Home> Entertainment
Advertisement

ನಾನಾವತಿ ಆಸ್ಪತ್ರೆಯಿಂದ ಅಮಿತಾಬ್ ಬಚ್ಚನ್ ಡಿಸ್ಚಾರ್ಜ್

ರೂಟೀನ್ ಚೆಕ್-ಅಪ್ ಗಾಗಿ ಅಮಿತಾಬ್ ಬಚ್ಚನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿರುವ ಕಾರಣ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾನಾವತಿ ಆಸ್ಪತ್ರೆಯಿಂದ ಅಮಿತಾಬ್ ಬಚ್ಚನ್ ಡಿಸ್ಚಾರ್ಜ್

ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಯಿಂದ ಶುಕ್ರವಾರ ರಾತ್ರಿ ಡಿಸ್ಚಾರ್ಜ್ ಮಾಡಲಾಗಿದೆ.

ಹಿರಿಯ ನಟನನ್ನು ಮಂಗಳವಾರದಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಗುರುವಾರದಿಂದ ಹಲವಾರು ತಪಾಸಣೆ ನಡೆಸಲಾಗುತ್ತಿತ್ತು. ತಪಾಸಣೆಗಳು ಮುಗಿದ ಬಳಿಕ ಬಿಗ್ ಬಿ ಅವರನ್ನು ಶುಕ್ರವಾರ ಡಿಸ್ಚಾರ್ಜ್ ಮಾಡಲಾಯಿತು ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

ಹಿರಿಯ ನಟನನ್ನು ರೂಟೀನ್ ಚೆಕ್-ಅಪ್ ಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿರುವ ಕಾರಣ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಗ್ ಬಿ ಮಂಗಳವಾರ "ಕೌನ್ ಬನೇಗಾ ಕ್ರೊರೆಪತಿ" (ಕೆಬಿಸಿ) ರ ರಸಪ್ರಶ್ನೆ ಕಾರ್ಯಕ್ರಮದ ಶೂಟಿಂಗ್ ಪುನರಾರಂಭಿಸುವ ನಿರೀಕ್ಷೆಯಿದೆ. 

ಬಾಲಿವುಡ್ ಮೇರು ನಟ ಅಮಿತಾ ಬಚ್ಚನ್ ಮುಂದಿನ ದಿನಗಳಲ್ಲಿ "ಬ್ರಹ್ಮಾಸ್ತ್ರ" ಮತ್ತು "ಗುಲಾಬೊ ಸೀತಾಬೊ" ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read More