Home> Entertainment
Advertisement

'ಯಜಮಾನ' ಟ್ರೈಲರ್​​​ ಬಿಡುಗಡೆ: ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಅಬ್ಬರ!

ಖಡಕ್ ಡೈಲಾಗ್, ಆಕ್ಷನ್​ ಮೂಲಕ ಅಬ್ಬರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಯಜಮಾನ' ಟ್ರೇಲರ್ ಬಿಡುಗಡೆ

'ಯಜಮಾನ' ಟ್ರೈಲರ್​​​ ಬಿಡುಗಡೆ: ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಅಬ್ಬರ!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಯಜಮಾನ ರಿಲೀಸ್‌ಗೂ ಮುನ್ನವೇ ಸಖತ್ ಹವಾ ಎಬ್ಬಿಸಿದೆ. ಡಿ ಬಾಸ್ ನ ಬಹುನಿರೀಕ್ಷೆಯ 'ಯಜಮಾನ' ಚಿತ್ರದ 2.46 ನಿಮಿಷಗಳ ಟ್ರೈಲರ್​​​ ಬಿಡುಗಡೆಯಾಗಿದೆ. 2.46 ನಿಮಿಷಗಳ ಟ್ರೈಲರ್​​ನಲ್ಲಿ ದರ್ಶನ್​ ಖಡಕ್ ಡೈಲಾಗ್, ಆಕ್ಷನ್​ ಮೂಲಕ ಅಬ್ಬರಿಸಿದ್ದಾರೆ. 

ಬಿಡಗಡೆಯಾದ ಕೆಲವೇ ಗಂಟೆಗಳಲ್ಲಿ 'ಅಸಂಖ್ಯಾತ ವ್ಯೂಸ್' ದಾಖಲಿಸಲಿರುವ ಯಜಮಾನ ಟ್ರೇಲರ್ ಬಗ್ಗೆ ಪ್ರೇಕ್ಷಕರು ಹಾಗೂ ದರ್ಶನ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲವಿದೆ. ಮಾಸ್​ ಪ್ರೇಕ್ಷಕರನ್ನು ಗಮನದಲ್ಲಿರಿಸಿ ಮಾಡಿದಂತಹ ಪಕ್ಕಾ ಫ್ಯಾಮಿಲಿ ಸಿನಿಮಾ ಎಂಬುದು ವಿಡಿಯೋ ತುಣುಕಿನಿಂದ ಬಹಿರಂಗವಾಗಿದೆ.

ಶೈಲಜಾ ನಾಗ್ ಮತ್ತು ಬಿ ಸುರೇಶ್ ಬಂಡವಾಳ ಹೂಡಿರುವ ಈ ಚಿತ್ರಕ್ಕೆ, ವಿ. ಹರಿಕೃಷ್ಣ ನಿರ್ದೇಶಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ 'ಯಜಮಾನ' ಸಿನಿಮಾದ ನಾಲ್ಕು ಹಾಡುಗಳು ಸೂಪರ್ ಹಿಟ್ ಆಗಿವೆ. ಶಿವನಂದಿ, ಒಂದು ಮುಂಜಾನೆ, ಬಸಣ್ಣಿ ಬಾ, ನಿಂತ ನೋಡು ಯಜಮಾನ ಈ ಎಲ್ಲ ಹಾಡುಗಳು ಯೂ ಟ್ಯೂಬ್‌ನಲ್ಲಿ ಭಾರೀ ಸೌಂಡ್ ಮಾಡುತ್ತಿವೆ. 

ಚಿತ್ರದ ಟ್ರೇಲರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ದರ್ಶನ್, ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ‘ಯಜಮಾನ’ ಟ್ರೈಲರ್ ಈಗ ನಿಮ್ಮ ಮಡಿಲಿಗೆ ಸೇರಿದೆ. ನೋಡಿ ಆಶೀರ್ವದಿಸಿ. ಈ ದಾಸ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಸದಾ ಚಿರಋಣಿ ಎಂದಿದ್ದಾರೆ.

Read More