Home> Entertainment
Advertisement

Poonam Pandey: ಇಂಟರ್ನೆಟ್ ಸೆಲೆಬ್ರಿಟಿ ಪೂನಂ ಪಾಂಡೆಯ ಟಾಪ್ 5 ವಿವಾದಗಳು..!‌

́ಲಾಕ್ ಅಪ್' ರಿಯಾಲಿಟಿ ಶೋನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಮಾಡೆಲ್‌, ಇಂಟರ್ನೆಟ್‌ ಸೆಲೆಬ್ರಿಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. 32 ವರ್ಷದ ಬಾಲಿವುಡ್ ನಟಿಯ ಸಾವಿನ ಸುದ್ದಿ ಹೊರಬಿದ್ದ ನಂತರ ಹಲವಾರು ಸೆಲೆಬ್ರಿಟಿಗಳು ಆಘಾತ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ. ಪೂನಂ ಪಾಂಡೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದರು. ಬೋಲ್ಡ್ ಫೋಟೋಶೂಟ್‌ಗಳು ಮತ್ತು ವಿಡಿಯೋಗಳಿಂದ ಹೆಸರುವಾಸಿಯಾಗಿದ್ದ ಪೂನಂ ಪಾಂಡೆ, ಆಗಾಗ ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದರು. 

Poonam Pandey: ಇಂಟರ್ನೆಟ್ ಸೆಲೆಬ್ರಿಟಿ ಪೂನಂ ಪಾಂಡೆಯ ಟಾಪ್ 5 ವಿವಾದಗಳು..!‌

ನವದೆಹಲಿ: ́ಲಾಕ್ ಅಪ್' ರಿಯಾಲಿಟಿ ಶೋನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಮಾಡೆಲ್‌, ಇಂಟರ್ನೆಟ್‌ ಸೆಲೆಬ್ರಿಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. 32 ವರ್ಷದ ಬಾಲಿವುಡ್ ನಟಿಯ ಸಾವಿನ ಸುದ್ದಿ ಹೊರಬಿದ್ದ ನಂತರ ಹಲವಾರು ಸೆಲೆಬ್ರಿಟಿಗಳು ಆಘಾತ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ. ಪೂನಂ ಪಾಂಡೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದರು. ಬೋಲ್ಡ್ ಫೋಟೋಶೂಟ್‌ಗಳು ಮತ್ತು ವಿಡಿಯೋಗಳಿಂದ ಹೆಸರುವಾಸಿಯಾಗಿದ್ದ ಪೂನಂ ಪಾಂಡೆ, ಆಗಾಗ ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದರು. 

ಪೂನಂ ಪಾಂಡೆ ಮೈಮೇಲೆ ಎಳೆದುಕೊಂಡ ಟಾಪ್‌ ೫ ವಿವಾದಗಳು

ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆಂದಿದ್ದ ಪೂನಂ!: ಟೀಂ ಇಂಡಿಯಾ 2011ರ ಕ್ರಿಕೆಟ್ ವಿಶ್ವಕಪ್ ಗೆದ್ದರೆ ತಂಡದ ಕ್ರಿಕೆಟಿಗರ ಮುಂದೆ ತಾವು ಬೆತ್ತಲಾಗುತ್ತೇನೆ ಅಂತಾ ಪೂನಂ ಹೇಳಿದ್ದರು. ಅವರ ಈ ಹೇಳಿಕೆ ದೊಡ್ಡ ಸುದ್ದಿಯಾಗಿತ್ತು. 2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಸಹ ಜಯಸಿತ್ತು. ಬಿಸಿಸಿಐ ಹಾಗೂ ಪೂನಂ ಪೋಷಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ನಟಿ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದರು.

ಇದನ್ನೂ ಓದಿ: ಪೂನಂ ಪಾಂಡೆ ಸೇರಿದಂತೆ ಅತೀ ಚಿಕ್ಕ ವಯಸ್ಸಿನಲ್ಲೇ ಅಗಲಿದ ನಟಿಯರು ಇವರೇ.!

