಿತ್ರದ ಟೀಸರ್‌ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಚಲನಚಿತ್ರವನ್ನು ಬ್ಯಾನ್ ಮಾಡಲು ನೆಟಿಜನ್ಸ್‌ ಒತ್ತಾಯ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಚಲನಚಿತ್ರವನ್ನು ಬಹಿರಂಗಗೊಳಿಸಬೇಕೆಂಬ ಬೇಡಿಕೆಯೂ ಹಲವು ರಾಜಕೀಯ ಪಕ್ಷಗಳ ನಾಯಕರಿಂದ ಕೇಳಿಬರುತ್ತಿದೆ. ಈ ಸಿನಿಮಾ ಮೇಲೆ ವಿವಿಧ ನಗರಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಟೆನ್ಶನ್ ಫ್ರೀಯಾದ ಟೀಂ ಇಂಡಿಯಾ, ಬುಮ್ರಾ ಕೊರತೆ ನೀಗಿಸಲಿದ್ದಾನೆ ಈ ಬೌಲರ್!

ರಾವಣ ಮತ್ತು ಹನುಮಂತನ ವೇಷವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಚಿತ್ರತಂಡದ ಮೇಲೆ ಸಾಕಷ್ಟು ಬ್ಯಾಡ್‌ ಕಾಮೆಂಟ್‌ಗಳು ವೈರಲ್‌ ಆಗುತ್ತಿವೆ. ಅಲ್ಲದೆ ಕೆಲವು ಮಂದಿ ನೆಟ್ಟಿಗರು ರಾವಣನ ರೂಪವನ್ನು ಅಲ್ಲಾಉದ್ದೀನ್ ಖಿಲ್ಜೀಗೆ ಹೋಲಿಕೆ ಮಾಡುತ್ತಿದ್ದಾರೆ. ಅಲ್ಲದೆ, ಧಾರ್ಮಿಕ ಮನೋಭಾವದ ಮೇಲೆ ದಕ್ಕೆ ವಿಚಾರವಾಗಿ ಆದಿಪುರುಷ ನಿರ್ದೇಶಕ ಓಂ ರೌತ್, ನಟಿ, ನಟರ ಮೇಲೆ ಪ್ರಕರಣ ದಾಖಲಾಗಿವೆ. ಚಿತ್ರ ನಿರ್ಮಾಪಕ ಓಂ ರೌತ್, ಟಿ-ಸಿರೀಸ್ ಭೂಷಣ್ ಕುಮಾರ್, ಕೃತಿ ಸನನ್, ಪ್ರಭಾಸ್, ಸೈಫ್ ಅಲಿ ಖಾನ್‌ಗೂ ನ್ಯಾಯವಾದಿ ಆಶಿಶ್ ರಾಯ್ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಲಾಯರ್ ಆಶಿಶ್ ರಾಯ್ ಮಾತನಾಡಿ, ಸಿನಿಮಾ ನಿರ್ಮಾಪಕರು, ಕಲಾವಿದರು ಹಿಂದೂಗಳ ಮನೋಭಾವಕ್ಕೆ ದಕ್ಕೆ ತಂದಿದ್ದಾರೆ. ರಾಮಾಯಣದ ಪಾತ್ರಗಳನ್ನು ಇಸ್ಲಾಮೀಕರಣ ಮಾಡಿ ತೋರಿಸಿದ್ದಾರೆ. ಭಾರತೀಯ ನಾಗರೀಕತೆಯನ್ನು ಹಾಸ್ಯ ಮಾಡಲಾಗಿದೆ. ಸಿನಿಮಾ ಪ್ರಚಾರವನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ, ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಭಾರತ ಪರ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಕನ್ನಡತಿ ಸ್ಮೃತಿ ಮಂಧಾನ

ಇನ್ನು ಈ ಕುರಿತು ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದಿಪುರುಷ ಸಿನಿಮಾ 2023 ಜನವರಿ 12 ರಂದು ಬಿಡುಗಡೆಯಾಗಲಿದೆ. ರಾಮಾಯಣ ಆಧರಿತ ಆದಿಪುರುಷ ಸಿನಿಮಾಗೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿವೆ. ಇನ್ನು ವಿಶೇಷವಾಗಿ ಸಿನಿಮಾದಲ್ಲಿ ರಾವಣ, ಹನುಮಂತ ಪಾತ್ರದ ಬಗ್ಗೆ ಜನ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಆದಿ ಪುರುಷ್‌ ವಿಎಫ್‌ಎಕ್ಸ್‌ ಮೇಲೂ ಜನ ಕಾಮೆಂಟ್ಸ್ ಮಾಡುತ್ತಿದ್ದಾರೆ.

ಈ ಚಿತ್ರವನ್ನು ಓಂ ರೌತ್ ನಿರ್ದೇಶನದಲ್ಲಿ ಟೀ ಸೀರಿಸ್‌ ಸಂಸ್ಥೆ ಸುಮಾರು 500 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಈ ರಾವಣ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸುತ್ತಿದ್ದು, ಪ್ರಭಾಸ್‌ಗೆ ಜೊಡಿಯಾಗಿ ಕೃತಿ ಸನೋನ್, ಲಕ್ಷ್ಮೀಶನ ಪಾತ್ರದಲ್ಲಿ ಸನ್ನಿ ಸಿಂಗ್, ಹನುಮಂತನ ಪಾತ್ರದಲ್ಲಿ ದೇವದತ್ತ ನಾಗೇ ನಟಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More