Home> Entertainment
Advertisement

Boycott Trend: ಇದನ್ನು ಮೊದಲೇ ಹೊಸಕಬೇಕಿತ್ತು ಎಂದ ಅರ್ಜುನ್ ಕಪೂರ್!

ಸ್ಟಾರ್ ನಟರಾದ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡ’ ಹಾಗೂ ಅಕ್ಷಯ್ ಕುಮಾರ್ ನಟನೆಯ ‘ರಕ್ಷಾ ಬಂಧನ್’ ಸಿನಿಮಾಗಳಿಗೆ ಬಾಯ್‌ಕಾಟ್ ಟ್ರೆಂಡ್ ಬಿಸಿ ಮುಟ್ಟಿಸಿದೆ.

Boycott Trend: ಇದನ್ನು ಮೊದಲೇ ಹೊಸಕಬೇಕಿತ್ತು ಎಂದ ಅರ್ಜುನ್ ಕಪೂರ್!

ನವದೆಹಲಿ: ಹಿಂದಿ ಚಲನಚಿತ್ರೋದ್ಯಮ ಇಂದು ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. Boycott Trendನಿಂದ ದೊಡ್ಡ ಬಜೆಟ್‍ನ ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ಮಕಾಡೆ ಮಲಗುತ್ತಿವೆ. ಅಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಮತ್ತು ಅಕ್ಷಯ್ ಕುಮಾರ್ ನಟನೆಯ ‘ರಕ್ಷಾ ಬಂಧನ’ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದೆ ಸೋತು ಸುಣ್ಣವಾಗಿವೆ.  

ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಗಿರುವ ಈ ಎರಡೂ ಚಿತ್ರಗಳು ಬಿಡುಗಡೆಗೂ ಮುನ್ನವೇ ಸಾಮಾಜಿಕ ಮಾಧ್ಯಮದಲ್ಲಿ ಬಹಿಷ್ಕಾರದ ಕರೆಗಳನ್ನು ಎದುರಿಸಿದವು. ಥಿಯೇಟರ್‍ಗೆ ಬಂದು ತಮ್ಮ ಚಿತ್ರಗಳನ್ನು ನೋಡುವಂತೆ ಈ ಸ್ಟಾರ್ ನಟರು ಮನವಿ ಮಾಡಿದರೂ ಪ್ರೇಕ್ಷಕ ಪ್ರಭು ಮಾತ್ರ ಕ್ಯಾರೆ ಅಂದಿಲ್ಲ. ದೊಡ್ಡ ದೊಡ್ಡ ಸ್ಟಾರ್‍ಗಳ ಚಿತ್ರಗಳೇ ಹೀನಾಯ ಸೋಲು ಕಾಣುತ್ತಿರುವುದು ಬಾಲಿವುಡ್ ಸಿನಿ ಇಂಡಸ್ಟ್ರಿಯ ಕಳವಳ ಹೆಚ್ಚಿಸಿದೆ.

ಇದನ್ನೂ ಓದಿ: Prabhas Marriage: ಪ್ರಭಾಸ್ ಮದುವೆ ಬಗ್ಗೆ ಶಾಕಿಂಗ್‌ ಭವಿಷ್ಯ ನುಡಿದ ಖ್ಯಾತ ಜೋತಿಷಿ!

ಬಾಕ್ಸ್ ಆಫೀಸ್‍ನಲ್ಲಿ ಬಾಲಿವುಡ್ ಚಿತ್ರಗಳು ಸೋಲು ಕಾಣುತ್ತಿರುವುದರ ಬಗ್ಗೆ ನಟ ಅರ್ಜುನ್ ಕಪೂರ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಾಯ್‌ಕಾಟ್ ಟ್ರೆಂಡ್ ಅತಿಯಾಯ್ತು, ಇದನ್ನು ಮೊದಲೇ ಹೊಸಕಬೇಕಿತ್ತು ಅಂತಾ ಅವರು ಹೇಳಿದ್ದಾರೆ. ಚಿತ್ರರಂಗಕ್ಕೆ ಅಡ್ಡಿಯಾಗಬಹುದಾದ ವಿವಿಧ ಕಾರಣಗಳ ಬಗ್ಗೆ ಮಾತನಾಡಿರುವ ಅವರು, ‘ನಾವು ಇಷ್ಟು ದಿನ ಮೌನವಾಗಿರುವ ಮೂಲಕ ತಪ್ಪು ಮಾಡಿದೆವು. ನಮ್ಮ ದೌರ್ಬಲ್ಯದಿಂದಲೇ ಇಂದು ನಮ್ಮ ಇಮೇಜ್ ಹಾಳಾಗುತ್ತಿದೆ’ ಎಂದು ಹೇಳಿದ್ದಾರೆ.

