Home> Entertainment
Advertisement

ಗಬ್ರು ಆಗಿ ಬದಲಾದ ಡಾಲಿ.. ರಗಡ್ ಲುಕ್‌ಗೆ ಫ್ಯಾನ್ಸ್‌ ಫಿದಾ

Uttarakanda Movie : ಡಾಲಿ ಧನಂಜಯ ಸ್ಯಾಂಡಲ್‌ವುಡ್‌ನ ಟ್ಯಾಲೆಂಟೆಡ್‌ ನಟರಲ್ಲಿ ಒಬ್ಬರು. ಡಾಲಿ ನಟನೆಗೆ ಅಭಿಮಾನಿಗಳು ಮನಸೋತಿದ್ದಾರೆ.

ಗಬ್ರು ಆಗಿ ಬದಲಾದ ಡಾಲಿ.. ರಗಡ್ ಲುಕ್‌ಗೆ ಫ್ಯಾನ್ಸ್‌ ಫಿದಾ

Uttarakanda Movie : ಡಾಲಿ ಧನಂಜಯ ಸ್ಯಾಂಡಲ್‌ವುಡ್‌ನ ಟ್ಯಾಲೆಂಟೆಡ್‌ ನಟರಲ್ಲಿ ಒಬ್ಬರು. ಡಾಲಿ ನಟನೆಗೆ ಅಭಿಮಾನಿಗಳು ಮನಸೋತಿದ್ದಾರೆ. ಹೊಸ ಹೊಸ ಅವತಾರಗಳಲ್ಲಿ ಫ್ಯಾನ್ಸ್‌ ಅನ್ನು ರಂಜಿಸುವುದರಲ್ಲಿ ಡಾಲಿ ಹಿಂದೆ ಬಿದ್ದಿಲ್ಲ. ಇದೀಗ ಮತ್ತೊಂದು ರಗಡ್‌ ಲುಕ್‌ನಲ್ಲಿ ಜನರ ಮನಗೆಲ್ಲಲು ಸಜ್ಜಾಗಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಗಬ್ರು ಹವಾ ಜೋರಾಗಿದೆ. ಆಗಸ್ಟ್ 22 ಕ್ಕೆ ಗಬ್ರು ಎಂಟ್ರಿ ಕೊಡ್ತಿದ್ದಾರೆ. ಗಬ್ರು ಅಂದ್ರೆ ಮತ್ಯಾರು ಅಲ್ಲ ಡಾಲಿ ಧನಂಜಯ. ಉತ್ತರಕಾಂಡ ಸಿನಿಮಾಗಾಗಿ ಧನಂಜಯ ಗಬ್ರು ಸತ್ಯನಾಗಿ ಬದಲಾಗಿದ್ದಾರೆ. ರೋಹಿತ್ ಪದಕಿ ಉತ್ತರಕಾಂಡ ಸಿನಿಮಾ ನಿರ್ದೇಶಿಸಿದ್ದಾರೆ.  

ಇದನ್ನೂ ಓದಿ: ಚಂದನ್ ಶೆಟ್ಟಿ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್‌ : ವರಮಹಾಲಕ್ಷ್ಮಿಹಬ್ಬಕ್ಕೆ ಸರ್‍ಪ್ರೈಸ್.!

ಧನಂಜಯ ಹುಟ್ಟುಹಬ್ಬಕ್ಕೂ ಮೊದಲೇ ಗಬ್ರು ಲುಕ್ ರಿವೀಲ್ ಆಗುತ್ತಿದೆ. ಉತ್ತರಕಾಂಡ ಸಿನಿಮಾಗಾಗಿ ರಗಡ್ ಲುಕ್‌ನಲ್ಲಿ ಧನಂಜಯ ಕಾಣಿಸಿಕೊಳ್ಳುತ್ತಿದ್ದಾರೆ.

ಆಗಸ್ಟ್ 22 ರಂದು ಸಂಜೆ 5.55 ಕ್ಕೆ ಗಬ್ರು ಜನರ ಮುಂದೆ ಬರಲಿದ್ದಾರೆ. ಆಗಸ್ಟ್ 23ಕ್ಕೆ ಧನಂಜಯ ಹುಟ್ಟುಹಬ್ಬ. ಬರ್ತಡೇ ಸ್ಪೆಷಲ್ ಆಗಿ ಗಬ್ರು ಪ್ರೇಕ್ಷಕರ ಮುಂದೆ ಎಂಟ್ರಿಕೊಡ್ತಿದ್ದಾನೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್  ನಿರ್ಮಾಣದ ಸಿನಿಮಾ ಇದಾಗಿದೆ. ಮೂರನೇ ಬಾರಿ ಹ್ಯಾಟ್ರಿಕ್ ಬಾರಿಸಲು ಡಾಲಿ, ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಸಿದ್ದರಾಗಿದ್ದಾರೆ.

ಇದನ್ನೂ ಓದಿ: ʼಹೃದಯವಿದು ಮೌನ, ನರಳುತಿದೆ ಪ್ರಾಣʼ..! ಖುಷಿ ಸಿನಿಮಾದ ಲವ್‌ ಫೆಲ್ಯೂರ್‌ ಸಾಂಗ್‌ ಔಟ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More