Home> Entertainment
Advertisement

ಗಂಗೂಬಾಯಿ ಕಾಥಿಯಾವಾಡಿಯಲ್ಲಿ ಅಶ್ಲೀಲ ಚಿತ್ರೀಕರಣ ಆರೋಪ ; ಆಲಿಯಾ ಭಟ್, ಬನ್ಸಾಲಿ ವಿರುದ್ಧ ದೂರು

ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರ ಗಂಗೂಬಾಯಿ ಕಾಥಿಯಾವಾಡಿ ಚಿತ್ರಕ್ಕೆ ಕಾನೂನು ತೊಡಕು ಎದುರಾಗಿದೆ. ಚಿತ್ರದ ಶೀರ್ಷಿಕೆಯೇ ಸಂಜಯ್ ಲೀಲಾ ಬನ್ಸಾಲಿಗೆ ಮುಳುವಾಗಿದೆ. ಗಂಗೂಬಾಯಿ ಪುತ್ರ ಬಾಬೂಜಿ ರಾವ್ ಜೀ ಶಾ, ಇದೀಗ ಸಂಜಯ್ ಲೀಲಾ ಬನ್ಸಾಲಿ ಮತ್ತು ಚಿತ್ರದ ನಾಯಕಿ ಆಲಿಯಾ ಭಟ್ ವಿರುದ್ಧ ದೂರು ದಾಖಲಿಸಿದ್ದಾರೆ. 

ಗಂಗೂಬಾಯಿ ಕಾಥಿಯಾವಾಡಿಯಲ್ಲಿ ಅಶ್ಲೀಲ ಚಿತ್ರೀಕರಣ ಆರೋಪ ; ಆಲಿಯಾ ಭಟ್, ಬನ್ಸಾಲಿ ವಿರುದ್ಧ ದೂರು

ನವದೆಹಲಿ : ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ನಿರ್ದೇಶನದ ಚಿತ್ರ ಗಂಗೂಬಾಯಿ ಕಾಥಿಯಾವಾಡಿ (Gangubai Kathiawadi) ಚಿತ್ರಕ್ಕೆ ಕಾನೂನು ತೊಡಕು ಎದುರಾಗಿದೆ. ಗಂಗೂಬಾಯಿ ಕಾಥಿಯಾವಾಡಿ ಕಾಮಾಟಿಪುರದ ಮಹಿಳೆಯೊಬ್ಬರ ಜೀವನವನ್ನು ಆಧರಿಸಿದ ಚಿತ್ರ. ಹಾಗಾಗಿ ಈ ಚಿತ್ರಕ್ಕೆ ಅವರದ್ದೇ ಹೆಸರನ್ನು ಇಡಲಾಗಿದೆ. ಈಗ ಚಿತ್ರದ ಶೀರ್ಷಿಕೆಯೇ ಸಂಜಯ್ ಲೀಲಾ ಬನ್ಸಾಲಿಗೆ ಮುಳುವಾಗಿದೆ. ಗಂಗೂಬಾಯಿ ಪುತ್ರ ಬಾಬೂಜಿ ರಾವ್ ಜೀ ಶಾ, ಇದೀಗ ಸಂಜಯ್ ಲೀಲಾ ಬನ್ಸಾಲಿ ಮತ್ತು ಚಿತ್ರದ ನಾಯಕಿ ಆಲಿಯಾ ಭಟ್ ವಿರುದ್ಧ ದೂರು ದಾಖಲಿಸಿದ್ದಾರೆ. 