‘ನಾವು ಯಾವಾಗಲೂ ಕೆಸಲದ ಬಗ್ಗೆ ಗಮನ ಕೊಡುತ್ತೇವೆ. ನಮ್ಮ ಕೆಲಸವೇ ಮಾತನಾಡಲಿ ಎಂದು ಮೌನವಾಗಿದ್ದೇವೆ. ಇದೆಲ್ಲವೂ ಪರವಾಗಿಲ್ಲ, ನಾವು ಸಹಿಸಿಕೊಂಡಿದ್ದೇವೆ. 2020ರಿಂದ ಚಲನಚಿತ್ರೋದ್ಯಮಕ್ಕೆ ಅಂಟಿರುವ ಈ Boycott Trendನಿಂದ ನಮಗೆ ದೊಡ್ಡ ನಷ್ಟವಾಗಿದೆ. ಇದರ ಬಗ್ಗೆ ನಾವು ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಇದೀಗ ಜನರು ಅದಕ್ಕೆ ಒಗ್ಗಿಕೊಂಡಿದ್ದಾರೆ’ ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.

ಇದನ್ನೂ ಓದಿ: ರಕ್ಕಮ್ಮನಿಗೆ ಸಂಕಷ್ಟ: ಜಾಕ್ವೆಲಿನ್ ವಿರುದ್ಧ ಚಾರ್ಜ್ ಶೀಟ್ ಫೈಲ್, ಬಂಧನದ ಸುಳಿಯಲ್ಲಿ ನಟಿ?

‘ಈ Boycott Trendನ ಹ್ಯಾಶ್‌ಟ್ಯಾಗ್‌ಗಳ ಹಿಂದೆ ದೊಡ್ಡ ಅಜೆಂಡಾವಿದೆ. ನಾವು ಒಟ್ಟಾಗಿ ಇದನ್ನು ಎದುರಿಸಬೇಕಿದೆ. ಸಮಸ್ಯೆಯ ಮೂಲವೇನು ಅನ್ನೋದನ್ನು ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಹೀಗಾಗಿ ನಾವು ಒಗ್ಗೂಡಿ ಇದರ ಬಗ್ಗೆ ಅತ್ಯಂತ ನೈಜವಾದದ್ದನ್ನು ಮಾಡಬೇಕಾಗಿದೆ. ಏಕೆಂದರೆ ಏನು ಬರೆದರೂ, ಯಾವುದೇ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದರೂ ಅವು ವಾಸ್ತವದಿಂದ ದೂರವಿವೆ’ ಎಂದು ಅವರು ಹೇಳಿದ್ದಾರೆ.

‘ಬಾಲಿವುಡ್ ಇಂಡಸ್ಟ್ರಿ ಮಾಡುವ ಪ್ರತಿಯೊಂದು ಚಿತ್ರಕ್ಕೂ, ಪ್ರತಿಯೊಂದು ನಡೆಗೂ ಪ್ರತಿ ಮೂಲೆಯಲ್ಲೂ ವಿರೋಧವಿದೆ. 'ಉದ್ಯಮ ತನ್ನ ಮೊದಲಿನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಆಗಲಿ ಎಂದು ಕಣ್ಣು ಮುಚ್ಚಿ ಹೋಗಿದ್ದೇವೆ. ಥಿಯೇಟರ್‌ಗಳು ಮತ್ತೆ ತೆರೆದಾಗ, ಚಲನಚಿತ್ರಗಳು ಉತ್ತಮವಾಗಿ ಮೂಡಿಬಂದಾಗ ಎಲ್ಲವೂ ಚೆನ್ನಾಗಿರುತ್ತದೆ ಎಂದು ನಾವು ನಂಬಿದ್ದೇವೆ. 2022ರಲ್ಲಿ ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾ ಭರವಸೆಯ ಆರಂಭವನ್ನು ಹೊಂದಿರುವಂತೆ ತೋರಿದರೂ , ಆ ವೇಗವು ಉಳಿಯಲಿಲ್ಲ’ವೆಂದು ನಟ ಹೇಳಿದ್ದಾರೆ.

‘ಕಳೆದ 2 ತಿಂಗಳುಗಳು ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಏಕೆಂದರೆ ಬಹಳಷ್ಟು ಚಿತ್ರಗಳು ಉತ್ತಮ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿವೆ. ಹೀಗಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ಚಿತ್ರಗಳನ್ನು ನಾವು ಮಾಡಬೇಕಾಗಿದೆ. ಇದಕ್ಕೆ ಬಾಲಿವುಡ್‍ನ ಪ್ರತಿಯೊಬ್ಬರು ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದು ಅವರು ಹೇಳಿದ್ದಾರೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More