Home> Entertainment
Advertisement

#LoveMocktail2: 'ಲವ್‌ ಮಾಕ್ಟೇಲ್‌ 2' ರಿಲೀಸ್‌ಗೆ ರೆಡಿ: ಬಿಡುಗಡೆ ಯಾವಾಗ ಗೊತ್ತಾ..?

ಈಗಾಗಲೇ  'ಲವ್‌ ಮಾಕ್ಟೇಲ್‌ 2' (Love Mocktail 2) ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಜನರಿಗೆ ಸಖತ್‌ ಇಷ್ಟವಾಗಿದೆ. ಪ್ರೇಕ್ಷಕ ಪ್ರಭು 'ಲವ್‌ ಮಾಕ್ಟೇಲ್‌ 2' ಟ್ರೇಲರ್‌ಗೆ ಥಂಬ್ಸ್ ಅಪ್‌ ಹೇಳಿದ್ದಾರೆ. ಹೀಗಾಗಿ ಬಿಡುಗಡೆ ದಿನಾಂಕವನ್ನು ತಡಮಾಡದೆ 'ಲವ್‌ ಮಾಕ್ಟೇಲ್‌ 2' ಚಿತ್ರತಂಡ ಘೋಷಣೆ ಮಾಡಿದೆ.

#LoveMocktail2: 'ಲವ್‌ ಮಾಕ್ಟೇಲ್‌ 2' ರಿಲೀಸ್‌ಗೆ ರೆಡಿ: ಬಿಡುಗಡೆ ಯಾವಾಗ ಗೊತ್ತಾ..?

ಬೆಂಗಳೂರು: ಪ್ರೀತಿಯ ಪಹರೆಯೊಳಗೆ ಸುಂದರ ಪ್ರೇಮ ಕಥೆ ಹೇಳಿದ್ದ ‌'ಲವ್‌ ಮಾಕ್ಟೇಲ್' ಚಿತ್ರತಂಡ ಮತ್ತೆ ತೆರೆ ಮೇಲೆ ಕಮಾಲ್ ಮಾಡಲು ಬರುತ್ತಿದೆ. 'ಲವ್‌ ಮಾಕ್ಟೇಲ್‌ 2' (Love Mocktail 2) ಮೂಲಕ ಡಾರ್ಲಿಂಗ್ ಕೃಷ್ಣ ಪ್ರೇಮಿಗಳಿಗೆ ಮತ್ತೊಂದು ಸರ್ಪ್ರೈಸ್‌ ಕೊಡಲು ಸಿದ್ಧರಾಗಿದ್ದಾರೆ.

ಹೌದು, 'ಲವ್‌ ಮಾಕ್ಟೇಲ್‌ 2' (Love Mocktail 2) ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದ್ದು, ಫೆಬ್ರವರಿ 11ರಿಂದ 'ಲವ್‌ ಮಾಕ್ಟೇಲ್‌' ಸೀಕ್ವೆಲ್‌ ರಾಜ್ಯದಾದ್ಯಂತ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ. ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ (Social Media) ಚಿತ್ರದ ಬಿಡುಗಡೆ ಬಗ್ಗೆ ಸಂತಸದ ವಿಚಾರ ಹಂಚಿಕೊಂಡಿದ್ದಾರೆ. ಸಿನಿಮಾ ರಿಲೀಸ್ ದಿನಾಂಕವನ್ನು ಡಾರ್ಲಿಂಗ್ ಕೃಷ್ಣ (Darling Krishna) ಸೇರಿದಂತೆ ಮಿಲನಾ ನಾಗರಾಜ್ (Milana Nagaraj) ಮತ್ತು ಚಿತ್ರತಂಡವೇ ಬಹಿರಂಗಪಡಿಸಿದೆ.

ಇದನ್ನೂ ಓದಿ- ಫೆಬ್ರವರಿ 21 ರಂದು ಗೆಳತಿ ಶಿಬಾನಿ ದಾಂಡೇಕರ್ ಮದುವೆಯಾಗಲಿರುವ ಫರ್ಹಾನ್ ಅಖ್ತರ್

ಟ್ರೇಲರ್‌ಗೆ ಫಿದಾ..!
ಈಗಾಗಲೇ  'ಲವ್‌ ಮಾಕ್ಟೇಲ್‌ 2' (Love Mocktail 2) ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಜನರಿಗೆ ಸಖತ್‌ ಇಷ್ಟವಾಗಿದೆ. ಪ್ರೇಕ್ಷಕ ಪ್ರಭು 'ಲವ್‌ ಮಾಕ್ಟೇಲ್‌ 2' ಟ್ರೇಲರ್‌ಗೆ ಥಂಬ್ಸ್ ಅಪ್‌ ಹೇಳಿದ್ದಾರೆ. ಹೀಗಾಗಿ ಬಿಡುಗಡೆ ದಿನಾಂಕವನ್ನು ತಡಮಾಡದೆ 'ಲವ್‌ ಮಾಕ್ಟೇಲ್‌ 2' ಚಿತ್ರತಂಡ ಘೋಷಣೆ ಮಾಡಿದೆ.

