Home> Entertainment
Advertisement

Head Bush Trailer: ಭೂಗತ ಜಗತ್ತನ್ನು ಅನಾವರಣಗೊಳಿಸುವ ಹೆಡ್ ಬುಶ್...!

ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಹೆಡ್ ಬುಶ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಟ್ರೈಲರ್ ನೋಡಿದ ಪ್ರೇಕ್ಷಕ ಪ್ರಭುವಂತೂ ಡಾನ್ ಜಯರಾಜ್ ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡಾಲಿ ನಟನೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

 Head Bush Trailer: ಭೂಗತ ಜಗತ್ತನ್ನು ಅನಾವರಣಗೊಳಿಸುವ ಹೆಡ್ ಬುಶ್...!

ದಾವಣಗೇರಿ: ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಹೆಡ್ ಬುಶ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಟ್ರೈಲರ್ ನೋಡಿದ ಪ್ರೇಕ್ಷಕ ಪ್ರಭುವಂತೂ ಡಾನ್ ಜಯರಾಜ್ ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡಾಲಿ ನಟನೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

70-80 ರ ದಶಕದಲ್ಲಿ ಬೆಂಗಳೂರಿನಲ್ಲಿದ್ದ ಭೂಗತ ಲೋಕವನ್ನು ಚಿತ್ರದ ಪ್ರಮುಖ ಕಥಾವಸ್ತುವನ್ನಾಗಿಟ್ಟುಕೊಂಡಿರುವ ಹೆಡ್ ಬುಶ್ ಚಿತ್ರದ ಈ ಟ್ರೈಲರ್ ನಲ್ಲಿ ಡಾಲಿ ಧನಂಜಯ್ ಡಾನ್ ಜಯರಾಜ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.

ಇದನ್ನೂ ಓದಿ : Mandya : ಸಕ್ಕರೆನಾಡು ಮಂಡ್ಯದಲ್ಲಿ ಬೆಳಕಿಗೆ ಬಂದ ಮತ್ತೊಂದು ಪೈಶಾಚಿಕ ಕೃತ್ಯ..!

ಈ ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರು ಕಥೆ,ಚಿತ್ರಕಥೆ ಸಂಭಾಷಣೆಯನ್ನು ಬರೆದಿದ್ದಾರೆ.ವಿಶೇಷವೆಂದರೆ ಅವರ ದಾದಾಗಿರಿಯಾ ಆ ದಿನಗಳು ಪುಸ್ತಕದಿಂದ ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ.ಇನ್ನೊಂದೆಡೆಗೆ ಇದೆ ಮೊದಲ ಬಾರಿಗೆ ಶೂನ್ಯ ಅವರು ಚಿತ್ರವೊಂದಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ : Pro Kabaddi 2022 Season 9 :ಪಿಂಕ್‌ ಪ್ಯಾಂಥರ್ಸ್‌, ದಬಾಂಗ್‌ ಡೆಲ್ಲಿ, ಬೆಂಗಾಲ್‌ ವಾರಿಯರ್ಸ್‌ಗೆ ಜಯ

ಚಿತ್ರದ ತಾರಾಗಣದಲ್ಲಿ ನಾಯಕಿಯಾಗಿ ಪಾಯಲ್ ರಜಪೂತ್, ಲೂಸ್‌ಮಾದ ಯೋಗಿ, ವಸಿಷ್ಠ ಸಿಂಹ, ವಿ.ರವಿಚಂದ್ರನ್, ಕ್ರೇಜಿಸ್ಟಾರ್‌ ರವಿಚಂದ್ರನ್‌, ಬಾಲು ನಾಗೇಂದ್ರ, ದೇವರಾಜ್‌, ಶೃತಿ ಹರಿಹರನ್‌, ರಘು ಮುಖರ್ಜಿ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರವು ಇದೆ ಅಕ್ಟೋಬರ್  21 ರಂದು ಹೆಡ್ ಬುಶ್ ಚಿತ್ರವು ರಾಜ್ಯಾದ್ಯಂತ ತೆರೆಕಾಣಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

 

Read More