Home> Entertainment
Advertisement

ಹಸೆಮಣೆ ಏರಿದ ಕನ್ನಡದ ಹಾಸ್ಯನಟ ನಾಗಭೂಷಣ: ಹುಡುಗಿ ಯಾರು ಗೊತ್ತೇ?

Comedian Nagabhushan Marriage: ಸ್ಯಾಂಡಲ್‌ವುಡ್‌ನ ಹಾಸ್ಯನಟ ನಾಗಭೂಷಣ್‌ ಇಂದು ತಮ್ಮ ಗೆಳತಿ ಪೂಜಾ ಪ್ರಕಾಶ್‌ ಜೊತೆಗೆ ಆಪ್ತರ ಸಮ್ಮುಖದಲ್ಲಿ  ಬೆಳಗಾವಿಯಲ್ಲಿ ಮದುವೆಯಾಗಿದ್ದಾರೆ. 
 

ಹಸೆಮಣೆ ಏರಿದ ಕನ್ನಡದ ಹಾಸ್ಯನಟ ನಾಗಭೂಷಣ: ಹುಡುಗಿ ಯಾರು ಗೊತ್ತೇ?

Nagabhushan And Pooja Prakash Marriage: ಚಂದನವನದ ಹಲವಾರು ಸಿನಿಮಾಗಳಲ್ಲಿ ಹಾಸ್ಯನಟ ಅಭಿನಯಿಸಿ ಕನ್ನಡಿಗರ ಮನಗೆದ್ದ ನಾಗಭೂಷಣ, ತನ್ನ ವಿಶಿಷ್ಟ ಮ್ಯಾನರಿಸಂ ಮೂಲಕವೇ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಡಾಲಿ ಧನಂಜಯ್ ನಿರ್ಮಿಸಿದ್ದ 'ಟಗರು ಪಲ್ಯ' ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಪಡೆದ ನಟ, ಇಂದು ತಮ್ಮ ಗೆಳತಿಯ ಜೊತೆ ವೈವಾಹಿಕ ಜೀವನಕ್ಕೆ ಹೆಜ್ಜೆ ಹಾಕಿದ್ದಾರೆ. 

ಹಾಸ್ಯನಟ ನಾಗಭೂಷಣ್‌, ಸದ್ಯ ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿರುವ ಮತ್ತೊಂದು ಸಿನಿಮಾ 'ವಿದ್ಯಾಪತಿ'ಗೆ ನಾಯಕನಾಗಿ ಆಯ್ಕೆ ಆಗಿದ್ದು, ಇದೇ ಖುಷಿಯಲ್ಲಿಯೇ ಸಪ್ತಪದಿ ತುಳಿದಿದ್ದಾರೆ. ನಾಗಭೂಷಣ್‌ ಜನವರಿ 28 ರಂದು ತಮ್ಮ ಗೆಳತಿ ಪೂಜಾ ಪ್ರಕಾಶ್ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಇದನ್ನೂ ಓದಿ: Aishwarya Rajanikanth: "ನನ್ನ ತಂದೆ ಸಂಘಿ ಅಲ್ಲ": ಅಪ್ಪನನ್ನು ಸಮರ್ಥಿಸಿಕೊಂಡ ರಜನಿ ಪುತ್ರಿ!

ಕನ್ನಡ ನಟ ನಾಗಭೂಷಣ್ ಹಾಗೂ ಪೂಜಾ ಪ್ರಕಾಶ್ ಇಬ್ಬರ ಮದುವೆ ಬೆಳಗಾವಿಯಲ್ಲಿ ನಡೆದಿದ್ದು, ಅಲ್ಲಿ ಡಾಲಿ ಧನಂಜಯ್ ಸೇರಿದಂತೆ ನಾಗಭೂಷಣ ಆಪ್ತರು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಬೆಳಗಾವಿಯ ಯಾವ ಭಾಗದಲ್ಲಿ ಮದುವೆ ನಡೆದಿದೆ ಎಂಬಿತ್ಯಾದಿ ವಿಷಯಗಳು ಹೊರಬೀಳಬೇಕಿದೆ. 

ನಾಗಭೂಷಣ ಅವರಂತೆ ಪೂಜಾ ಪ್ರಕಾಶ್ ಕೂಡ ಕಲಾವಿಯಾದರೂ, ಆದರೆ ಸಿನಿಮಾರಂಗದಲ್ಲಿ ಅಲ್ಲ. ಪೂಜಾ ಪ್ರಕಾಶ್ ಚಿತ್ರಕಲೆ ಹಾಗೂ ಗ್ರಾಫಿಕ್ಸ್ ಡಿಸೈನಿಂಗ್‌ನಲ್ಲಿ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ. ಇವರ ಕ್ಷೇತ್ರದಲ್ಲಿ ಯಶಸ್ಸು ಕಂಡಿರೋ ಪೂಜಾ ಪ್ರಕಾಶ್ ಇಂದು ಆಪ್ತರ ಸಮ್ಮುಖದಲ್ಲಿ ನಾಗಭೂಷಣ ಅವರೊಂದಿಗೆ ಜೀವನ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More