Home> Entertainment
Advertisement

ಗುಡ್‌ ನ್ಯೂಸ್‌ : ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿವೇದಿತ-ಚಂದನ್‌ ಶೆಟ್ಟಿ..!

ಸೋಷಿಯಲ್‌ ಮೀಡಿಯಾ ಫೇಮ್‌, ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ನಿವೇದಿತಾ ಗೌಡ ತಾಯಿ ಆಗ್ತೀದಾರೆ. ಹೌದು ಈ ಮಾತನ್ನ ನಾವು ಹೇಳ್ತಿಲ್ಲ ಸ್ವತಃ ಚಂದನ್‌ ಶೆಟ್ಟಿ ಹೇಳಿದ್ದಾರೆ. ಈ ಕ್ಯೂಟ್‌ ಜೋಡಿ ಇತ್ತೀಚಿಗೆ ವಿಡಿಯೋ ಒಂದನ್ನು ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ  ಹಂಚಿಕೊಂಡಿತ್ತು. ಅದರಲ್ಲಿ ಚಂದನ್‌ ತಂದೆ ಆಗುತ್ತಿರುವ ವಿಚಾರವನ್ನು ರಿವೀಲ್‌ ಮಾಡಿದ್ದಾರೆ.

ಗುಡ್‌ ನ್ಯೂಸ್‌ : ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿವೇದಿತ-ಚಂದನ್‌ ಶೆಟ್ಟಿ..!

Niveditha Chandan Shetty : ಸೋಷಿಯಲ್‌ ಮೀಡಿಯಾ ಫೇಮ್‌, ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ನಿವೇದಿತಾ ಗೌಡ ತಾಯಿ ಆಗ್ತೀದಾರೆ. ಹೌದು ಈ ಮಾತನ್ನ ನಾವು ಹೇಳ್ತಿಲ್ಲ ಸ್ವತಃ ಚಂದನ್‌ ಶೆಟ್ಟಿ ಹೇಳಿದ್ದಾರೆ. ಈ ಕ್ಯೂಟ್‌ ಜೋಡಿ ಇತ್ತೀಚಿಗೆ ವಿಡಿಯೋ ಒಂದನ್ನು ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ  ಹಂಚಿಕೊಂಡಿತ್ತು. ಅದರಲ್ಲಿ ಚಂದನ್‌ ತಂದೆ ಆಗುತ್ತಿರುವ ವಿಚಾರವನ್ನು ರಿವೀಲ್‌ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ತಮ್ಮ ಫ್ಯಾನ್ಸ್‌ ತಲೆಗೆ ಹುಳ ಬಿಟ್ಟಿದಾರೆ. ಎನಪ್ಪಾ.. ಈ ಮ್ಯಾಟರ್‌ ಅಂತ ನೀವು ಜಾಸ್ತಿ ತಲೆಕೆಡಿಸಿಕೊಂಡಿದ್ರೆ, ಡೋಂಟ್‌ ವರಿ.. ನಾವು ಹೇಳೋ ಮ್ಯಾಟರ್‌ ಸ್ವಲ್ಪ ಕೂಲಾಗಿ ಕೇಳಿ.. ಎಲ್ಲವೂ ನಿಮ್ಗೆ ಅರ್ಥವಾಗುತ್ತದೆ. ಸದಾ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಜೋಡಿ ಮಸ್ತ್‌ ಮಸ್ತ್‌ ರೀಲ್ಸ್‌ ಮಾಡಿ ತಮ್ಮ ಫ್ಯಾನ್ಸ್‌ಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. 

ಇದನ್ನೂ ಓದಿ: IMDB ಟಾಪ್ 20ರಲ್ಲಿ ʼಕಬ್ಜʼಗೆ 7ನೇ ಸ್ಥಾನ : ಉಪ್ಪಿ-ಕಿಚ್ಚನ ಚಿತ್ರದ ಮೇಲೆ ಭಾರಿ ನಿರೀಕ್ಷೆ

ಇದೀಗ ಅಂತಹುದೇ ಒಂದು ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಚಂದನ್‌ ನಿವೇದಿತಾ ಪ್ರಗ್ನೆಂಟ್‌ ಆಗಿರುವ ವಿಚಾರವನ್ನು ಪರೋಕ್ಷವಾಗಿ ಹೇಳಿದ್ದಾರೆ. ಇದನ್ನು ಅರ್ಥಮಾಡಿಕೊಂಡ ನೆಟ್ಟಿಗರು ಇಬ್ಬರಿಗೂ ಶುಭಕೋರುತ್ತಿದ್ದಾರೆ. ಹಾಗಿದ್ರೆ ವಿಡಿಯೋದಲ್ಲಿ ಏನಿದೆ. ಅಷ್ಟಕ್ಕೂ ಈ ಕ್ಯೂಟ್‌ ಕಪಲ್ಸ್‌ ಏನ್‌ ಹೇಳಿದ್ರು ಅಂತ ಹೇಳೀವಿ ಕೇಳಿ. 

ವಿಡಿಯೋ ಸ್ಟಾರ್ಟಿಂಗ್‌, ಚಂದನ್‌ ನಿವೇದಿತಾ ಗೌಡಗೆ Fat ಮತ್ತು Her ಕೂಡಿದ್ರೆ ಏನಾಗುತ್ತೆ ಅಂತ ಕೇಳ್ತಾರೆ. ಆಗ ನಿವೇದಿತಾ ಪ್ಯಾಟರ್‌ ಅಂತಾರೆ. ಇನ್ನೊಮ್ಮೆ ಸರಿಯಾಗಿ ಹೇಳು ಅಂತ ಚಂದನ್‌ ಕೇಳಿದಾಗ, ಯೋಚಿಸಿ ನಾಚಿಕೊಂಡು ನಿವೇದಿತಾ ʼಫಾದರ್​ʼ ಅಂತಾರೆ. ಸಧ್ಯ ಈ ವಿಡಿಯೋ ನೋಡಿದ ನೆಟ್ಟಿಗರು ನಿವೇದಿತಾ ತಾಯಿ ಆಗಲಿದ್ದಾರೆ ಅಂತ ಕಾಮೆಂಟ್‌ ಮಾಡ್ತಿದ್ದಾರೆ. ಅಲ್ಲದೆ, ಎಲ್ಲರೂ ದಂಪತಿಗೆ ಅಭಿನಂದನೆ ತಿಳಿಸುತ್ತಿ​ದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More