ಕೊರೊನಾ ಅಡ್ಡಿಯಾಗಿತ್ತು:
ಅಂದಹಾಗೆ ಸರಿಯಾಗಿ 2 ವರ್ಷಗಳ ಹಿಂದೆ ರಿಲೀಸ್‌ ಆಗಿದ್ದ 'ಲವ್‌ ಮಾಕ್ಟೇಲ್‌' ಸಿನಿಮಾ ಕನ್ನಡಿಗರ ಮನ ಗೆದ್ದಿತ್ತು. ಕೊರೊನಾ ಕಾಲದಲ್ಲೂ 'ಲವ್‌ ಮಾಕ್ಟೇಲ್‌' ಸಿನಿಮಾ ಗೆದ್ದು ಬೀಗಿದ್ದು, ಪರಭಾಷೆಯಲ್ಲೂ ನಮ್ಮ ಕನ್ನಡ ಸಿನಿಮಾವನ್ನು ಕಣ್ತುಂಬಿಕೊಂಡಿದ್ದರು. ಹೀಗೆ ದೊಡ್ಡ ಹಿಟ್‌ ಕಂಡ 'ಲವ್‌ ಮಾಕ್ಟೇಲ್‌' ಸಿನಿಮಾದ ಸೀಕ್ವೆಲ್‌ ನಿರ್ಮಿಸುವುದಾಗ ಚಿತ್ರತಂಡ ಘೋಷಿಸಿತ್ತು. ಅಂದಿನಿಂದಲೂ 'ಲವ್‌ ಮಾಕ್ಟೇಲ್‌ 2' ಬಿಡುಗಡೆಗಾಗಿ ಸಿನಿ ಪ್ರೇಕ್ಷಕರು ಕಾಯುತ್ತಿದ್ದರು. ಆದರೆ ಕೊರೊನಾ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಅಂತಿಮವಾಗಿ ಸಿನಿಮಾ ದಿನಾಂಕ ಘೋಷಣೆಯಾಗಿರುವುದು ಸಿನಿ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಇದನ್ನೂ ಓದಿ- U Turn 2: ಕನ್ನಡದಲ್ಲಿ ಮತ್ತೊಂದು ಹಾರರ್‌ ಸಿನಿಮಾ..! ರಿಲೀಸ್‌ಗೆ ರೆಡಿಯಾಯ್ತು 'ಯು-ಟರ್ನ್‌ 2'!

ನಿಜ ಜೀವನದಲ್ಲೂ ಮದುವೆ..!
ಹೌದು, ‘ಲವ್​ ಮಾಕ್ಟೇಲ್​’ ಯಶಸ್ಸು ಹಲವರ ಬದುಕು ಬದಲಿಸಿತ್ತು. ಚಿತ್ರದಲ್ಲಿ ಕೆಲಸ ಮಾಡಿದ ಹಲವು ಕಲಾವಿದರು ಹೊಸ ಬದುಕನ್ನು ಕಟ್ಟಿಕೊಳ್ಳಲು ಈ ಸಿನಿಮಾ ವೇದಿಕೆ ಒದಗಿಸಿತ್ತು. ಇಷ್ಟೇ ಅಲ್ಲ ಲವ್‌ ಮಾಕ್ಟೇಲ್‌ ಯಶಸ್ಸಿನ ನಂತರ ಡಾರ್ಲಿಂಗ್​ ಕೃಷ್ಣ, ಮಿಲನಾ ನಾಗರಾಜ್​ ಮದುವೆ ಕೂಡ ಆದರು. ಹಲವು ವರ್ಷದಿಂದ ಪ್ರೀತಿಸುತ್ತಿದ್ದ ಈ ಜೋಡಿ ನಿಜ ಜೀವನದಲ್ಲೂ ಸಪ್ತಪದಿ ತುಳಿದರು. ಇದೀಗ 'ಲವ್‌ ಮಾಕ್ಟೇಲ್‌ 2' ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಈಗಾಗಲೇ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಸಿಕ್ಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More