Home> Entertainment
Advertisement

Karnataka Mahharashtra Border Dispute: ಮಹಾರಾಷ್ಟ್ರ ಪುಂಡರಿಗೆ ಎಚ್ಚರಿಕೆ ಕೊಟ್ಟ ನಟ ದರ್ಶನ್‌

Karnataka - Mahharashtra Border Dispute : ಮಹಾರಾಷ್ಟ್ರ ಪುಂಡರಿಗೆ ಇದೀಗ ನಟ ದರ್ಶನ್‌ ಎಚ್ಚರಿಕೆ ಕೊಟ್ಟಿದ್ದಾರೆ. ಪರರನ್ನು ನಮ್ಮಂತೆ ಕಾಣುವುದು ಕನ್ನಡಿಗರ ಪ್ರೀತಿ ಸೌಹಾರ್ದತೆ. ಇದನ್ನ ಬಲಹೀನತೆ ಎಂದರೆ ತಿರುಗಿ ಸರಿಯಾದ ಉತ್ತರ ಕೊಡ್ತೀವಿ ಎಂದು ನಟ ದರ್ಶನ್‌ ಖಡಕ್‌ ಸಂದೇಶ ನೀಡಿದ್ದಾರೆ.

Karnataka Mahharashtra Border Dispute: ಮಹಾರಾಷ್ಟ್ರ ಪುಂಡರಿಗೆ ಎಚ್ಚರಿಕೆ ಕೊಟ್ಟ ನಟ ದರ್ಶನ್‌

Darshan on Karnataka - Mahharashtra Border Dispute : ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದೆ. ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದು ಪುಂಡಾಟ ನಡೆಸಿದ್ದಾರೆ. ಮಹಾರಾಷ್ಟ್ರ ಪುಂಡರಿಗೆ ಇದೀಗ ನಟ ದರ್ಶನ್‌ ಎಚ್ಚರಿಕೆ ಕೊಟ್ಟಿದ್ದಾರೆ. ಪರರನ್ನು ನಮ್ಮಂತೆ ಕಾಣುವುದು ಕನ್ನಡಿಗರ ಪ್ರೀತಿ ಸೌಹಾರ್ದತೆ. ಇದನ್ನ ಬಲಹೀನತೆ ಎಂದರೆ ತಿರುಗಿ ಸರಿಯಾದ ಉತ್ತರ ಕೊಡ್ತೀವಿ ಎಂದು ನಟ ದರ್ಶನ್‌ ಖಡಕ್‌ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ : Nagaraj Watal : ರಾಜ್ಯಕ್ಕೆ ಬರುವ ಮಹಾರಾಷ್ಟ್ರ ಸಚಿವರನ್ನು ಬಂಧಿಸಿ : ವಾಟಾಳ್ ಆಗ್ರಹ 

ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿರುವ ದರ್ಶನ್‌, "ಬೆಳಗಾವಿ ನಮ್ಮದು, ಇಲ್ಲಿ ಕನ್ನಡ ಧ್ವಜ ಹಾರಿಸುವುದು, ಈ ಮಣ್ಣಿನ ನೆಲದ ಮೌಲ್ಯಗಳಿಗೆ ಬೆಲೆಕೊಡುವ ಪರರನ್ನು ನಮ್ಮಂತೆ ಕಾಣುವುದು ಕನ್ನಡಿಗರ ಪ್ರೀತಿ ಸೌಹಾರ್ದತೆಗೆ ಹಿಡಿದ ಕನ್ನಡಿ. ಇದನ್ನು ಬಲಹೀನತೆ ಎಂದು ಭಾವಿಸಿದರೆ ಕನ್ನಡಿಗರು ತಿರುಗಿ ಬಿದ್ದು ಸರಿಯಾದ ಉತ್ತರ ನೀಡಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ. 

 

 

ಗಡಿ ವಿವಾದ ತಾರಕಕ್ಕೇರಿದ್ದು ಕರ್ನಾಟಕ ಬಸ್‌ಗೆ ಮಹಾರಾಷ್ಟ್ರದಲ್ಲಿ ಕಪ್ಪು ಮಸಿ ಬಳಿಯಲಾಗಿದೆ. ಇದಕ್ಕೆ ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮ ಕರ್ನಾಟಕಕ್ಕೆ ಬಸ್ ಸೇವೆಯನ್ನು ರದ್ದುಗೊಳಿಸಿದೆ. ಬೆಳಗಾವಿಯಲ್ಲಿ ಮತ್ತು ಗಡಿಭಾಗದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಮಹಾರಾಷ್ಟ್ರದ ಬಸ್ಸುಗಳ ಮೇಲೆ ಕನ್ನಡಿಗರು, ಕನ್ನಡಪರ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿರುವ ಕಾರಣಕ್ಕೆ ಮಹಾರಾಷ್ಟ್ರ ಸಾರಿಗೆ ನಿಗಮ ಕೂಟ ಕರ್ನಾಟಕಕ್ಕೆ ಬಸ್‌ ಸಂಚಾರ ನಿಲ್ಲಸಿದೆ. 

ಇದನ್ನೂ ಓದಿ : ಗುಜರಾತ್ ಚುನಾವಣೆ ಕರ್ನಾಟಕ ಚುನಾವಣೆ ಮೇಲೂ ಪ್ರಭಾವ ಬೀರುತ್ತೆ- ಶಾಸಕ ಅರವಿಂದ್ ಬೆಲ್ಲದ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More