Home> Entertainment
Advertisement

Must Watch Video : ಗುಂಡಿಗೂ ಎದರದೆ ಗುರಿಯಿಟ್ಟವನ ಕಡೆ ನುಗ್ಗಿದ ಕಾಳಿಂಗ..!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನಿರ್ದಿಷ್ಟವಾಗಿ ಪ್ರಾಣಿಗಳ ವೀಡಿಯೊಗಳಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲವರು ಸಾಕುಪ್ರಾಣಿಗಳ ವೀಡಿಯೊಗಳನ್ನು ನೋಡುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ, ಕೆಲವರು ಕಾಡು ಪ್ರಾಣಿಗಳ ವೀಡಿಯೊಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. 

Must Watch Video : ಗುಂಡಿಗೂ ಎದರದೆ ಗುರಿಯಿಟ್ಟವನ ಕಡೆ ನುಗ್ಗಿದ ಕಾಳಿಂಗ..!

Cobra attack viral video : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನಿರ್ದಿಷ್ಟವಾಗಿ ಪ್ರಾಣಿಗಳ ವೀಡಿಯೊಗಳಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲವರು ಸಾಕುಪ್ರಾಣಿಗಳ ವೀಡಿಯೊಗಳನ್ನು ನೋಡುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ, ಕೆಲವರು ಕಾಡು ಪ್ರಾಣಿಗಳ ವೀಡಿಯೊಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. 

ಅದೇ ರೀತಿ ಹಾವುಗಳ ವಿಡಿಯೋಗಳನ್ನೂ ಕೂಡ ಲೈಕ್ ಮಾಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ವನ್ಯಜೀವಿಗಳ ಬಗ್ಗೆ ಹೆಚ್ಚು ತಿಳಿದಿಲ್ಲದ ಕಾರಣ ಅವು ಯಾವಾಗ ಮತ್ತು ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ತಿಳಿಯದ ಕಾರಣ ಕಾಡಿನ ಪ್ರಾಣಿಗಳ ವಿಡಿಯೋಗಳ ಬಗ್ಗೆ ಜನರು ಹೆಚ್ಚು ಆಸಕ್ತಿಹೊಂದಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿನ ಕೆಲವು ವಿಡಿಯೋಗಳು ನಮ್ಮನ್ನು ನಗಿಸಿದರೆ, ಕೆಲವು ನಮ್ಮನ್ನು ಯೋಚಿಸುವಂತೆ ಮಾಡುತ್ತದೆ, ಅಳುವಂತೆ ಮಾಡುವ ವಿಡಿಯೋಗಳು ಸಿಗುತ್ತವೆ.

ಇದನ್ನೂ ಓದಿ: BBK9 : ರೂಪೇಶ್‌ ಶೆಟ್ಟಿ ಗೆಲ್ಬೇಕು ಅಂತ ಕಣ್ಣೀರಿಟ್ಟ ಆರ್ಯವರ್ಧನ್‌ ಗುರೂಜಿ..!

 
ನಾಗರಹಾವುಗಳು ಹಾವುಗಳಲ್ಲಿ ಅತ್ಯಂತ ಅಪಾಯಕಾರಿ ಸರೀಸೃಪಗಳಾಗಿವೆ. ಹಾಗಾಗಿಯೇ ಹಾವಿನ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದೀಗ ವ್ಯಕ್ತಿಯೊಬ್ಬ ಹಾವಿಗೆ ಗುಂಡು ಹಾರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಈ ವಿಡಿಯೋವನ್ನು ಇನ್‌ಸ್ಟಂಟ್ ಕರ್ಮ ಎಂಬ ಟ್ಟಿಟರ್‌ ಖಾತೆಯಲ್ಲಿ ಶೇರ್ ಮಾಡಲಾಗಿದೆ. 

ವಿಡಿಯೋದಲ್ಲಿ ನಾಗರಹಾವಿನ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ಮಾಡುತ್ತಾನೆ. ಆದ್ರೆ ಹಾವು ಕದಲುವುದಿಲ್ಲ, ನಂತರ ಎರಡನೇ ಬಾರಿ ಗುಂಡು ಹಾರಿಸುತ್ತಾನೆ ಆಗಲೂ ಹಾವು ಎದೆಗುಂದದೆ ನಿಂತಿರುತ್ತದೆ. ಆದರೆ ಅವನು ಮೂರನೇ ಬಾರಿಗೆ ಗುಂಡು ಹಾರಿಸಿದಾಗ, ಹಾವು ಕೋಪಗೊಂಡು ಅವನ ಮೇಲೆ ದಾಳಿ ಮಾಡಲು ಧಾವಿಸುತ್ತದೆ. ಈ ವಿಡಿಯೋವನ್ನು ಈಗಾಗಲೇ ಸಾಕಷ್ಟು ಮಂದಿ ನೋಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More