Home> Entertainment
Advertisement

ಡಿಸ್ಚಾರ್ಜ್‌ ಆಗುತ್ತಿದ್ದಂತೆ ಕ್ಯಾಮರಾದಲ್ಲಿ ಸೆರೆಯಾಯ್ತು ದೀಪಿಕಾ ಮಗಳ ಮೊದಲ ಫೋಟೋ! ಮುದ್ದಾದ ಚಿತ್ರಕ್ಕೆ ಫ್ಯಾನ್ಸ್‌ ಫಿದಾ

Deepika padukone baby Photo: ನಟಿ ದೀಪಿಕಾ ಪಡುಕೋಣೆ ಕೆಲ ದಿನಗಳ ಹಿಂದೆಯಷ್ಟೆ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದರು. ಸೆಪ್ಟೆಂಬರ್ 8 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ದಿಪ್ಪಿ ತಮ್ಮ ಅಭಿಮಾನಿಗಳೊಂದಿಗೆ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಇದೀಗ ನಟಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ಮುದ್ದಾದ ದೃಶ್ಯ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಡಿಸ್ಚಾರ್ಜ್‌ ಆಗುತ್ತಿದ್ದಂತೆ ಕ್ಯಾಮರಾದಲ್ಲಿ ಸೆರೆಯಾಯ್ತು ದೀಪಿಕಾ ಮಗಳ ಮೊದಲ ಫೋಟೋ! ಮುದ್ದಾದ ಚಿತ್ರಕ್ಕೆ ಫ್ಯಾನ್ಸ್‌ ಫಿದಾ

Deepika padukone baby Photo: ನಟಿ ದೀಪಿಕಾ ಪಡುಕೋಣೆ ಕೆಲ ದಿನಗಳ ಹಿಂದೆಯಷ್ಟೆ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದರು. ಸೆಪ್ಟೆಂಬರ್ 8 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ದಿಪ್ಪಿ ತಮ್ಮ ಅಭಿಮಾನಿಗಳೊಂದಿಗೆ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಇದೀಗ ನಟಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ಮುದ್ದಾದ ದೃಶ್ಯ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಗಣೇಶೋತ್ಸವದ ವೇಳೆ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಮನೆಗೆ ಪುಟ್ಟ ಸದಸ್ಯರ ಆಗಮನವಾಗಿದೆ. ಸೆಪ್ಟೆಂಬರ್ 8 ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಟಿ ಇತ್ತೀಚೆಗಷ್ಟೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು. ಅದರ ನಂತರ, ರಣವೀರ್ ಮತ್ತು ದೀಪಿಕಾ ಮಗುವಿನೊಂದಿಗೆ ಇರುವ ಮೊದಲ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಈ ಫೋಟೋದಲ್ಲಿ, ದೀಪಿಕಾ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದಿದ್ದಾದ್ದು, ರಣವೀರ್ ಪುಟ್ಟ ದೇವತೆಯನ್ನು ಪ್ರೀತಿಯಿಂದ ನೋಡುತ್ತಿರುವುದು ಕಂಡುಬಂದಿದೆ. ಈ ಫೋಟೋಗೆ ನೆಟಿಜನ್‌ಗಳು ಲೈಕ್‌ ಮತ್ತು ಕಾಮೆಂಟ್‌ಗಳ ಸುರಿಮಳೆ ಗೈಯುತ್ತಿದ್ದಾರೆ. ಈ ಫೋಟೋದಲ್ಲಿ ಇತ್ತೀಚೆಗಷ್ಟೇ ತಂದೆ ತಾಯಿಯಾದ ದೀಪಿಕಾ ಮತ್ತು ರಣವೀರ್ ಮುಖದಲ್ಲಿ ಸಂತಸ ಸ್ಪಷ್ಟವಾಗಿ ಕಾಣುತ್ತಿದೆ.

ಇದನ್ನೂ ಓದಿ: ತಾಯಿಯಾದ ನಂತರ ಇನ್ಸ್ಟಾ ಬಯೋ ಬದಲಾಯಿಸಿದ ದೀಪಿಕಾ ಪಡುಕೋಣೆ! ನಟಿ ಈ ರೀತಿ ಬರೆಯಲು ಕಾರಣ ಏನು?

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮನೆಗೆ ಮರಳುತ್ತಿದ್ದ ದೀಪಿಕಾ ಅವರ ಈ ಫೋಟೋವನ್ನು ಪಾಪರಾಜಿಗಳು ತೆಗೆದಿದ್ದಾರೆ. ಇದರಲ್ಲಿ ರಣವೀರ್ ಮತ್ತು ದೀಪಿಕಾ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದು, ಮಗುವನ್ನು ಕೈಯಲ್ಲಿ ಹಿಡಿದಿದ್ದಾರೆ.  ದೀಪಿಕಾ ಮಗುವನ್ನು ನೋಡಿ ನಗುತ್ತಿದ್ದರೆ ರಣವೀರ್ ಕೂಡ ಮಗುವನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಿದ್ದಾರೆ. 

ತಾಯಿಯಾದ ನಂತರ, ದೀಪಿಕಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಯೋವನ್ನು ಬದಲಾಯಿಸಿದ್ದಾರೆ. ಆಕೆಯ ಬಯೋದಲ್ಲಿನ ಈ ಹೊಸ ಪಠ್ಯವು ನೆಟಿಜನ್‌ಗಳ ಗಮನ ಸೆಳೆದಿದೆ. ತಾಯಿಯಾದ ನಂತರ ದೀಪಿಕಾ ಅವರ ಜೀವನ ಹೇಗೆ ಸಾಗುತ್ತಿದೆ ಎಂಬುದನ್ನು ಪಠ್ಯವನ್ನು ಓದಿದ ನಂತರ ಅರಿವಾಗುತ್ತದೆ. 'ಫೀಡ್, ಬರ್ಪ್, ಸ್ಲೀಪ್, ರಿಪೀಟ್' ಎಂದು ಮಗುವಿನ ದಿನಚರಿಯನ್ನು ವಿವರಿಸುವ ಜೈವಿಕ ಇದಾಗಿದ್ದು ಸದ್ಯ ನಟಿಯ ಒಂದೊಂದು ನಡತೆಯ ಮೇಲೂ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More