ಇದಲ್ಲದೆ, ದಿ ಮಾಫಿಯಾ ಕ್ವೀನ್ಸ್ ಆಫ್ ಮುಂಬಯಿ (The Mafia Queens Of Mumbai) ಪುಸ್ತಕದ ಲೇಖಕ ಹುಸೈನ್ ಜೈದಿ ವಿರುದ್ಧವೂ ದೂರು ನೀಡಲಾಗಿದೆ. ಗಂಗೂಬಾಯಿ ಕಾಥಿಯಾವಾಡಿ ಚಿತ್ರ ಈ ಪುಸ್ತಕದ ಕಥೆಯನ್ನು ಆಧರಿಸಿ ತೆಗೆಯಲಾಗಿದೆ. ಹಾಗಾಗಿ ಲೇಖಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಚಿತ್ರದ ಪ್ರೋಮೊ ಹೊರಬಂದಾಗಿನಿಂದ ಬಾಬೂಜಿ ರಾವ್ ಗೆ ಸ್ಥಳೀಯರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ. ಇಷ್ಟು ಮಾತ್ರವಲ್ಲದೆ, ಈ ಚಿತ್ರದಿಂದ ವೇಶ್ಯಾವಾಟಿಕೆಯ ಹಿನ್ನೆಲೆ ಹೊರ ಬಂದಿದ್ದು, ತಮ್ಮ ಸಂಬಂಧಿಕರಿಗೂ ಇದರಿಂದ ಮಾನಸಿಕ ಹಿಂಸೆಯುಂಟಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಜಯ್ ಲೀಲಾ ಬನ್ಸಾಲಿ, ಆಲಿಯಾ ಭಟ್, (Alia Bhat) ಲೇಖಕ ಹುಸೈನ್ ಜೈದಿ  ವಿರುದ್ಧ ದೂರು ದಾಖಲಿಸಲಾಗಿದೆ. 

ALSO READ : ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ Alia Bhat ಸಹೋದರಿಯ ಈ Video

ಸಿನೆಮಾದಲ್ಲಿ (Cinema)  ಮಾನಹಾನಿ ಮಾಡಿ ಮಹಿಳೆಯನ್ನು ಅಸಭ್ಯವಾಗಿ ಚಿತ್ರೀಕರಿಸಲಾಗಿದ್ದು, ಅಶ್ಲೀಲವಾಗಿ ಪ್ರಸಾರ  ಮಾಡಿರುವ ಅಂಶಗಳನ್ನು ಮುಂದಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆಯೂ ಚಿಂತಿಸಲಾಗುವುದು ಎಂದು, ಬಾಬೂಜಿ ರಾವ್ ವಕೀಲ ನರೇಂದ್ರ ದುಬೆ ಹೇಳಿದ್ದಾರೆ.

ಮಾಫಿಯಾ ಕ್ವೀನ್ಸ್ ಆಫ್ ಮುಂಬಯಿಯ ಕೆಲವೊಂದು ಅಂಶಗಳು ಮಾನಹಾನಿಯನ್ನು ಉಂಟುಮಾಡುತ್ತವೆ. ಇದರಲ್ಲಿರುವ ಕೆಲ ಅಂಶಗಳಿಂದ ಗೌಪ್ಯತೆ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಬಾಬೂಜಿ ರಾವ್ ತಮ್ಮ ಅಳಲು ತೋಡಿಕೊಂಡಿದ್ದಾರೆ. 

ALSO READ : ಅಲಿಯಾ ಭಟ್ ಜೊತೆಗಿನ ಡೇಟಿಂಗ್ ಬಗ್ಗೆ ರಣಬೀರ್ ಕಪೂರ್ ಹೇಳಿದ್ದೇನು ಗೊತ್ತೆ?

ಈ ದೂರಿಗೆ ಉತ್ತರಿಸಲು ಪ್ರತಿವಾದಿಗಳಿಗೆ ಜನವರಿ 7ರವರೆಗೆ ಸಮಯಾವಕಾಶ ನೀಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಗಂಗೂಬಾಯಿ ಕಾಥಿಯಾವಾಡಿ ಚಿತ್ರ, 2020ರ ಸೆ.11ರಂದು ತೆರೆ ಕಾಣಬೇಕಿತ್ತು. ಆದರೆ ಕರೋನಾ (COVID-19) ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿತ್ತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More