Home> Entertainment
Advertisement

Lok Sabha Election: ಇಂದು ಕಂಗನಾ ಭವಿಷ್ಯ ನಿರ್ಧಾರ, ಚುನಾವಣೆಯಲ್ಲಿ ಗೆದ್ದರೆ ಚಿತ್ರರಂಗ ತೊರೆಯುತ್ತಾರಾ ಬಾಲಿವುಡ್ ಕ್ವೀನ್?

Bollywood queen Kangana Ranaut: ಬಾಲಿವುಡ್‌ ಕ್ವೀನ್‌ ಕಂಗನಾ ರಣಾವತ್‌ ಲೋಕಸಭೆಯಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ.. ಇಂದು ಅವರ ಭವಿಷ್ಯ ನಿರ್ಧಾರವಾಗಲಿದ್ದು, ಇದೇ ವೇಳೆ ನಟಿ ಚುನಾವಣೆಯಲ್ಲಿ ಗೆದ್ದರೆ ಚಿತ್ರರಂಗಕ್ಕೆ ಗುಡ್‌ಬಾಯ್‌ ಹೇಳ್ತಾರಾ ಎನ್ನುವ ಚರ್ಚೆಯೊಂದು ನಡೆಯುತ್ತಿದೆ.. 

Lok Sabha Election: ಇಂದು ಕಂಗನಾ ಭವಿಷ್ಯ ನಿರ್ಧಾರ, ಚುನಾವಣೆಯಲ್ಲಿ ಗೆದ್ದರೆ ಚಿತ್ರರಂಗ ತೊರೆಯುತ್ತಾರಾ ಬಾಲಿವುಡ್ ಕ್ವೀನ್?

Kangana Ranaut: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಲೋಕಸಭೆ ಚುನಾವಣೆಯಲ್ಲಿ ಮಂಡಿಯಿಂದ ಸ್ಪರ್ಧಿಸಿದ್ದಾರೆ. ರಾಜಕೀಯದಲ್ಲಿ ಕಂಗನಾ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಕಂಗನಾ ರಣಾವತ್ ಬಾಲಿವುಡ್ ರಾಣಿಯೋ ಅಥವಾ ರಾಜಕೀಯ ರಾಣಿಯೋ ಎಂಬುದು ತಿಳಿಯಲಿದೆ. ಕಂಗನಾಗೆ ಗೆಲ್ಲಲೇಬೇಕೆಂಬ ತುಸು ಒತ್ತಡವಿದೆ.. ಅಲ್ಲದೇ ಇತ್ತೀಚೆಗೆ ನಟಿ ತಾನು ಚುನಾವಣೆಯಲ್ಲಿ ಗೆದ್ದರೆ ಬಾಲಿವುಡ್ ಇಂಡಸ್ಟ್ರಿ ತೊರೆಯುವ ಬಗ್ಗೆ ಮಾತನಾಡಿದ್ದರು.

 ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಚುನಾವಣಾ ಪ್ರಚಾರವನ್ನು ಅತ್ಯಂತ ಉತ್ಸಾಹದಿಂದ ಮಾಡಿದರು. ಚುನಾವಣಾ ಪ್ರಚಾರದ ವೇಳೆ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ರಾಜಕೀಯದ ಬಗ್ಗೆ ಸಾಕಷ್ಟು ಹೇಳಿದ್ದರು.  

ಇದನ್ನೂ ಓದಿ-Varun Dhawan: ಮುದ್ದಾದ ಹೆಣ್ಣು ಮಗುವಿಗೆ ತಂದೆಯಾದ ಖ್ಯಾತ ಬಾಲಿವುಡ್‌ ಸ್ಟಾರ್‌!   

 "ನಾನು ನಟಿಸುತ್ತೇನೆ ಮತ್ತು ನಿರ್ದೇಶಿಸುತ್ತೇನೆ ಆದರೆ ರಾಜಕೀಯದಲ್ಲಿ ಜನರು ಇಷ್ಟಪಟ್ಟರೆ ಅದೇ ಕೆಲಸ ಮಾಡುತ್ತೇನೆ.. ರಾಜಕೀಯದಲ್ಲಿ ನನ್ನ ಸಾಮರ್ಥ್ಯ ಕಂಡು ಜನ ಮೆಚ್ಚಿಕೊಂಡರೆ ನಾನು ಅದನ್ನೇ ಮಾಡುತ್ತೇನೆ ಎಂದು" ಕಂಗನಾ ಹೇಳಿದ್ದಾರೆ. 

ಕಂಗನಾ 2006 ರಲ್ಲಿ 'ಗ್ಯಾಂಗ್‌ಸ್ಟರ್' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.. ನಟಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಚಲನಚಿತ್ರಗಳನ್ನು ಮಾಡಿದ ಇವರು ಮೊದಲ ಸಿನಿಮಾ ಗ್ಯಾಂಗ್‌ಸ್ಟರ್ಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಸಹ ಪಡೆದರು. ಹೀಗಿರುವಾಗ ಚುನಾವಣೆಯಲ್ಲಿ ಗೆದ್ದು ರಾಜಕೀಯದ ರಾಣಿಯಾಗುವರೇ ಎಂಬ ಪ್ರಶ್ನೆ ಮೂಡುತ್ತಿದೆ.. 

ಇದನ್ನೂ ಓದಿ-ರೇವ್ ಪಾರ್ಟಿ ಕೇಸ್ ನಲ್ಲಿ ನಟಿ ಹೇಮಾಗೆ ಬಿಗ್ ಶಾಕ್..!     

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 
 

 

Read More