ವೆಬ್‌ಸೈಟ್‌ನಲ್ಲಿ ಅಶ್ಲೀಲ ವಿಡಿಯೋ ಅಪ್ಲೋಡ್: ಪೂನಂ ಪಾಂಡೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಶ್ಲೀಲ ವಿಡಿಯೋವನ್ನು ಪೋಸ್ಟ್ ಮಾಡಿದ್ದ ಆರೋಪಗಳನ್ನು ಎದುರಿಸಿದ್ದಳು. ಬಾತ್ರೂಮ್ ಸೀಕ್ರೆಟ್ಸ್ ಎಂಬ ಶೀರ್ಷಿಕೆಯಡಿ ವಿಡಿಯೋ ಹಂಚಿಕೊಂಡಿದ್ದಳು. ಆ ಬಳಿಕ ನಟಿ ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು.

ಗೂಗಲ್ ಪ್ಲೇ ಸ್ಟೋರ್‌ನಿಂದ ನಿರ್ಷೇಧ: 2019ರಲ್ಲಿ ಪೂನಂ ಪಾಂಡೆ ಅವರು ಮೊಬೈಲ್ ಅಪ್ಲಿಕೇಶನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸಿದ್ದರು. ಪರಿಣಾಮ ಗೂಗಲ್ ಪ್ಲೇ ಸ್ಟೋರ್‌ ನಟಿಯನ್ನು ಆ್ಯಪ್ ಬಳಕೆಯಿಂದ ನಿಷೇಧಿಸಿತ್ತು.

ಪ್ರಚೋದಕಾರಿ ವಿಷಯಗಳ ಪ್ರಸ್ತಾಪ: ನಟಿ ಪೂನಂ ಪಾಂಡೆ ತಮ್ಮ ಮಾದಕ ನೋಟ ಹಾಗೂ ಅರೆಬೆತ್ತಲೆಯಾಗಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಲ್‌ಚಲ್ ಎಬ್ಬಿಸುತ್ತಿದ್ದರು. ಹಲವು ರೀತಿಯ ಪ್ರಚೋದನಕಾರಿ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ನಟಿ ವಿವಾದ ಸೃಷ್ಟಿಸುತ್ತಿದ್ದಳು. ಪೂನಂ ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದರು.  

ಲಾಕ್‌ಡೌನ್ ಉಲ್ಲಂಘಿಸಿದ್ದಕ್ಕೆ ಬಂಧನ: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಪೂನಂ ಪಾಂಡೆ ವಿವಾದಕ್ಕೆ ಸಿಲುಕಿದ್ದರು. ಮಾಡೆಲ್ ಕಂ ನಟಿ ಪೂನಂ ತನ್ನ ಪತಿ ಸ್ಯಾಮ್ ಬಾಂಬೆ ಅವರೊಂದಿಗೆ ವಾಕಿಂಗ್ ಹೋಗಿದ್ದರು. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್‌ಕಾಗಿ ಮುಂಬೈ ಪೊಲೀಸರು ನಟಿಯನ್ನು ಬಂಧಿಸಿದ್ದರು.

ಇದನ್ನೂ ಓದಿ: ಸಹಾಯಕನಿಗೆ ಚಪ್ಪಲಿಯಿಂದ ಹೊಡೆದಿದ್ದಕ್ಕಾಗಿ ಕ್ಷಮೆಯಾಚಿಸಿದ ಖ್ಯಾತ ಗಾಯಕ..!

ಪತಿ ವಿರುದ್ಧವೇ ಕೇಸ್: ತನ್ನ ಪತಿ ಸ್ಯಾಮ್ ಬಾಂಬೆ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಟಿ ಪೂನಂ ಪಾಂಡೆ ಆರೋಪಿಸಿದ್ದರು. ಈಕೆಯ ದೂರಿದ ಆಧಾರದ ಮೇಲೆ ಪೊಲೀಸರು ಸ್ಯಾಮ್‌ನನ್ನು ಬಂಧಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More