Home> Entertainment
Advertisement

OTT ಅಂಗಳದಲ್ಲಿ ಡೇರ್‌ಡೆವಿಲ್‌ ಮುಸ್ತಾಫಾ; ಸಿನಿಪ್ರಿಯರಿಗೆ ಭರ್ಜರಿ ಟ್ರೀಟ್‌

Dare Devil Mustafa : ಚಿತ್ರಮಂದಿಗಳಲ್ಲಿ ರಿಲೀಸ್‌ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಡೇರ್‌ ಡೆವಿಲ್‌ ಮುಸ್ತಾಫಾ ಸಿನಿಮಾ ಇದೀಗ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಕಳೆದ ಎರಡು ದಿನಗಳ ಹಿಂದೆ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ದೊರಕಿತ್ತು. 

OTT ಅಂಗಳದಲ್ಲಿ ಡೇರ್‌ಡೆವಿಲ್‌ ಮುಸ್ತಾಫಾ; ಸಿನಿಪ್ರಿಯರಿಗೆ ಭರ್ಜರಿ ಟ್ರೀಟ್‌

Dare Devil Mustafa streaming on OTT : ಮೇ 19ರಂದು ಭರ್ಜರಿಯಾಗಿ ರಿಲೀಸ್‌ ಆಗಿದ್ದ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧಾರಿತ ಸಿನಿಮಾ ಡೇರ್‌ ಡೆವಿಲ್‌ ಮುಸ್ತಾಫಾ. ಈ ಸಿನಿಮಾ ಮೇಕಿಂಗ್‌ ಮತ್ತು ಕಂಟೆಟ್‌ ಮೂಲಕವೇ ಎಲ್ಲರ ಮನಗೆದ್ದಿದೆ. ಕರ್ನಾಟಕ ಮಾತ್ರವಲ್ಲದೇ, ವಿದೇಶಗಳಲ್ಲೂ ಈ ಚಿತ್ರ ಹೆಸರು ಮಾಡಿದೆ. 
 

ಸಿನಿಮಾಗೆ ಎಲ್ಲ ಕಡೆಯಿಂದ ಸಿಕ್ಕ ಪ್ರತಿಕ್ರಿಯೆಯಿಂದ ಚಿತ್ರತಂಡ ಸಂಭ್ರಮದಲ್ಲಿತ್ತು. 25 ದಿನಗಳನ್ನು ಪೊರೈಸಿದ ಈ ಡೇರ್‌ ಡೆವಿಲ್‌ ಮುಸ್ತಫಾ ಸಿನಿಮಾ ಇದೀಗ ಒಟಿಟಿಗೆ ಪಾದಾರ್ಪಣೆ ಮಾಡಿದೆ. ಶಶಾಂಕ್‌ ಸೋಗಲ್‌ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ತನ್ನ ಹೊಸತನದ ಮೂಲಕವೇ ಎಲ್ಲರಿಗೂ ಹತ್ತಿರವಾಗಿತ್ತು. ಈ ಸಿನಿಮಾವನ್ನು ವಿಕ್ಷೀಸಿದ ಡಾಲಿ ಧನಂಜಯ್‌ ಸಹ ಈ ಚಿತ್ರಕ್ಕೆ ಸಾತ್‌ ನೀಡಿದ್ದರು.

ಇದನ್ನೂ ಓದಿ-ಪಸಂದಾಗಿದೆ "ಗರಡಿ" ಚಿತ್ರದ ಮೊದಲ ಹಾಡು

ಇದೀಗ ಡೇರ್‌ ಡೆವಿಲ್‌ ಮುಸ್ತಾಫಾ ಸಿನಿಮಾ ಅಮೆಜಾನ್‌ ಪ್ರೈಂ ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಈ ವಿಚಾರವನ್ನು ಸಿನಿಮಾ ತಂಡ ರಿವೀಲ್‌ ಮಾಡಿತ್ತು. ಈ ಕುರಿತು ಪ್ರೈಂ ಇಂಡಿಯಾ ಕೂಡಾ ತನ್ನ ಸೋಷಿಯಲ್‌ ಮಿಡಿಯಾದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಸಿನಿಮಾ ಮಾತ್ರವಲ್ಲದೇ ಇನ್ನೂ ಹಲವು ಸಿನಿಮಾಗಳ ಒಟಿಟಿ ಬಿಡುಗಡೆಯ ಬಗ್ಗೆ ತಿಳಿಸಿದೆ. 

ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೊರೈಸಿದ ಡೇರ್‌ ಡೆಲ್‌ ಮುಸ್ತಾಫಾ ಚಿತ್ರಕ್ಕೆ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. ಈ ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿನಾಯಿತಿ ಘೋಷಣೆ ಮಾಡಿದ್ದರು. ಇದು ಸಿನಿಪ್ರಿರಿಗೂ ಸಖತ್‌ ಖುಷಿ ನೀಡಿದೆ. ಚಿತ್ರತಂಡದ ಮನವಿಯನ್ನು ಸ್ವೀಕರಿಸಿದ್ದ ಸಿಎಂ, ಸಿನಿಮಾಗೆ ಟ್ಯಾಕ್ಸ್‌ ಫ್ರೀ ಘೋಷಣೆ ಮಾಡಿದ್ದರು.  ಈ ವಿಚಾರವನ್ನು ಸಿದ್ದರಾಮಯ್ಯ ಅವರು ಅಧಕೃತವಾಗಿ ತಮ್ಮ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ತಿಳಿಸಿದ್ದರು. 

ಇದನ್ನೂ ಓದಿ-ಹುಟ್ಟು ಹಬ್ಬದ ಸಂಭ್ರಮದಲ್ಲಿ ಪರಮಾತ್ಮನ ಬೆಡಗಿ; ಚಿತ್ರರಂಗಕ್ಕೆ ಕಮ್‌ ಬ್ಯಾಕ್‌ ಮಾಡ್ತಾರಾ ಜಾನು.? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Read More